CWG 2022: 18 ಚಿನ್ನ, 15 ಬೆಳ್ಳಿ, 22 ಕಂಚು: 55ಕ್ಕೇರಿದ ಭಾರತದ ಪದಕಗಳ ಸಂಖ್ಯೆ | Commonwealth Games 2022 India wins 18 gold medals medal tally rises to 55


Commonwealth Games 2022: ಭಾರತಕ್ಕೆ ಇದುವರೆಗೆ ಬಂದಿರುವ 55 ಪದಕಗಳ ಪೈಕಿ 12 ಕುಸ್ತಿಯಿಂದಾದರೆ, 10 ಪದಕಗಳು ವೇಟ್​ ಲಿಫ್ಟಿಂಗ್ ​​ನಿಂದ ಬಂದಿದೆ. ಏಳು ಪದಕ ಬಾಕ್ಸರ್​ಗಳು ಬಾಚಿಕೊಂಡಿದ್ದಾರೆ. ಈ ಮೂಲಕ ಮೆಡಲ್ ಟೇಬಲ್​ನಲ್ಲಿ ಭಾರತ ಐದನೇ ಸ್ಥಾನಲ್ಲಿದೆ.

ಕಾಮನ್​ ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತದ ಪದಕದ ಬೇಟೆ ಮುಂದುವರೆದಿದೆ. ಈವರೆಗೆ ಒಟ್ಟು 55 ಪದಕಗಳನ್ನು ಬಾಜಿಕೊಂಡಿದೆ. ಇದರಲ್ಲಿ ಹದಿನೆಂಟು ಚಿನ್ನ (Gold), ಹದಿನೈದು ಬೆಳ್ಳಿ ಹಾಗೂ 22 ಕಂಚು ಪಡೆದುಕೊಂಡಿದೆ. ಭಾರತಕ್ಕೆ ಇದುವರೆಗೆ ಬಂದಿರುವ 55 ಪದಕಗಳ ಪೈಕಿ 12 ಕುಸ್ತಿಯಿಂದಾದರೆ, 10 ಪದಕಗಳು ವೇಟ್​ ಲಿಫ್ಟಿಂಗ್ ​​ನಿಂದ ಬಂದಿದೆ. ಏಳು ಪದಕ ಬಾಕ್ಸರ್​ಗಳು ಬಾಚಿಕೊಂಡಿದ್ದಾರೆ. ಈ ಮೂಲಕ ಮೆಡಲ್ ಟೇಬಲ್​ನಲ್ಲಿ ಭಾರತ ಐದನೇ ಸ್ಥಾನಲ್ಲಿದೆ. ಬರೋಬ್ಬರಿ 170 ಪದಕದೊಂದಿಗೆ ಆಸ್ಟ್ರೇಲಿಯಾ (Australia) ಪ್ರಥಮ ಸ್ಥಾನದಲ್ಲಿದೆ. 165 ಪದಕದೊಂದಿಗೆ ಇಂಗ್ಲೆಂಡ್ ಎರಡನೇ ಸ್ಥಾನ, ಕೆನಡಾ (87 ಮೆಡಲ್) ಹಾಗೂ ನ್ಯೂಜಿಲೆಂಡ್ ನಾಲ್ಕನೇ ಸ್ಥಾನ ಅಲಂಕರಿಸಿದೆ.

ನಿನ್ನೆ ಒಂದೇ ದಿನದಲ್ಲಿ ಸಾಕಷ್ಟು ಪದಕಗಳನ್ನು ಬಾಚಿಕೊಂಡಿತು. ಮೊದಲು ಮಹಿಳೆಯರ (45-48 ಕೆಜಿ ವಿಭಾಗ) ಫೈನಲ್ ಪಂದ್ಯದಲ್ಲಿ ನೀತು ಗಂಗಾಸ್ ಚಿನ್ನದ ಗೆದ್ದಿದ್ದರು. ಅಲ್ಲದೇ, ಪುರುಷರ (48-51 ಕೆಜಿ ವಿಭಾಗ) ಬಾಕ್ಸಿಂಗ್​ನಲ್ಲಿ ಅಮಿತ್ ಪಂಗಲ್ ಕೂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಬಳಿಕ ಮಹಿಳೆಯರ 50 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಚಿನ್ನದ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದರು. ಟೇಬಲ್‌ ಟೆನಿಸ್​ನ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಬಂದಿದೆ. ಫೈನಲ್‌ನಲ್ಲಿ ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ರೋಚಕ ಪಂದ್ಯದಲ್ಲಿ ಭಾರತವನ್ನು 9 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಸೋತ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು.

ಭಾರತದ ಲೆಜೆಂಡರಿ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಮತ್ತೊಂದು ಚಿನ್ನದ ಪದಕವನ್ನು ದೇಶದ ಖಾತೆಗೆ ಹಾಕಿದ್ದಾರೆ. ಸ್ಟಾರ್ ಷಟ್ಲರ್ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅಣ್ಣು ರಾಣಿ 60 ಮೀಟರ್‌ ದೂರ ಜಾವೆಲಿನ್ ಎಸೆದು ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ. ಭಾರತದ ಸಂದೀಪ್ ಕುಮಾರ್ ಕಾಮನ್‌ವೆಲ್ತ್ ಗೇಮ್ಸ್-2022ರ ಪುರುಷರ 10,000 ಮೀಟರ್ ನಡಿಗೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

TV9 Kannada


Leave a Reply

Your email address will not be published. Required fields are marked *