ಡೈರೆಕ್ಟ್ ಟು ಹೋಮ್ ಕಂಪನಿ ಡಿಶ್ ಟಿವಿ  ತನ್ನ ಗ್ರಾಹಕರಿಗೆ ಬೊಂಬಾಟ್ ಕೊಡುಗೆಯೊಂದನ್ನು ನೀಡುತ್ತಿದೆ. ಈಗ ಗ್ರಾಹಕರಿಗೆ ಸೆಟ್ಟಪ್ ಬಾಕ್ಸ್‌ ಮೇಲೆ  ಐದು ವರ್ಷಗಳ ಖಾತರಿ ನೀಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

ಟೆಕ್ ಸೈಟ್ ಆಗಿರುವ ಟೆಲಿಕಾಮ್ ಟಾಕ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಡಿಶ್ ಟಿವಿ ತನ್ನ D2H ಗ್ರಾಹಕರಿಗಾಗಿ ಒಂದು ನೂತನ ಪ್ಲಾನ್ ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ D2H ಗ್ರಾಹಕರಿಗೆ ಪೂರ್ಣ ಐದು ವರ್ಷ ಸೆಟಪ್ ಬಾಕ್ಸ್ ಮೇಲೆ ವಾರಂಟಿ ನೀಡಲಾಗುವುದು ಎಂದಿದೆ. ಇದಕ್ಕೂ ಮೊದಲು ಗ್ರಾಹಕರಿಗೆ ಕೇವಲ ಮೂರು ವರ್ಷಗಳ ವಾರಂಟಿ ಮಾತ್ರ ಸಿಗುತ್ತಿತ್ತು.

ಓದಿ : ಚಿನ್ನದ ಮೇಲೆ ಸಾಲ ಪಡೆಯುವವರಿಗೆ ವಾರ್ಷಿಕ ಶೇ7.25 ಬಡ್ಡಿದರದಲ್ಲಿ ಸಾಲ ನೀಡಲಿದೆ ಎಸ್ ಬಿ ಐ

ವರದಿಗಳ ಪ್ರಕಾರ D2H ಗ್ರಾಹಕರಿಗೆ ನಾಲ್ಕು ವಿಧದ ಸೆಟಪ್ ಬಾಕ್ಸ್ ಗಳನ್ನು ನೀಡಲಾಗುತ್ತದೆ. ಇದರಲ್ಲಿ  ಆ್ಯಂಡ್ರಾಯ್ಡ್ ಟಿವಿ ಬೇಸ್ಡ್ ಬಾಕ್ಸ್ ಬೆಲೆ ರೂ. 3,999 ಆಗಿದೆ.   D2H ಡಿಜಿಟಲ್ ಎಚ್ ಡಿ ಸೆಟ್ ಟಾಪ್ ಬೆಲೆ ರೂ.1,799 , D2H ಡಿಜಿಟಲ್ ಎಚ್ ಡಿ ಸೆಟ್ ಟಾಪ್ ಬಾಕ್ಸ್ ಬೆಲೆ ರೂ.1,599  ಆಗಿದ್ದರೆ  D2H ಡಿಜಿಟಲ್ ಎಸ್ ಡಿ ಸೆಟ್ ಟಾಪ್ ಬಾಕ್ಸ್ 1,499 ರೂ.ಗಳಷ್ಟಾಗಿದೆ.

D2H ಗ್ರಾಹಕರು ಈಗ ಯಾವುದೇ ಆಂಟೆನಾ ಸಹಿತ ಅಥವಾ ಅಂಟಿನಾ ರಹಿತ ಸೆಟಪ್ ಬಾಕ್ಸ್ ಗಳನ್ನು ಸ್ಥಾಪಿಸಬಹುದು. ಸೆಟ್ ಟಾಪ್ ಬಾಕ್ಸ್ ಪಡೆಯಲು ನೀವು ಕಸ್ಟಮರ್ ಕೇರ್ ಸೆಂಟರ್ ನ್ನು ಸಂಪರ್ಕಿಸಬಹುದು.

ಬ್ರಾಡ್ಬ್ಯಾಂಡ್ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆ ಇತ್ತೀಚಿನ ದಿನಗಳಲ್ಲಿ  ಡೈರೆಕ್ಟ್ ಟು ಹೋಮ್ ಸೇವೆಗಳು ಪ್ರಭಾವಿತಗೊಂಡಿವೆ ಎಂಬುದು ಇಲ್ಲಿ ಉಲ್ಲೇಖನೀಯ.

ಕೆಲವು ಸಮಯದ ಹಿಂದೆ ಡಿಶ್ ಟಿವಿ ತನ್ನ ಡಿ 2 ಹೆಚ್ ಗ್ರಾಹಕರಿಗೆ  99 ರೂಗಳಿಗೆ ವಿಸ್ತೃತ ಖಾತರಿ ಯೋಜನೆಯನ್ನು ಘೋಷಿಸಿತ್ತು. ಈ ವಿಸ್ತೃತ ಖಾತರಿ ಯೋಜನೆಯಲ್ಲಿ ಜಿ ಎಸ್‌ ಟಿಯಿಂದ ಆವೃತವಾದ ಸೆಟ್-ಟಾಪ್ ಬಾಕ್ಸ್ (STB) ಸೇರಿದೆ.

ಓದಿ : ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದ ಇಸ್ರೋ ರಾಕೆಟ್..!   

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More

Leave a comment