CWG 2022: 2022 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸುಶೀಲಾ ದೇವಿ ಪದಕದ ಬಣ್ಣವನ್ನು ಬದಲಾಯಿಸುವ ಅವಕಾಶವನ್ನು ಕಳೆದುಕೊಂಡರು. ಸೋಮವಾರ ನಡೆದ ಜೂಡೋದಲ್ಲಿ 48 ಕೆಜಿ ವಿಭಾಗದಲ್ಲಿ ಸುಶೀಲಾ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾದರು.
2022 ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸುಶೀಲಾ ದೇವಿ ಪದಕದ ಬಣ್ಣವನ್ನು ಬದಲಾಯಿಸುವ ಅವಕಾಶವನ್ನು ಕಳೆದುಕೊಂಡರು. ಸೋಮವಾರ ನಡೆದ ಜೂಡೋದಲ್ಲಿ 48 ಕೆಜಿ ವಿಭಾಗದಲ್ಲಿ ಸುಶೀಲಾ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾದರು. ಚಿನ್ನದ ಪದಕದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲಿನ ಎದುರು ಭಾರತದ ಆಟಗಾರ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪಂದ್ಯದುದ್ದಕ್ಕೂ ದಕ್ಷಿಣ ಆಫ್ರಿಕಾದ ಆಟಗಾರ್ತಿ ಸುಶೀಲಾ ಮೇಲೆ ಪ್ರಾಬಲ್ಯ ಮೆರೆದು ಅವರ ಕನಸಿಗೆ ಬ್ರೇಕ್ ಹಾಕಿದರು.
ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಸುಶೀಲಾಗೆ ಇದು ಎರಡನೇ ಬೆಳ್ಳಿ ಪದಕವಾಗಿದೆ. 2014ರಲ್ಲಿ ಬೆಳ್ಳಿ ಗೆದ್ದಿದ್ದ ಅವರು ಈ ಬಾರಿ ಆ ಬೆಳ್ಳಿಯನ್ನು ಚಿನ್ನವನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದರು. ಅಂತಿಮ ಪಂದ್ಯದ ಸಮಯದಲ್ಲಿ, ದಕ್ಷಿಣ ಆಫ್ರಿಕಾದ ಆಟಗಾರ್ತಿ ಸುಶೀಲಾ ಅವರನ್ನು ಪೂರ್ಣ ಬಲ ಮತ್ತು ವೇಗದಿಂದ ಹಿಂಭಾಗದಲ್ಲಿ ಹಲವಾರು ಬಾರಿ ಮ್ಯಾಟ್ ಮೇಲೆ ಕೆಡವಿದರು. ಮತ್ತು 20 ಸೆಕೆಂಡುಗಳ ಕಾಲ ಅವರನ್ನು ಒತ್ತಿ ಹಿಡಿದರು. ಹೀಗಾಗಿ ಸುಶೀಲಾ ಅವರಿಗೆ ಪಂದ್ಯದಲ್ಲಿ ಮರಳುವ ಅವಕಾಶ ಸಿಗಲಿಲ್ಲ. ಸುಶೀಲಾ ಬಗ್ಗೆ ಹೇಳುವುದಾದರೆ, ಅವರು ಮಣಿಪುರ ಪೊಲೀಸ್ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.