CWG 2022: ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಸತತ ಮೂರನೇ ಬಾರಿಗೆ ಚಿನ್ನ ಗೆದ್ದ ಬಜರಂಗ್ ಪುನಿಯಾ..! | CWG 2022 Bajrang Punia wins gold won gold for the second time in a row


CWG 2022: ಫೈನಲ್‌ನಲ್ಲಿ ಕೆನಡಾದ ಲಚ್ನಾಲ್ ಮೆಕ್‌ನೀಲ್ ಅವರನ್ನು 9-2 ರಿಂದ ಸೋಲಿಸಿ ಬಜರಂಗ್ ಚಿನ್ನದ ಪದಕ ಗೆದ್ದರು. ಬಜರಂಗ್ ಪುನಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಪದಕ ಗೆದ್ದರು.

ಶುಕ್ರವಾರ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games) ಪುರುಷರ 62 ಕೆಜಿ ತೂಕ ವಿಭಾಗದಲ್ಲಿ ಭಾರತದ ಹಿರಿಯ ಕುಸ್ತಿಪಟು ಬಜರಂಗ್ ಪೂನಿಯಾ (Bajrang Punia) ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಕೆನಡಾದ ಲಚ್ನಾಲ್ ಮೆಕ್‌ನೀಲ್ ಅವರನ್ನು 9-2 ರಿಂದ ಸೋಲಿಸಿ ಬಜರಂಗ್ ಚಿನ್ನದ ಪದಕ ಗೆದ್ದರು. ಬಜರಂಗ್ ಪುನಿಯಾ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಪದಕ ಗೆದ್ದರು. ಕಳೆದ ಬಾರಿಯೂ ಅವರು ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು. ಈಗ ಅವರು ಅದೇ ಚಿನ್ನದ ಯಶಸ್ಸನ್ನು ಪುನರಾವರ್ತಿಸಿದರು. ಆದರೆ ಬಜರಂಗ್ ಗ್ಲಾಸ್ಗೋದಲ್ಲಿ ಚಿನ್ನ ಗೆಲ್ಲುವ ಅವಕಾಶವನ್ನು ಕಳೆದುಕೊಂಡು 2014ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ಆರಂಭದಿಂದಲೂ ಪ್ರಾಬಲ್ಯ ಮೆರೆದ ಭಜರಂಗ್ ಕೆನಡಾದ ಕುಸ್ತಿಪಟುವಿಗೆ ಯಾವುದೇ ಅವಕಾಶ ನೀಡಲಿಲ್ಲ. ಮೊದಲ ಸುತ್ತಿನಲ್ಲಿ, ಅವರು 1-0 ಮುನ್ನಡೆ ಸಾಧಿಸಿದರು, ನಂತರ ಮೂರು ಅಂಕಗಳನ್ನು ಗಳಿಸುವ ಮಾಡುವ ಮೂಲಕ ಸ್ಕೋರ್ 4-0 ಮಾಡಿದರು.

ಮೆಕ್‌ನೀಲ್ ಅವರು ಎರಡನೇ ಸುತ್ತಿನಲ್ಲಿ ಬಂದ ತಕ್ಷಣ ಆಕ್ರಮಣಕಾರಿ ಆಟ ಪ್ರದರ್ಶಿಸಿದರು ಮತ್ತು ಬಜರಂಗ್ ಅವರನ್ನು ಅಂಗಾತ ಮಾಡುವ ಮೂಲಕ ಎರಡು ಪಾಯಿಂಟ್ ಪಡೆದರು. ಆದಾಗ್ಯೂ, ಬಜರಂಗ್ ಎರಡು ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾದರು, ಇದು ಸ್ಕೋರ್ ಅನ್ನು 6-2 ಮಾಡಿತು ಮತ್ತು ಬಜರಂಗ್ ಇಲ್ಲಿಂದ ಪ್ರಾಬಲ್ಯವನ್ನು ಮುಂದುವರೆಸಿದರು. ಬಜರಂಗ್ ನಂತರ ಮೆಕ್‌ನೀಲ್‌ನನ್ನು ಹೊರಹಾಕಿ ಮತ್ತೊಂದು ಪಾಯಿಂಟ್ ಪಡೆದರು. ಇಲ್ಲಿ ಸ್ಕೋರ್ 7-2 ಆಗಿತ್ತು. ಇದರ ನಂತರ, ಬಜರಂಗ್ ಟೇಕ್‌ಡೌನ್‌ನಿಂದ ಇನ್ನೂ ಎರಡು ಅಂಕಗಳನ್ನು ಪಡೆದರು ಬಳಿಕ ಸ್ಕೋರ್ 9-2 ಆಯಿತು. ಇಲ್ಲಿಂದ ಕೆನಡಾದ ಆಟಗಾರನಿಗೆ ಪುನರಾಗಮನದ ಅವಕಾಶ ಮುಗಿದಿತ್ತು.

ಕಾಮನ್‌ವೆಲ್ತ್ ಪ್ರಯಾಣ ಹೀಗಿತ್ತು

ಬಜರಂಗ್ ಇಂಗ್ಲೆಂಡ್‌ನ ಜಾರ್ಜ್ ರಾಮ್ ವಿರುದ್ಧ 10-0 ಅಂತರದ ಗೆಲುವು ಸಾಧಿಸುವುದರೊಂದಿಗೆ ಫೈನಲ್‌ಗೆ ಪ್ರವೇಶಿಸಿದರು. ಬಜರಂಗ್ ಒಲಿಂಪಿಕ್ ಕಂಚಿನ ಪದಕ ವಿಜೇತ ಮಾರಿಷಸ್‌ನ ಜೀನ್-ಗುಲಿಯಾನ್ ಜೋರಿಸ್ ಬ್ಯಾಂಡೊ ಅವರನ್ನು ಕೇವಲ ಒಂದು ನಿಮಿಷದಲ್ಲಿ ಸೋಲಿಸಿ ಸೆಮಿಫೈನಲ್ ತಲುಪಿದರು. ಕ್ವಾರ್ಟರ್ ಫೈನಲ್ ತಲುಪಲು ಅವರಿಗೆ ಎರಡು ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಂಡಿತು. ಅವರು ಆರಂಭಿಕ ಸುತ್ತಿನಲ್ಲಿ ನೌರುನ ಲೋವ್ ಬಿಂಗ್‌ಹ್ಯಾಮ್ ಅವರನ್ನು ಸೋಲಿಸುವ ಮೂಲಕ ಸುಲಭ ಜಯ ದಾಖಲಿಸಿದರು. ಬಜರಂಗ್ ತನ್ನ ಎದುರಾಳಿಯನ್ನು ಅರ್ಥಮಾಡಿಕೊಳ್ಳಲು ಒಂದು ನಿಮಿಷವನ್ನು ತೆಗೆದುಕೊಂಡರು. ಬಳಿಕ ಭಾರತೀಯ ಕುಸ್ತಿಪಟು ಸುಲಭವಾಗಿ ಪಂದ್ಯ ಗೆದ್ದರು.

TV9 Kannada


Leave a Reply

Your email address will not be published. Required fields are marked *