Beauty Tips: ಬೇವು ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುವಾಗ ಮುಚ್ಚಿಹೋಗಿರುವ ರಂಧ್ರಗಳನ್ನು ತೆರವುಗೊಳಿಸುತ್ತದೆ.

ತಲೆಹೊಟ್ಟು
ತಲೆಹೊಟ್ಟು (Dandruff) ಪ್ರತಿಯೊಬ್ಬರನ್ನೂ ಕಾಡುವ ಕೂದಲಿನ ಪ್ರಮುಖ ಮತ್ತು ಸಾಮಾನ್ಯ ಸಮಸ್ಯೆಯಾಗಿದೆ. ಇದು ನೆತ್ತಿಯ ಚರ್ಮದ ಮೇಲೆ ಪದರಗಳನ್ನು ಉಂಟುಮಾಡುವ ಸ್ಥಿತಿಯಾಗಿದ್ದು, ನಂತರ ಚರ್ಮದ ಮೇಲೆ ತುರಿಕೆ ಉಂಟಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ (Winter Season) ತಲೆಯ ಚರ್ಮ ಒಣಗುವುದರಿಂದ ಹೊಟ್ಟಿನ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ. ತಲೆಹೊಟ್ಟು ಹೆಚ್ಚಾಗುವುದಕ್ಕೆ ಇಂಥದ್ದೇ ಕಾರಣ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕೆಲವರ ದೇಹ ಪ್ರಕೃತಿಯೂ ತಲೆಹೊಟ್ಟಿಗೆ ಕಾರಣವಾಗುತ್ತದೆ.
ತಲೆ ಹೊಟ್ಟನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಮನೆಮದ್ದುಗಳು ಇಲ್ಲಿವೆ:
ಬೇವು:
ಬೇವು ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುವಾಗ ಮುಚ್ಚಿಹೋಗಿರುವ ರಂಧ್ರಗಳನ್ನು ತೆರವುಗೊಳಿಸುತ್ತದೆ. ಬೇವಿನ ಎಲೆಯನ್ನು ರುಬ್ಬಿ, ಅದನ್ನು ತಲೆಗೆ ಹಚ್ಚಿ, ಉಗುರು ಬೆಚ್ಚಗಿನ ನೀರಿನಿಂದ ತಲೆಯನ್ನು ತೊಳೆಯಿರಿ.
ತಾಜಾ ಸುದ್ದಿ
ಮೊಸರು- ನೆಲ್ಲಿಕಾಯಿ ಪುಡಿ:
ನೆಲ್ಲಿಕಾಯಿ ತಲೆಹೊಟ್ಟಿಗೆ ರಾಮಬಾಣವಾಗಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಪುಡಿ ಮಾಡಿದ ನೆಲ್ಲಿಕಾಯಿಯನ್ನು ಮೊಸರಿನೊಂದಿಗೆ ಕಲೆಸಿ, ಹಚ್ಚಿಕೊಂಡರೆ ತಲೆಹೊಟ್ಟು ಕಡಿಮೆಯಾಗುತ್ತದೆ.
ಮೊಸರು:
ತಲೆಹೊಟ್ಟು ಚಿಕಿತ್ಸೆಗಾಗಿ ಮನೆಮದ್ದನ್ನು ಅನುಸರಿಸುವುದು ಉತ್ತಮ. ಕೆಮಿಕಲ್ಗಳನ್ನು ಬಳಸುವುದರಿಂದ ತಲೆಹೊಟ್ಟು ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಮನೆಯಲ್ಲಿಯೇ ಇರುವ ಮೊಸರನ್ನು ನಿಮ್ಮ ಕೂದಲಿಗೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಸ್ವಲ್ಪ ಮೊಸರನ್ನು ನಿಮ್ಮ ನೆತ್ತಿಯ ಮೇಲೆ ಅರ್ಧ ಗಂಟೆ ಹಚ್ಚಿ ಮತ್ತು ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ.