CWG 2022: ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ; 57 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ರವಿ ದಹಿಯಾ | CWG 2022 Ravi Dahiya shines wins gold medal


CWG 2022: ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಕಾಮನ್‌ವೆಲ್ತ್ ಗೇಮ್ಸ್-2022 ರಲ್ಲಿ ಪುರುಷರ 57 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಕಾಮನ್‌ವೆಲ್ತ್ ಗೇಮ್ಸ್-2022 ರಲ್ಲಿ ಪುರುಷರ 57 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ರವಿ ಅವರು ನೈಜೀರಿಯಾ ಆಟಗಾರನನ್ನು ತಾಂತ್ರಿಕ ದಕ್ಷತೆಯ ಆಧಾರದ ಮೇಲೆ ಸೋಲಿಸಿ ಪದಕ ಗೆದ್ದರು.

ತನ್ನ ಎದುರಾಳಿಯ ವಿಕ್ನೇಸ್ ತಿಳಿದ ರವಿ ದಹಿಯಾ ಅದನ್ನು ತನ್ನ ಗೆಲುವಿಗೆ ಸದುಪಯೋಗ ಪಡಿಸಿಕೊಂಡರು. ಈ ನಡುವೆ ನೈಜೀರಿಯಾ ಆಟಗಾರ ದಾಳಿ ನಡೆಸಿದರಾದರೂ ರವಿ ಪ್ರಬಲ ಆಟ ಪ್ರದರ್ಶಿಸಿ ಅವರನ್ನು ಬಲೆಗೆ ಬೀಳಿಸಿದರು. ಇದೇ ವೇಳೆ ರವಿಗೆ ರೆಫರಿಯಿಂದ ನಿಷ್ಕ್ರಿಯತೆಯ ಎಚ್ಚರಿಕೆ ನೀಡಲಾಯಿತು. ಇಲ್ಲಿಂದ ತನ್ನ ಶಕ್ತಿ ಪ್ರದರ್ಶಿಸಿದ ರವಿ ಎರಡು ಅಂಕಗಳ ಗಳಿಸಲು ಎದುರಾಳಿಯ ಪಾದಗಳನ್ನು ಹಿಡಿದು ನೆಲಕ್ಕುರುಳಿಸಿ ಅಂಕವನ್ನು 8-0ಗೆ ಏರಿಸಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *