Dalmia Cement: ದೇಶದಲ್ಲಿ ಮೊದಲ ಬಾರಿಗೆ ಮನೆ ಬಾಗಿಲಿಗೆ ಸಿಮೆಂಟ್ ತಲುಪಿಸುವ ಆ್ಯಪ್ ಆಧಾರಿತ ಸೇವೆ ಆರಂಭಿಸಿದ ದಾಲ್ಮಿಯಾ | Dalmia Cements Bharat Limited Launches Cement Home Delivery Service Here Is The Details


Dalmia Cement: ದೇಶದಲ್ಲಿ ಮೊದಲ ಬಾರಿಗೆ ಮನೆ ಬಾಗಿಲಿಗೆ ಸಿಮೆಂಟ್ ತಲುಪಿಸುವ ಆ್ಯಪ್ ಆಧಾರಿತ ಸೇವೆ ಆರಂಭಿಸಿದ ದಾಲ್ಮಿಯಾ

ಸಾಂದರ್ಭಿಕ ಚಿತ್ರ

ದಾಲ್ಮಿಯಾ ಸಿಮೆಂಟ್ (Cement) ಭಾರತ್ ಲಿಮಿಟೆಡ್​ನಿಂದ (DCBL) ಹೊಸ ಗ್ರಾಹಕ ಆ್ಯಪ್- ದಾಲ್ಮಿಯಾ ಅನ್​ಲೋಡ್ ಅನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಆರಂಭಿಸುವುದಾಗಿ ಘೋಷಣೆ ಮಾಡಲಾಗಿದೆ. ನೇರವಾಗಿ ಗ್ರಾಹಕರಿಗೆ ತಲುಪಿಸುವ ಆ್ಯಪ್ ಆರಂಭಿಸುವ ಮೂಲಕ ದಾಲ್ಮಿಯಾ ಸಿಮೆಂಟ್ (ಭಾರತ್)ನಿಂದ ಬದಲಾಗುತ್ತಿರುವ ಗ್ರಾಹಕರ ನಡವಳಿಕೆಗೆ ತಕ್ಕಂತೆ ಉತ್ಪನ್ನಗಳ ಕಾರ್ಯತಂತ್ರ ಬದಲಾವಣೆ ಮಾಡಿಕೊಳ್ಳುವ ಕಡೆಗೆ ಹೆಜ್ಜೆ ಹಾಕಲಾಗುತ್ತಿದೆ. ಈಗ ಗ್ರಾಹಕರು ನೇರವಾಗಿ ಡಿಸಿಬಿಎಲ್​ಗೆ ಸಂಪರ್ಕಿಸಬಹುದು ಮತ್ತು ಉತ್ತಮ ವ್ಯವಹಾರಮ ವೇಗವಾದ ಡೆಲಿವರಿ ಮತ್ತು ಗರಿಷ್ಠ ಮಟ್ಟದ ರಿಯಾಯಿತಿ ಪಡೆಯಬಹುದು. “ಡೈರೆಕ್ಟ್ ಟು ಹೋಮ್” ಫೀಚರ್​ನೊಂದಿಗೆ ಈ ಆದ್ಯಪ್ ದಕ್ಷ ಹಾಗೂ ತಡೆರಹಿತವಾದ ಡೆಲಿವರಿಯನ್ನು ಖಾತ್ರಿಪಡಿಸುತ್ತದೆ.

ಸಣ್ಣ ಪ್ರಮಾಣದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡುವ ವೃತ್ತಿಯಲ್ಲಿ ಇರುವವರು ಹಾಗೂ ಪ್ರತ್ಯೇಕ ಮನೆಗಳ ನಿರ್ಮಾಣ ಮಾಡುವಂಥ ಬಿಲ್ಡರ್​ಗಳು ಅತ್ಯುತ್ತಮ ನಿರ್ಧಾರಗಳ್ನು ಮಾಡಬಹುದು. ಕಟ್ಟಡದ ಅಗತ್ಯಗಳನ್ನು ಅದು ಪೂರೈಸುತ್ತದೆ. ಅದರ ಜತೆಗೆ ಇತರ ಅನುಕೂಲಗಳು ಸಹ ಇದ್ದು, ತೀರಾ ಅಗತ್ಯ ಇರುವ ತಾಂತ್ರಿಕ ಬೆಂಬಲವೂ ದೊರೆಯುತ್ತದೆ. ಈ ಆ್ಯಪ್ ಆಂಡ್ರಾಯಿಡ್ ಮತ್ತು ಐಒಎಸ್​ ಪ್ಲಾಟ್​ಫಾರ್ಮ್​ಗಳಲ್ಲಿ ಲಭ್ಯ ಇದೆ. ಹಲವಾರು ಫೀಚರ್​ಗಳು ಈ ಆ್ಯಪ್​ನಲ್ಲಿ ಇದ್ದು, ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್​ನ ಭಾರತದಾದ್ಯಂತ ಇರುವ ಗ್ರಾಹಕರಿಗೆ ಬೆಂಬಲಿಸುವ ಉದ್ದೇಶ ಹೊಂದಿದೆ. ಈ ಆ್ಯಪ್​ ಮೂಲಕ ಕಂಪೆನಿಯು ತನ್ನ ಡಿಜಿಟಲ್ ಬದಲಾವಣೆಯ ಕಡೆಗೆ ಸಾಗಲು ಸಹಾಯ ಮಾಡುತ್ತದೆ. ಇದರ ಮೂಲಕ ದಾಲ್ಮಿಯಾ ಸಿಮೆಂಟ್ (ಭಾರತ್) ಲಿಮಿಟೆಡ್ ಗ್ರಾಹಕರು ತಮಗಿರುವ ಬಹು ಆಯ್ಕೆಗಳ ಪೈಕಿ ಬೇಕಾದದ್ದನ್ನು ಖರೀದಿಸಬಹುದು.

ಡಿಸಿಬಿಎಲ್​ನ ಕಾರ್ಯನಿರ್ವಾಹಕ ನಿರ್ದೇಶಕ ಹಕೀಮುದ್ದೀನ್ ಅಲಿ ಮಾತನಾಡಿ, “ನಮ್ಮ ಅಪ್ಲಿಕೇಷನ್ ಅನ್ನು ಪ್ರಸ್ತುತ ಮತ್ತು ಭವಿಷ್ಯದ ಗ್ರಾಹಕರು ದಾಲ್ಮಿಯಾ ಸಿಮೆಂಟ್ ಖರೀದಿಸಲು ಮನವಿ ಮಾಡುವುದಕ್ಕೆ ಅಭಿವೃದ್ಧಿಪಡಿಸಲಾಗಿದೆ. ಈ ಕೊಡುಗೆಯ ನಾವೀನ್ಯತೆಯು ನಮ್ಮ ವಿಶ್ವ ದರ್ಜೆಯ ಉತ್ಪನ್ನಗಳ ಶ್ರೇಣಿ ಮತ್ತು ಅದ್ಭುತ ಗ್ರಾಹಕ ಸೇವೆಗೆ ಬೇಡಿಕೆ ಏರಿಕೆಯನ್ನು ಮುಂದುವರಿಸುತ್ತಿರುವುದರಿಂದ ಸಂಸ್ಥೆಯಾದ್ಯಂತ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಲು ನಮ್ಮ ದೃಢವಾದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ.

“ಈ ಡೈನಾಮಿಕ್ ಅಪ್ಲಿಕೇಷನ್ ನಮ್ಮ ಖರೀದಿದಾರ ಸಮುದಾಯವನ್ನು ಶೀಘ್ರವಾಗಿ ಮತ್ತು ಸುಲಭವಾಗಿ ಕನಿಷ್ಠ ಸಮಯ ಹಾಗೂ ಶ್ರಮದೊಂದಿಗೆ ಉತ್ಪನ್ನಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ನಮಗೆ ವಿಶ್ವಾಸವಿದೆ. ಅಲ್ಲದೆ, ನಮ್ಮ ಡೈರೆಕ್ಟ್ ಟು ಹೋಮ್ ಡೆಲಿವರಿ ಕಾರ್ಯವಿಧಾನವು ಷೆಡ್ಯೂಲಿಂಗ್, ದೊಡ್ಡ ಆರ್ಡರ್‌ಗಳಿಗಾಗಿ ಹಂತಹಂತವಾದ ವೇಳಾಪಟ್ಟಿ, ಉಚಿತ ತಾಂತ್ರಿಕ ವ್ಯಾನ್ ಮತ್ತು ಅಂತಹ ಅನೇಕ ಗ್ರಾಹಕ ಸ್ನೇಹಿ ಸೇವೆಗಳ ಮೂಲಕ ಗ್ರಾಹಕರ ಅನುಭವವನ್ನು ಹೆಚ್ಚಿಸುವುದನ್ನು ನಾವು ನೋಡುತ್ತೇವೆ,” ಎಂದು ಹಕೀಮುದ್ದೀನ್ ಅಲಿ ಹೇಳಿದ್ದಾರೆ.

ಗ್ರಾಹಕರು ಕೇವಲ ಆರ್ಡರ್‌ಗಳನ್ನು ಬುಕ್ ಮಾಡಬಹುದು ಮತ್ತು ಅವರು ಡೆಲಿವರಿ ಬಯಸುವ ಸಮಯವನ್ನು. ನಿಗದಿತ ವೇಳಾಪಟ್ಟಿಯಂತೆ ವಿತರಿಸಲಾಗುವುದು. ಸುಲಭ ಪಾವತಿ ಪ್ರಕ್ರಿಯೆ ಇದೆ ಮತ್ತು ಗ್ರಾಹಕರು ಆರ್ಡರ್ ಮಾಡಿದ ಪ್ರಮಾಣವನ್ನು ಅವಲಂಬಿಸಿ ಪ್ರತಿ ಬ್ಯಾಗ್‌ಗೆ ರೂ. 15 ವರೆಗೆ ರಿಯಾಯಿತಿಯನ್ನು ಪಡೆಯುತ್ತಾರೆ. ಕನಿಷ್ಠ 10 ಚೀಲಗಳನ್ನು ಆರ್ಡರ್ ಮಾಡಬಹುದು. ಬೆಲೆ ನಿಗದಿಯಲ್ಲಿ ಸಂಪೂರ್ಣ ಪಾರದರ್ಶಕತೆ ಇದೆ. ವಿತರಣೆ ಸಮಯದಲ್ಲಿ ಸಿಮೆಂಟ್ ದರಗಳು ಕಡಿಮೆಯಾದರೆ ಅಥವಾ ಹೆಚ್ಚಾದರೆ, ಗ್ರಾಹಕರು ಲಾಭವನ್ನು ಪಡೆಯುತ್ತಾರೆ ಮತ್ತು ಕಡಿಮೆ ದರವನ್ನು ಮಾತ್ರ ಪಾವತಿಸುತ್ತಾರೆ. ಪಾವತಿಸಿದ ಹೆಚ್ಚುವರಿ ಮೊತ್ತವನ್ನು ಮರುಪಾವತಿಸಲಾಗುತ್ತದೆ. ಈ ಸೇವೆಯು ನಾಗ್ಪುರದ ಎಲ್ಲ 33 ಪಿನ್ ಕೋಡ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ.

ದಾಲ್ಮಿಯಾ ಸಿಮೆಂಟ್ ಇಂತಹ ಉಪಕ್ರಮವನ್ನು ಪ್ರಾರಂಭಿಸಿದ ದೇಶದ ಮೊದಲ ಸಿಮೆಂಟ್ ಕಂಪೆನಿಯಾಗಿದೆ ಎಂದು ಅಲಿ ಹೇಳಿದ್ದಾರೆ. ಹೊಸ ಪರಿಕಲ್ಪನೆಯು ನಾಗ್ಪುರದಲ್ಲಿ ಪ್ರಾಯೋಗಿಕ ಯೋಜನೆಯಾಗಿದೆ. ಯಶಸ್ವಿಯಾದರೆ ಈ ಪರಿಕಲ್ಪನೆಯನ್ನು ಮಹಾರಾಷ್ಟದಾದ್ಯಂತ ಪರಿಚಯಿಸಲಾಗುವುದು.

TV9 Kannada


Leave a Reply

Your email address will not be published. Required fields are marked *