CWG 2022: ರೋಚಕ ಪಂದ್ಯದಲ್ಲಿ ಹರಿದ ಆಟಗಾರನ ಶೂ.. ಕ್ರೀಡಾಸ್ಫೂರ್ತಿ ತೋರಿದ ಎದುರಾಳಿ ಕೋಚ್; ವಿಡಿಯೋ ವೈರಲ್ | Commonwealth games 2022 badminton malaysia coach hendrawan shows sports spirit and gave his shoe to jamaica samuel rickets during match


CWG 2022: ಎದುರಾಳಿ ತಂಡದ ಕೋಚ್ ಒಬ್ಬ ತನ್ನ ಶೂ ಕಳಚಿ ಬ್ಯಾಡ್ಮಿಂಟನ್ ಆಟಗಾರನಿಗೆ ನೀಡಿದ ದೃಶ್ಯ ಅಲ್ಲಿ ನೆರೆದಿದ್ದವರ ಹೃದಯ ಗೆದ್ದಿತು. ಕಾಮನ್‌ವೆಲ್ತ್ ಗೇಮ್ಸ್ ಆಡಳಿತ ಮಂಡಳಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ಪಡೆಯುತ್ತಿದೆ.

ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರ ಮೂರನೇ ದಿನವು ಕೂಡ ಪಂದ್ಯಗಳಿಂದ ತುಂಬಿದೆ. ವಿಶ್ವದ ಅತ್ಯುತ್ತಮ ಆಟಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಪಂದ್ಯ ನಡೆಯುವ ವೇಳೆ ಕುತೂಹಲಕಾರಿ ದೃಶ್ಯವೊಂದು ಕಂಡುಬಂತು. ಎದುರಾಳಿ ತಂಡದ ಕೋಚ್ ಒಬ್ಬ ತನ್ನ ಶೂ ಕಳಚಿ ಬ್ಯಾಡ್ಮಿಂಟನ್ ಆಟಗಾರನಿಗೆ ನೀಡಿದ ದೃಶ್ಯ ಅಲ್ಲಿ ನೆರೆದಿದ್ದವರ ಹೃದಯ ಗೆದ್ದಿತು. ಕಾಮನ್‌ವೆಲ್ತ್ ಗೇಮ್ಸ್ ಆಡಳಿತ ಮಂಡಳಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ಪಡೆಯುತ್ತಿದೆ.

ಈವೆಂಟ್‌ನ ಎರಡನೇ ದಿನ ಮಲೇಷ್ಯಾ ಮತ್ತು ಜಮೈಕಾ ನಡುವೆ ಬ್ಯಾಡ್ಮಿಂಟನ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ, ಜಮೈಕಾದ ಅತ್ಯುತ್ತಮ ಆಟಗಾರ ಸ್ಯಾಮ್ಯುಯೆಲ್ ರಿಕೆಟ್ಸ್ ಅವರ ಬೂಟ್ ಪಂದ್ಯದ ವೇಳೆ ಹರಿಯಿತು. ಇದರಿಂದ ಕೆಲಕಾಲ ಆಟ ಸ್ಥಗಿತಗೊಂಡಿತ್ತು. ಜೊತೆಗೆ ಹರಿದ ಬೂಟ್ ತೊಟ್ಟು ಸ್ಯಾಮ್ಯುಯೆಲ್ ರಿಕೆಟ್ಸ್​ಗೆ ಆಡಲು ಕಷ್ಟವಾಗಿತ್ತು. ಇದನ್ನು ಗಮನಿಸಿದ ಮಲೇಷಿಯಾದ ಕೋಚ್ ಹೆಂಡ್ರುವಾನ್, ಎದುರಾಳಿ ಆಟಗಾರ ರಿಕೆಟ್ಸ್​ಗೆ ತಾವು ಧರಿಸಿದ್ದ ಬೂಟ್​ಗಳನ್ನು ತೆಗೆದುಕೊಟ್ಟು ಕ್ರೀಡಾಸ್ಫೂರ್ತಿ ತೋರಿದರು.

TV9 Kannada


Leave a Reply

Your email address will not be published. Required fields are marked *