Tejaswin Shankar: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುರುಷರ ಹೈ ಜಂಪ್ನಲ್ಲಿ ಭಾರತದ ತೇಜಸ್ವಿನ್ ಶಂಕರ್ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಶಂಕರ್ 2.22 ಮೀಟರ್ ಜಿಗಿದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

Tejaswin Shankar
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022 ) ಭಾರತದ ಶಕ್ತಿ ಪ್ರದರ್ಶನ ಮುಂದುವರೆದಿದೆ. ಇದೀಗ ಪುರುಷರ ಹೈ ಜಂಪ್ನಲ್ಲಿ ಭಾರತದ ತೇಜಸ್ವಿನ್ ಶಂಕರ್ (Tejaswin Shankar) ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಶಂಕರ್ 2.22 ಮೀಟರ್ ಜಿಗಿದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ವಿಶೇಷ ಎಂದರೆ ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಪುರುಷರ ಹೈ ಜಂಪ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಇದಾಗಿದೆ. ತನ್ನ ಮೊದಲ ಪ್ರಯತ್ನದಲ್ಲಿ 2.10 ಮೀಟರ್ ಜಿಗಿದ ಶಂಕರ್ ಉತ್ತಮ ಆರಂಭ ಕಂಡರರು. ಬಹಮಾಸ್ನ ಡೊನಾಲ್ಡ್ ಥೋಮಸ್ (Donald Thomas) ಕೂಡ 2.22 ಮೀ. ಜಿಗಿದು ಶಂಕರ್ ಜೊತೆ ಸಮಬಲ ಸಾಧಿಸಿದರು. ಆದರೆ, ಭಾರತದ ಅಥ್ಲೀಟ್ ಕೆಲ ಫೌಲ್ಗಳನ್ನು ಮಾಡಿದ ಕಾರಣ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಈ ಮೂಲಕ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕ ಸಂಖ್ಯೆ 18ಕ್ಕೇರಿದೆ. ಇದುವರೆಗೆ ಐದು ಚಿನ್ನ, 6 ಬೆಳ್ಳಿ ಮತ್ತು 7 ಕಂಚಿನ ಪದಕ ಭಾರತ ಬಾಜಿಕೊಂಡಿದೆ.