CWG 2022: ಪ್ಯಾರಾ ಪವರ್​ ಲಿಫ್ಟಿಂಗ್​ನಲ್ಲಿ ಚಿನ್ನ ಗೆದ್ದ ಸುಧೀರ್​ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ | CWG 2022 Prime Minister narendra modi congratulates Sudhir for winning Gold Medal in Mens Heavyweight Para Powerlifting


CWG 2022: ಸುಧೀರ್ ಅವರ ಚಿನ್ನದ ಪದಕ ಸೇರಿದಂತೆ ಭಾರತದ ಪದಕಗಳ ಸಂಖ್ಯೆ 20 ಕ್ಕೇರಿದೆ. ಸದ್ಯ ಭಾರತದ ಬಳಿ ಆರು ಚಿನ್ನ, ಏಳು ಬೆಳ್ಳಿ ಮತ್ತು 7 ಕಂಚಿನ ಪದಕವಿದೆ.

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ (Commonwealth Games 2022) ಭಾರತದ ಪದಕದ ಬೇಟೆ ಮುಂದುವರೆದಿದೆ. ಕಾಮನ್​ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್​​ನಲ್ಲಿ (Para Powerlifting ) ಭಾರತದ ಸುಧೀರ್ (Sudhir) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಗುರುವಾರ ತಡರಾತ್ರಿ ನಡೆದ ಪುರುಷರ ಹೆವಿವೇಯ್ಟ್ ವಿಭಾಗದಲ್ಲಿ ಸುಧೀರ್ 134.5 ಅಂಕಗಳೊಂದಿಗೆ ಕಾಮನ್​​ವೆಲ್ತ್ ಗೇಮ್ಸ್​ನಲ್ಲಿ ಇತಿಹಾಸ ನಿರ್ಮಿಸಿದರು. ಸುಧೀರ್ ಅವರ ಈ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister narendra modi) ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್​ನಲ್ಲಿ ಸುಧೀರ್ ಅವರಿಂದ ಕಾಮನ್​ವೆಲ್ತ್ ಗೇಮ್ಸ್ 2022 ಪ್ಯಾರಾ-ಕ್ರೀಡೆಯ ಪದಕ ಎಣಿಕೆಗೆ ಉತ್ತಮ ಆರಂಭವಾಗಿದೆ. ಅವರು ಪ್ರತಿಷ್ಠಿತ ಚಿನ್ನದ ಪದಕವನ್ನು ಜಯಿಸಿದ್ದಾರೆ ಮತ್ತು ಮತ್ತೊಮ್ಮೆ ತಮ್ಮ ಸಮರ್ಪಣೆ ಮತ್ತು ದೃಢತೆ ಪ್ರದರ್ಶಿಸಿದ್ದಾರೆ. ಅವರು ಮೈದಾನದಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮುಂಬರುವ ಅವರ ಎಲ್ಲಾ ಪ್ರಯತ್ನಗಳಿಗೆ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

ಸುಧೀರ್ ಅವರ ಚಿನ್ನದ ಪದಕ ಸೇರಿದಂತೆ ಭಾರತದ ಪದಕಗಳ ಸಂಖ್ಯೆ 20 ಕ್ಕೇರಿದೆ. ಸದ್ಯ ಭಾರತದ ಬಳಿ ಆರು ಚಿನ್ನ, ಏಳು ಬೆಳ್ಳಿ ಮತ್ತು 7 ಕಂಚಿನ ಪದಕವಿದೆ. 87 ಕೆ.ಜಿ. ಇರುವ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆ.ಜಿ ಭಾರ ಎತ್ತಿದರು. ಹೀಗೆ 132 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದರು.

ಪ್ಯಾರಾ ಪವರ್ ಲಿಫ್ಟಿಂಗ್​ನಲ್ಲಿ ವಿಜೇತರನ್ನು ಪಾಯಿಂಟ್​ಗಳ ಆಧಾರದ ಮೇಲೆ ನಿರ್ಧರಿಸುವುದು ವಾಡಿಕೆ. ಇದರಲ್ಲಿ ಸ್ಪರ್ಧಿಯ ದೇಹದ ತೂಕ ಮತ್ತು ಅವನು ಅಥವಾ ಅವಳು ಎತ್ತುವ ತೂಕದ ಆಧಾರದ ಮೇಲೆ ಪಾಯಿಂಟ್ ಗಳನ್ನು ನಿರ್ಧರಿಸಲಾಗುತ್ತದೆ. ಸುಧೀರ್ ತಮ್ಮ ಎರಡನೇ ಪ್ರಯತ್ನದಲ್ಲಿ 212 ಕೆಜಿ ಎತ್ತಿ ದಾಖಲೆಯ 134.5 ಅಂಕಗಳನ್ನು ಗಳಿಸಿದರು. ಈ ಮೂಲಕ ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕವನ್ನು ಬಾಜಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *