CWG 2022: ಆಫ್ರಿಕಾ ವಿರುದ್ಧ ರೋಚಕ ಜಯ: ಫೈನಲ್​ಗೆ ಲಗ್ಗೆಯಿಟ್ಟ ಭಾರತ ಪುರುಷರ ಹಾಕಿ ತಂಡ | Indian mens hockey team beat South Africa 3 2 to book their place in the final in CWG 2022


India vs South Africa, CWG 2022 Men’s Hockey: ಭಾರತ ಪುರುಷರ ಹಾಕಿ ತಂಡ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ರೋಚಕ ಜಯ ಸಾಧಿಸಿತು.

ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ (Commonwealth Games 2022) ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಭಾರತ ಪುರುಷರ ಹಾಕಿ ತಂಡ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು (India vs South Africa) 3-2 ಗೋಲುಗಳ ಅಂತರದಿಂದ ಸೋಲಿಸಿ ರೋಚಕ ಜಯ ಸಾಧಿಸಿತು. ಆರಂಭದಿಂದಲೂ ಸಾಕಷ್ಟು ರೋಚಕತೆ ಸೃಷ್ಟಿಸಿದ ಪಂದ್ಯದ ಮೊದಲ ಕ್ವಾರ್ಟರ್​ನಲ್ಲಿ ಉಭಯ ತಂಡಗಳಿಗೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಎರಡನೇ ಕ್ವಾರ್ಟರ್‌ ನಲ್ಲಿ ಭಾರತ ಎರಡು ಗೋಲು ಗಳಿಸಿತು. ಅಭಿಷೇಕ್ ಅವರು ಭಾರತದ ಖಾತೆ ತೆರೆದರೆ, ಮನದೀಪ್ ಸಿಂಗ್ (Mandeep Singh) ಏಕಾಂಗಿ ಸಾಹಸದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು. ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತ ಮುನ್ನಡೆ ಕಾಯ್ದುಕೊಂಡಿತು. ಪಂದ್ಯದ ಕೊನೆಯ ವೇಳೆಗೆ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದವು. ಕೊನೆ ಹಂತದಲ್ಲಿ ಆಫ್ರಿಕಾವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಭಾರತ ಜಯ ಸಾಧಿಸಿ ಫೈನಲ್​ಗೆ ಪ್ರವೇಸಿಸಿದೆ.

ಭಾರತ ಪುರುಷರ ಹಾಕಿ ತಂಡ ಫೈನಲ್‍ನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ವಿಜೇತ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‍ನಲ್ಲಿ ಸೋತ ತಂಡಗಳು ಕಂಚಿನ ಪದಕಕ್ಕಾಗಿ ಸೆಣೆಸಲಿವೆ. ಇದೀಗ ಭಾರತ ಒಟ್ಟು 40 ಪದಕವನ್ನು ಬಾಜಿಕೊಂಡಿದ್ದು 13 ಚಿನ್ನ, 11 ಬೆಳ್ಳಿ ಮತ್ತು 16 ಕಂಚಿನ ಪದಕ ಗೆದ್ದುಕೊಂಡಿದೆ.

ಮಹಿಳಾ ಹಾಕಿ ತಂಡಕ್ಕೆ ಸೋಲು:

ಭಾರತ ಮಹಿಳಾ ಹಾಕಿ ತಂಡದವರು ಕಾಮನ್‌ವೆಲ್ತ್ ಕೂಟದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ವೀರೋಚಿತ ಸೋಲು ಅನುಭವಿಸಿದರು. ರೋಚಕ ಪಂದ್ಯದಲ್ಲಿ ಸವಿತಾ ಪೂನಿಯಾ ಬಳಗ ಪೆನಾಲ್ಟಿ ಶೂಟೌಟ್‌ನಲ್ಲಿ 0-3 ರಲ್ಲಿ ಪರಾಭವಗೊಂಡಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ಅದೃಷ್ಟ ಕೈಕೊಟ್ಟಿತು. ಲಾಲ್‌ರೆಮ್ಸಿಯಾಮಿ, ನೇಹಾ ಗೋಯಲ್‌ ಮತ್ತು ನವನೀತ್‌ ಕೌರ್‌ ಅವರು ಮೊದಲ ಮೂರು ಪ್ರಯತ್ನಗಳಲ್ಲಿ ಗೋಲು ಗಳಿಸಲು ವಿಫಲರಾದರು. ಕಂಚಿನ ಪದಕಕ್ಕಾಗಿ ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್‌ನ ಸವಾಲು ಎದುರಿಸಲಿದೆ.

ಭವಿನಾ ಪಟೇಲ್​ಗೆ ಚಿನ್ನ:

TV9 Kannada


Leave a Reply

Your email address will not be published. Required fields are marked *