CWG 2022 Day 3, Schedule: 3ನೇ ದಿನ ಭಾರತದ ಬುಟ್ಟಿಗೆ ಪದಕ ಹಾಕುವವರು ಯಾರು? ಇಲ್ಲಿದೆ ವೇಳಾಪಟ್ಟಿ | CWG 2022 Day 3 Schedule IND vs PAK match weightlifters will fill Indias bag

CWG 2022 Day 3, Schedule: ಕಾಮನ್‌ವೆಲ್ತ್ ಗೇಮ್ಸ್ 2022 ರ ಮೂರನೇ ದಿನದಂದು, ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಮೇಲೆ ಎಲ್ಲರ ಕಣ್ಣುಗಳು ಇರುತ್ತವೆ. ಎರಡನೇ ದಿನದಂತೆಯೇ ಮೂರನೇ ದಿನವೂ ವೇಟ್‌ಲಿಫ್ಟರ್‌ಗಳು ಭಾರತದ ಚೀಲ ತುಂಬಲು ಸಜ್ಜಾಗಿದ್ದಾರೆ.

Jul 31, 2022 | 7:15 AM

TV9kannada Web Team

| Edited By: pruthvi Shankar

Jul 31, 2022 | 7:15 AM
ಕಾಮನ್‌ವೆಲ್ತ್ ಗೇಮ್ಸ್ 2022 ರ ಮೂರನೇ ದಿನದಂದು, ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಮೇಲೆ ಎಲ್ಲರ ಕಣ್ಣುಗಳು ಇರುತ್ತವೆ. ಎರಡನೇ ದಿನದಂತೆಯೇ ಮೂರನೇ ದಿನವೂ ವೇಟ್‌ಲಿಫ್ಟರ್‌ಗಳು ಭಾರತದ ಚೀಲ ತುಂಬಲು ಸಜ್ಜಾಗಿದ್ದಾರೆ. ಅದೇ ಸಮಯದಲ್ಲಿ, ಟೇಬಲ್ ಟೆನಿಸ್, ಹಾಕಿಯಲ್ಲಿಯೂ ಭಾರತದ ಶಕ್ತಿ ಕಾಣಿಸುತ್ತದೆ. ಬಿಂದಿಯಾರಾಣಿ ದೇವಿ, ಯೂತ್ ಒಲಿಂಪಿಕ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಜೆರೆಮಿ ಲಾಲ್ರಿನ್ನುಂಗ, ಅಚಿಂತಾ ಶೂಲಿ ಅವರು ಜುಲೈ 31 ರಂದು ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಪದಕಗಳ ಸಂಖ್ಯೆಯನ್ನು ಹೆಚ್ಚಿಸಬಹುದು.

ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನಾರಿಂದ ಕಂಗೊಳಿಸುತ್ತಿರುವ ಭಾರತ ಕ್ರಿಕೆಟ್ ತಂಡವು 2022 ರ ಕಾಮನ್‌ವೆಲ್ತ್ ಗೇಮ್ಸ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕೈಯಲ್ಲಿ 3 ವಿಕೆಟ್‌ಗಳ ಸೋಲನ್ನು ಎದುರಿಸಬೇಕಾಯಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಇಬ್ಬರ ನಡುವಿನ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

CWG 2022 Day 3, Schedule: 3ನೇ ದಿನ ಭಾರತದ ಬುಟ್ಟಿಗೆ ಪದಕ ಹಾಕುವವರು ಯಾರು? ಇಲ್ಲಿದೆ ವೇಳಾಪಟ್ಟಿ

ಭಾರತೀಯ ಪುರುಷರ ಹಾಕಿ ತಂಡವು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಘಾನಾ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಭಾರತ ತಂಡವು ಪೂಲ್ ಬಿ ಯಲ್ಲಿದ್ದೂ ಪಂದ್ಯವು ಸಂಜೆ 4 ಗಂಟೆ ಸುಮಾರಿಗೆ ಆರಂಭವಾಗಲಿದೆ.

CWG 2022 Day 3, Schedule: 3ನೇ ದಿನ ಭಾರತದ ಬುಟ್ಟಿಗೆ ಪದಕ ಹಾಕುವವರು ಯಾರು? ಇಲ್ಲಿದೆ ವೇಳಾಪಟ್ಟಿ

ಟೇಬಲ್ ಟೆನಿಸ್​ನಲ್ಲಿ ಪುರುಷರ ತಂಡದ ಕ್ವಾರ್ಟರ್ ಫೈನಲ್ ಪಂದ್ಯ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆಯಲಿದೆ. ಮಹಿಳೆಯರ ಸೆಮಿಫೈನಲ್ ಪಂದ್ಯ ಸಂಜೆ 4 ರಿಂದ 9 ರವರೆಗೆ ನಡೆಯಲಿದ್ದು, ಅದಕ್ಕೂ ಮೊದಲು ಭಾರತ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾವನ್ನು ಎದುರಿಸಲಿದೆ.

CWG 2022 Day 3, Schedule: 3ನೇ ದಿನ ಭಾರತದ ಬುಟ್ಟಿಗೆ ಪದಕ ಹಾಕುವವರು ಯಾರು? ಇಲ್ಲಿದೆ ವೇಳಾಪಟ್ಟಿ

ಮಧ್ಯಾಹ್ನ 2 ಗಂಟೆಯಿಂದ ವೇಟ್ ಲಿಫ್ಟಿಂಗ್ ಪಂದ್ಯಗಳು ನಡೆಯಲಿವೆ. ಮಹಿಳೆಯರ 59 ಕೆಜಿಯಲ್ಲಿ ಬಿಂದಿಯಾರಾಣಿ ದೇವಿ, ಪುರುಷರ 67 ಕೆಜಿಯಲ್ಲಿ ಜೆರೆಮಿ ಮತ್ತು ಪುರುಷರ 73 ಕೆಜಿಯಲ್ಲಿ ಅಚಿಂತಾ ಶೂಲಿ ಸವಾಲನ್ನು ಪ್ರಸ್ತುತಪಡಿಸಲಿದ್ದಾರೆ.

Most Read Stories

TV9 Kannada

Leave a Reply

Your email address will not be published. Required fields are marked *