Dalit murder: ಬೀರನಕುಪ್ಪದಲ್ಲಿ ದಲಿತ ಗ್ರಾಮಸ್ಥನ ಹತ್ಯೆ -ಸಿಐಡಿ ತನಿಖೆಗೆ ಆಗ್ರಹಿಸಿ ಕೆಜಿಎಫ್​ ಎಸ್ಪಿ ಕಚೇರಿವರೆಗೆ 12 ಕಿಮೀ ಪಾದಯಾತ್ರೆ | Dalit man murdered in Beerakuppam villagers demand kgf sp cid investigation


Dalit murder: ಬೀರನಕುಪ್ಪದಲ್ಲಿ ದಲಿತ ಗ್ರಾಮಸ್ಥನ ಹತ್ಯೆ -ಸಿಐಡಿ ತನಿಖೆಗೆ ಆಗ್ರಹಿಸಿ ಕೆಜಿಎಫ್​ ಎಸ್ಪಿ ಕಚೇರಿವರೆಗೆ 12 ಕಿಮೀ ಪಾದಯಾತ್ರೆ

ಬೀರನಕುಪ್ಪದಲ್ಲಿ ದಲಿತ ಗ್ರಾಮಸ್ಥನ ಹತ್ಯೆ: ಸಿಐಡಿ ತನಿಖೆಗೆ ಆಗ್ರಹಿಸಿ, ಕೆಜಿಎಫ್​ ಎಸ್ಪಿ ಕಚೇರಿವರೆಗೆ 12 ಕಿಮೀ ಪಾದಯಾತ್ರೆ

KGF: ಗ್ರಾಮದಲ್ಲಿ ಇಂದಿಗೂ ಕೊಲೆಯಾದ ನಾರಾಯಣಪ್ಪ ಕುಟುಂಬಸ್ಥರು ಗ್ರಾಮಕ್ಕೆ ಹೋಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನದ ಹಿಂದಷ್ಟೇ ಬೀರನಕುಪ್ಪ ಗ್ರಾಮಕ್ಕೆ ಚಿತ್ರದುರ್ಗದ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು.

ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿನ ಬೀರನಕುಪ್ಪ ಗ್ರಾಮದಲ್ಲಿ ಮೇ 9 ರಂದು ರಾತ್ರಿ ಗ್ರಾಮದ ನಾರಾಯಣಪ್ಪ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀರನಕುಪ್ಪ ಗ್ರಾಮದಲ್ಲಿ ಇಂದಿಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೃಷ್ಣಾರೆಡ್ಡಿ ಹಾಗೂ ಆತನ ಕುಟುಂಬದವರು ದಲಿತ ಜನಾಂಗಕ್ಕೆ ಸೇರಿದ್ದ ನಾರಾಯಣಪ್ಪನನ್ನು ಅವರದ್ದೇ ಮನೆಯಲ್ಲಿ ಅಟ್ಟಾಡಿಸಿ ಬರ್ಬರವಾಗಿ ಕೊಂದು ಅವರ ಇಡೀ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಗ್ರಾಮದಲ್ಲಿ ಇಂದಿಗೂ ಕೊಲೆಯಾದ ನಾರಾಯಣಪ್ಪ ಕುಟುಂಬಸ್ಥರು ಗ್ರಾಮಕ್ಕೆ ಹೋಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನದ ಹಿಂದಷ್ಟೇ ಬೀರನಕುಪ್ಪ ಗ್ರಾಮಕ್ಕೆ ಚಿತ್ರದುರ್ಗದ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದರು. ಇದರ ಬೆನ್ನಲ್ಲೇ ಇಂದು ಕೋಲಾರ ಜಿಲ್ಲಾ ಬೋವಿ ಜನಾಂಗದ ಸಾವಿರಾರು ಜನರು ಬೀರನಕುಪ್ಪ ಗ್ರಾಮದಿಂದ ಕೋಲಾರ ಜಿಲ್ಲೆಯ ಕೆಜಿಎಫ್​ ಎಸ್ಪಿ ಕಚೇರಿವರೆಗೆ ಸುಮಾರು 12 ಕಿ.ಮೀ ಪಾದಯಾತ್ರೆ ಮೂಲಕ ತೆರಳಿ ಪ್ರಕರಣದ ನಿಶ್ಪಕ್ಷಪಾತ ತನಿಖೆಯಾಗಬೇಕು, ಜೊತೆಗೆ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಬೇಕು, ಜೊತೆಗೆ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಇಂದು ಮಧ್ಯಾಹ್ನ ಬೀರನಕುಪ್ಪ ಗ್ರಾಮದಿಂದ ಹೊರಟ ಸಾವಿರಾರು ಜನರು ಕಾಲ್ನಡಿಗೆ ಮೂಲಕ ಸರ್ಕಾರದ ವಿರುದ್ದ ಹಾಗೂ ಪೊಲೀಸ್​ ಇಲಾಖೆ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಬೃಹತ್​ ಪ್ರತಿಭಟನೆ ಮೆರವಣಿಗೆ ಮಾಡಿದರು. ಕೂಡಲೇ ಸರ್ಕಾರ ನಾರಾಯಣಪ್ಪ ಅವರ ಕೊಲೆ ಪ್ರಕರಣವನ್ನು ಸಿಐಡಿ ಒಪ್ಪಿಸಬೇಕು, ಜೊತೆಗೆ ನಾರಾಯಣಪ್ಪ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರ ಆಗ್ರಹಿಸಿದ್ದಾರೆ. ಇನ್ನು ಗ್ರಾಮದಲ್ಲೂ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿದೆ, ಗ್ರಾಮದಲ್ಲಿ ಕೊಲೆ ನಡೆದು 25 ದಿನ ಕಳೆದರೂ ಗ್ರಾಮದಲ್ಲಿ ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ಜೊತೆಗೆ ಇಂದು ಪ್ರತಿಭಟನೆ ಹಿನ್ನೆಲೆ ಸುಮಾರು 400 ಕ್ಕೂ ಹೆಚ್ಚು ಪೊಲೀಸ್​ ಸಿಬ್ಬಂದಿಯಿಂದ ಬಂದೋಬಸ್ತ್​ ಮಾಡಲಾಗಿತ್ತು.

ಸರಕಾರಿ ಜಾಗದಲ್ಲಿ ತಿಪ್ಪೆ ಹಾಕಿದ್ದಕ್ಕೆ ಆಕ್ರೋಶ; ದಲಿತ ಮಹಿಳೆಯರ ಮೇಲೆ ಹಲ್ಲೆ

ಯಾದಗಿರಿ: ದಲಿತ ಮಹಿಳೆಯ ಮುಖ ತೋರಿಸಿದಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪತ್ತೆಪುರ ಗ್ರಾಮದಲ್ಲಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಲಿತ ವೃದ್ದೆ ಪೀರಮ್ಮ ಮುಖ ತೋರಿಸಿದಕ್ಕೆ ಅನ್ಯ ಸಮುದಾಯದ ಜನರಿಂದ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆಕ್ರೋಶಗೊಂಡ ಅನ್ಯ ಸಮುದಾಯದ ಜನರಿಂದ ಮೂವರು ದಲಿತ ಮಹಿಳೆಯರ ಮೇಲೆ ಹಲ್ಲೆ ಮಾಡಲಾಗಿದೆ. ಭೀಮರಾಯ, ಚಂದ್ರಮಪ್ಪ, ಯಲ್ಲಪ್ಪ, ವೆಂಕಟೇಶ, ಭಾಗಮ್ಮ, ರಾಮವ್ವ ಸೇರಿ ದೊಣ್ಣೆಗಳಿಂದ ಮೂವರು ಮಹಿಳೆಯರಿಗೆ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಓರ್ವ ವೃದ್ದೆ ಪೀರಮ್ಮಳಿಗೆ ಗಂಭೀರ ಗಾಯಗಳಾಗಿವೆ.

ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು..
ಅನ್ಯ ಕೋಮಿನ ಜನರ ಮನೆ ಮುಂಭಾಗದಲ್ಲಿರುವ ಸರಕಾರಿ ಜಾಗದಲ್ಲಿ ಪೀರಮ್ಮ ತಿಪ್ಪೆ ಹಾಕಿದ್ದಕ್ಕೆ ಆಕ್ರೋಶಗೊಂಡ ಅನ್ಯ ಕೋಮಿನ ಜನ ಈ ಹೇಯ ಘಟನೆ ನಡೆಸಿದ್ದಾರೆ. ತಿಪ್ಪೆ ನೆಪ ಮಾಡಿ ಮುಖ ತೋರಿಸಬೇಡವೆಂದು ದಲಿತ ವೃದ್ದೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published. Required fields are marked *