CWG 2022 Day 5: ವೇಟ್​ ಲಿಫ್ಟಿಂಗ್​ನಲ್ಲಿ ತಪ್ಪಿದ ಪದಕ: ಫೈನಲ್​ನಲ್ಲಿ ಭಾರತೀಯರು | CWG 2022 Day 5: Indian Teams Highlights zp


ವೇಟ್​ ಲಿಫ್ಟಿಂಗ್​ನಲ್ಲಿ ಪೂನಂ ಯಾದವ್ 76 ಕೆಜಿ ವಿಭಾಗದಲ್ಲಿ ಪದಕ ವಂಚಿತರಾಗಿದ್ದಾರೆ. ಸ್ನ್ಯಾಚ್‌ನಲ್ಲಿ, ಕೊನೆಯ ಎರಡು ಪ್ರಯತ್ನಗಳಲ್ಲಿ ಅವರು ಭಾರವನ್ನು ಎತ್ತುವಲ್ಲಿ ಯಶಸ್ವಿಯಾಗಿದ್ದರು.

ಕಾಮನ್‌ವೆಲ್ತ್ ಗೇಮ್ಸ್ 2022 ರ ಫೈನಲ್ ತಲುಪುವ ಮೂಲಕ ಭಾರತೀಯ ಮಹಿಳಾ ಲಾನ್ ಬಾಲ್ ತಂಡವು ಈಗಾಗಲೇ ಇತಿಹಾಸ ಸೃಷ್ಟಿಸಿದೆ. ಅಲ್ಲದೆ ಮಹಿಳಾ ಲಾನ್ ಬಾಲ್ ತಂಡವು ಭಾರತಕ್ಕೆ ಸ್ವರ್ಣ ಪದಕ ಗೆದ್ದುಕೊಡುವ ವಿಶ್ವಾಸದಲ್ಲಿದೆ. ಇದಲ್ಲದೆ ಕ್ರೀಡಾಕೂಟದ ಐದನೇ ದಿನದಲ್ಲಿ  ಬ್ಯಾಡ್ಮಿಂಟನ್​ನಿಂದ ಕೂಡ ಪದಕಗಳನ್ನು ನಿರೀಕ್ಷಿಸಲಾಗುತ್ತಿದೆ. ಇನ್ನು ಜಿಮ್ನಾಸ್ಟಿಕ್ಸ್, ಬಾಕ್ಸಿಂಗ್, ಹಾಕಿ, ಸ್ಕ್ವಾಷ್, ಟೇಬಲ್ ಟೆನಿಸ್ ನಲ್ಲೂ ತಮ್ಮ ಶಕ್ತಿ ಪ್ರದರ್ಶಿಸಲು ಭಾರತೀಯ ಆಟಗಾರರು ಉತ್ಸುಕರಾಗಿದ್ದಾರೆ. ಟೇಬಲ್ ಟೆನಿಸ್ ನಲ್ಲಿ ಭಾರತದ ಪುರುಷರ ತಂಡ ಸಿಂಗಾಪುರದ ಸವಾಲನ್ನು ಎದುರಿಸಲಿದೆ.

ಐದನೇ ದಿನದಾಟದ ಫಲಿತಾಂಶ ಹೇಗಿದೆ..?
ಆಗಸ್ಟ್ 8, ಸಂಜೆ 4 ಗಂಟೆಯವರೆಗೆ ಸ್ಪರ್ಧೆಗಳ ಫಲಿತಾಂಶಗಳ ಪ್ರಕಾರ ಭಾರತಕ್ಕೆ ಐದನೇ ದಿನದಾಟದಲ್ಲಿ ಒಂದು ಪದಕ ಮಾತ್ರ ಲಭಿಸಿದೆ. ಇನ್ನುಳಿದಂತೆ ಗೆಲುವಿನೊಂದಿಗೆ ಭಾರತ ತಂಡವು ಸ್ಪರ್ಧೆಯಲ್ಲಿ ಮುಂದುವರೆದಿದೆ. ಹಾಗಿದ್ರೆ 5ನೇ ದಿನದ ಫಲಿತಾಂಶಗಳೇನು ನೋಡೋಣ..

  • ಹರ್ಜಿಂದರ್ ಕೌರ್ 71 ಕೆಜಿ ತೂಕ ವಿಭಾಗದಲ್ಲಿ 212 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು. ಅವರು ಸ್ನ್ಯಾಚ್‌ನಲ್ಲಿ 93 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 119 ಕೆಜಿ ಎತ್ತಿದರು.
  • ಲಾಂಗ್ ಜಂಪ್ ನಲ್ಲಿ ಶ್ರೀಶಂಕರ್ ಹಾಗೂ ಅನೀಸ್ ಯಾಹಿಯಾ ಫೈನಲ್ ಸುತ್ತು ತಲುಪಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲಿ 8.05 ಮೀಟರ್ ದೂರವನ್ನು ಕ್ರಮಿಸುವ ಮೂಲಕ ಶ್ರೀಕರ್ ಮುಂದಿನ ಸುತ್ತಿಗೆ ಎಂಟ್ರಿ ಕೊಟ್ಟರು. ಹಾಗೆಯೇ 7.68 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದ ನಂತರ ಅನೀಸ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
  • ಮತ್ತೊಂದೆಡೆ, ಭಾರತದ ಸ್ಟಾರ್ ಈಜುಗಾರ ಶ್ರೀಹರಿ ನಟರಾಜನ್ 200 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಎರಡನೇ ಸ್ಥಾನ ಪಡೆದರು. ಇದಾಗ್ಯೂ ಫೈನಲ್ ತಲುಪುವುದನ್ನು ತಪ್ಪಿಸಿಕೊಂಡಿದ್ದಾರೆ. ಸದ್ಯ ಮೀಸಲು ಪಟ್ಟಿಯಲ್ಲಿದ್ದಾರೆ.
  • ಲಾನ್ ಬಾಲ್ ನಲ್ಲಿ ಭಾರತದ ಅಮೋಘ ಪ್ರದರ್ಶನ ಮುಂದುವರಿದಿದೆ. ಟ್ರಿಪಲ್‌ನಲ್ಲಿ ಭಾರತ ಮಹಿಳಾ ತಂಡ 18 ಥ್ರೋಗಳ ನಂತರ 15-11 ರಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ತಾನ್ಯಾ ಚೌಧರಿ, ಪಿಂಕಿ ಮತ್ತು ರೂಪಾ ರಾಣಿ ಟಿರ್ಕಿ ಈ ತಂಡದಲ್ಲಿದ್ದರು.
  • ವೇಟ್​ ಲಿಫ್ಟಿಂಗ್​ನಲ್ಲಿ ಪೂನಂ ಯಾದವ್ 76 ಕೆಜಿ ವಿಭಾಗದಲ್ಲಿ ಪದಕ ವಂಚಿತರಾಗಿದ್ದಾರೆ. ಸ್ನ್ಯಾಚ್‌ನಲ್ಲಿ, ಕೊನೆಯ ಎರಡು ಪ್ರಯತ್ನಗಳಲ್ಲಿ ಅವರು ಭಾರವನ್ನು ಎತ್ತುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕ್ಲೀನ್ ಮತ್ತು ಜರ್ಕ್‌ನಲ್ಲಿ ಎಲ್ಲಾ ಮೂರು ಪ್ರಯತ್ನಗಳಲ್ಲಿ ವಿಫಲರಾದರು.
  • ಲಾನ್​ ಬಾಲ್​ ಮಹಿಳಾ ತಂಡಗಳ ಫೈನಲ್​ನಲ್ಲಿ ಭಾರತ-ಸೌತ್ ಆಫ್ರಿಕಾವನ್ನು ಎದುರಿಸಲಿದೆ. ಇದರಲ್ಲಿ ಒಂದು ಪದಕವು ಭಾರತಕ್ಕೆ ಖಚಿತವಾಗಿದ್ದು, ಇದಾಗ್ಯೂ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದೆ ಭಾರತೀಯ ಲಾನ್ ಬಾಲ್ ತಂಡ.

TV9 Kannada


Leave a Reply

Your email address will not be published. Required fields are marked *