CWG 2022: ಕಾಮನ್​ವೆಲ್ಸ್​ ಗೇಮ್ಸ್ ಪದಕ ವಿಜೇತರನ್ನು ನಗದು ಬಹುಮಾನದೊಂದಿಗೆ ಗೌರವಿಸಿದ ಐಒಎ | IOA Felicitates 2022 Commonwealth Games Medal Winners with Cash Awards


CWG 2022: ಚಿನ್ನದ ಪದಕ ವಿಜೇತರಿಗೆ 20 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 10 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಾದ 23 ಆಟಗಾರರು ಅಥವಾ ತಂಡಗಳಿಗೆ 7.5 ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸಲಾಯಿತು.

ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರಲ್ಲಿ ಅದ್ಬುತ ಪ್ರದರ್ಶನ ತೊರಿ ಭಾರತಕ್ಕೆ 66 ಪದಕಗಳನ್ನು ಗೆಲ್ಲುವಲ್ಲಿ ಭಾರತದ ಸ್ಪರ್ಧಿಗಳು ಯಶಸ್ವಿಯಾಗಿದ್ದರು. ಹೀಗಾಗಿ ಕಾಮನ್‌ವೆಲ್ತ್ ಗೇಮ್ಸ್​ನಲ್ಲಿ ಭಾರತದ ಹಿರಿಮೆಯನ್ನು ಹೆಚ್ಚಿಸಿದ ಪದಕ ವಿಜೇತರನ್ನು ಆಯಾ ರಾಜ್ಯಗಳಲ್ಲಿ ಸನ್ಮಾನಿಸಲಾಗುತ್ತಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕೂಡ ವಿಜೇತರನ್ನು ಭೇಟಿ ಮಾಡಿ ಅವರ ಸಾಧನೆಯನ್ನು ಶ್ಲಾಘಿಸಿದರು. ಇದೀಗ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(Indian Olympic Association) ಎಲ್ಲಾ ಪದಕ ವಿಜೇತರಿಗೆ ಸನ್ಮಾನದ ಜೊತೆಗೆ ನಗದು ಬಹುಮಾನವನ್ನು ನೀಡಿ ಗೌರವಿಸಿದೆ.

22 ಚಿನ್ನ ಸೇರಿದಂತೆ 61 ಪದಕಗಳು

ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 29 ರಿಂದ ಆಗಸ್ಟ್ 8 ರವರೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಈ ಬಾರಿ ಒಟ್ಟು 61 ಪದಕಗಳನ್ನು ಗೆದ್ದುಕೊಂಡಿತು.ಇದರಲ್ಲಿ 22 ಚಿನ್ನದ ಪದಕಗಳು ದೇಶದ ಬ್ಯಾಗ್‌ನಲ್ಲಿ ಬಂದಿದ್ದು, 16 ಬೆಳ್ಳಿ ಮತ್ತು 23 ಕಂಚಿನ ಪದಕಗಳನ್ನು ಸಹ ಭಾರತೀಯ ಆಟಗಾರರು ಗೆದ್ದಿದ್ದಾರೆ. ಭಾರತವು ಕುಸ್ತಿಯಲ್ಲಿ ಗರಿಷ್ಠ 6 ಚಿನ್ನದ ಪದಕಗಳನ್ನು ಪಡೆದರೆ, ಅಥ್ಲೆಟಿಕ್ಸ್ ಮತ್ತು ಲಾನ್ ಬಾಲ್‌ಗಳಂತಹ ಕ್ರೀಡೆಗಳಲ್ಲಿಯೂ ಚಿನ್ನದ ಯಶಸ್ಸನ್ನು ಸಾಧಿಸಿತು.

ಚಿನ್ನದ ಪದಕ ವಿಜೇತರಿಗೆ ತಲಾ 20 ಲಕ್ಷ ರೂ. ಬಹುಮಾನ

ಶನಿವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಐಒಎ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ ಪದಕ ವಿಜೇತರೆಲ್ಲರೂ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ಐಒಎ ಹಂಗಾಮಿ ಅಧ್ಯಕ್ಷ ಅನಿಲ್ ಖನ್ನಾ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಿದರು. ಇದರಲ್ಲಿ ಚಿನ್ನದ ಪದಕ ವಿಜೇತರಿಗೆ 20 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 10 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಾದ 23 ಆಟಗಾರರು ಅಥವಾ ತಂಡಗಳಿಗೆ 7.5 ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸಲಾಯಿತು.

ಪದಕ ವಿಜೇತರನ್ನು ಭೇಟಿ ಮಾಡಿದ್ದ ಪ್ರಧಾನಿ ಮೋದಿ

TV9 Kannada


Leave a Reply

Your email address will not be published. Required fields are marked *