CWG 2022: ಭಾರತಕ್ಕೆ ಆರನೇ ಚಿನ್ನ: ಪ್ಯಾರಾ ಪವರ್​ ಲಿಫ್ಟಿಂಗ್​ನಲ್ಲಿ ಇತಿಹಾಸ ನಿರ್ಮಿಸಿದ ಸುಧೀರ್ | Sudhir claimed the gold medal in men’s heavyweight para powerlifting event at the Commonwealth Games


ಕಾಮನ್​ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್​​ನಲ್ಲಿ (Para Powerlifting ) ಭಾರತದ ಸುಧೀರ್ (Sudhir) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್ 2022 ರಲ್ಲಿ (Commonwealth Games 2022) ಭಾರತದ ಪದಕದ ಬೇಟೆ ಮುಂದುವರೆದಿದೆ. ಕಾಮನ್​ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾ ಪವರ್ ಲಿಫ್ಟಿಂಗ್​​ನಲ್ಲಿ (Para Powerlifting ) ಭಾರತದ ಸುಧೀರ್ (Sudhir) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಗುರುವಾರ ತಡರಾತ್ರಿ ನಡೆದ ಪುರುಷರ ಹೆವಿವೇಯ್ಟ್ ವಿಭಾಗದಲ್ಲಿ ಸುಧೀರ್ 134.5 ಅಂಕಗಳೊಂದಿಗೆ ಕಾಮನ್​​ವೆಲ್ತ್ ಗೇಮ್ಸ್​ನಲ್ಲಿ ಇತಿಹಾಸ ನಿರ್ಮಿಸಿದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 20 ಕ್ಕೇರಿದೆ. ಸದ್ಯ ಭಾರತದ ಬಳಿ ಆರು ಚಿನ್ನ, ಏಳು ಬೆಳ್ಳಿ ಮತ್ತು 7 ಕಂಚಿನ ಪದಕವಿದೆ. 87 ಕೆ.ಜಿ. ಇರುವ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆ.ಜಿ ಭಾರ ಎತ್ತಿದರು. ಹೀಗೆ 132 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ಗಳಿಸಿದರು.

ಪ್ಯಾರಾ ಪವರ್ ಲಿಫ್ಟಿಂಗ್​ನಲ್ಲಿ ವಿಜೇತರನ್ನು ಪಾಯಿಂಟ್​ಗಳ ಆಧಾರದ ಮೇಲೆ ನಿರ್ಧರಿಸುವುದು ವಾಡಿಕೆ. ಇದರಲ್ಲಿ ಸ್ಪರ್ಧಿಯ ದೇಹದ ತೂಕ ಮತ್ತು ಅವನು ಅಥವಾ ಅವಳು ಎತ್ತುವ ತೂಕದ ಆಧಾರದ ಮೇಲೆ ಪಾಯಿಂಟ್ ಗಳನ್ನು ನಿರ್ಧರಿಸಲಾಗುತ್ತದೆ. ಸುಧೀರ್ ತಮ್ಮ ಎರಡನೇ ಪ್ರಯತ್ನದಲ್ಲಿ 212 ಕೆಜಿ ಎತ್ತಿ ದಾಖಲೆಯ 134.5 ಅಂಕಗಳನ್ನು ಗಳಿಸಿದರು. ಈ ಮೂಲಕ ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕವನ್ನು ಬಾಜಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *