Dare 2 Dream Awards
ಬೆಂಗಳೂರು: ಟಿವಿ9 ನೆಟ್‌ವರ್ಕ್‌ನಿಂದ ಸ್ಯಾಪ್ ಇಂಡಿಯಾ ಸಹಯೋಗದಲ್ಲಿ ಅತ್ಯುನ್ನತ ಉದ್ಯಮಿಗಳು, ಕಂಪನಿಗಳಿಗೆ ಪ್ರಶಸ್ತಿ ನೀಡಲು ಡೇರ್2ಡ್ರೀಮ್ ವೇದಿಕೆ ಸಿದ್ಧವಾಗಿದೆ. ಕರ್ನಾಟಕದ ಉದ್ಯಮಿಗಳು ಹಾಗೂ ಕಂಪನಿಗಳಿಗೂ ನವೆಂಬರ್ 11 ರ ಒಳಗೆ ಈ ಪ್ರಶಸ್ತಿಗೆ ನಾಮಿನೇಷನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಟಿವಿ9 ನೆಟ್‌ವರ್ಕ್ ಹಾಗೂ ಸ್ಯಾಪ್ ಇಂಡಿಯಾ ಸಹಯೋಗದಲ್ಲಿ ದೇಶಾದ್ಯಂತ ವರ್ಚುವಲ್ ಆಗಿ 8 ಕಡೆ ಪ್ರಶಸ್ತಿ ಸಮಾರಂಭ ನಡೆಯಲಿದೆ. WWW.DARE2DREAMAWARDS.COM ಗೆ ಲಾಗ್ ಇನ್ ಆಗಿ, ನಿಮ್ಮ ಅಥವಾ ನಿಮ್ಮ ಕಂಪನಿ ಪ್ರೊಫೈಲ್ ನೋಂದಾಯಿಸಿಕೊಳ್ಳಬಹುದಾಗಿದೆ.
ದೇಶದ ಅತ್ಯದ್ಭುತ ಉದ್ಯಮಿಗಳನ್ನು ಗೌರವಿಸಲು ಟಿವಿ9 ನೆಟ್‌ವರ್ಕ್ ವೇದಿಕೆ ಮತ್ತೆ ಸಿದ್ಧವಾಗಿದೆ. ಅಸಾಧ್ಯವಾಗದ್ದನ್ನು ಸಾಧಿಸಿರುವ ಅದ್ಭುತ ಉದ್ಯಮಿಗಳಿಗೆ ಪ್ರಶಸ್ತಿ ನೀಡಲು ಡೇರ್2ಡ್ರೀಮ್ ಅವಾರ್ಡ್ ಪ್ರಕ್ರಿಯೆ ಶುರುವಾಗಿದೆ. ರಿಜಿಸ್ಟ್ರೇಷನ್ ಹಾಗೂ ನಾಮಿನೇಷನ್‌ಗೆ ಇದೇ ನವೆಂಬರ್ 11 ಕೊನೆಯ ದಿನ. ಸಾಧಕ ಉದ್ಯಮಿಗಳಿಗೆ ಪ್ರಶಸ್ತಿ ನೀಡಲು, ಸ್ಯಾಪ್ ಇಂಡಿಯಾ ಸಹಯೋಗದಲ್ಲಿ ಟಿವಿ9 ನೆಟ್‌ವರ್ಕ್ ದೇಶಾದ್ಯಂತ ವರ್ಚುವಲ್ ಆಗಿ 8 ಸಮಾರಂಭ ಹಮ್ಮಿಕೊಂಡಿದ್ದು, ಕರ್ನಾಟಕದಲ್ಲೂ 1 ಸಮಾರಂಭ ನಡೆಯಲಿದೆ. ದೇಶದ ಅತ್ಯುನ್ನತ ಉದ್ಯಮಿಗಳು ಹಾಗೂ ಬೆಸ್ಟ್ ಕಂಪನಿಗಳನ್ನು ಪುರಸ್ಕರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಸ್ಫರ್ಧೆಯಲ್ಲಿ ಪಾಲ್ಗೊಳ್ಳಲು WWW.DARE2DREAMAWARDS.COM ಗೆ ಲಾಗ್ ಇನ್ ಆಗಿ, ನಿಮ್ಮ ಅಥವಾ ನಿಮ್ಮ ಕಂಪನಿಯನ್ನು ನೋಂದಾಯಿಸಿಕೊಳ್ಳಬಹುದು.
ಇದನ್ನೂ ಓದಿ: ಶಾಲೆಗೆ ಚಕ್ಕರ್ ಕೂಲಿಗೆ ಹಾಜರ್; ಟಿವಿ9 ವರದಿ ಪ್ರಸಾರವಾದ ಬೆನ್ನೆಲೆ ಎಚ್ಚೆತ್ತ ಅಧಿಕಾರಿಗಳು