Dasara 2021: ದಸರಾ ಹಬ್ಬದ ನಂತರ ಶಾಲೆಗಳಲ್ಲಿ ಬಿಸಿಯೂಟ ಆರಂಭ: ಶಿಕ್ಷಣ ಸಚಿವ ಬಿ ಸಿ ನಾಗೇಶ್ | Karnataka School Reopen Education Minister BC Nagesh says Mid Day Meal will start after Dasara Festival

Dasara 2021: ದಸರಾ ಹಬ್ಬದ ನಂತರ ಶಾಲೆಗಳಲ್ಲಿ ಬಿಸಿಯೂಟ ಆರಂಭ: ಶಿಕ್ಷಣ ಸಚಿವ ಬಿ ಸಿ ನಾಗೇಶ್

ಬಿಸಿಯೂಟ

ಉಡುಪಿ: ಭಗವಂತನ ಅನುಗ್ರಹದಿಂದ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಹಲವಾರು ಜಿಲ್ಲೆಯಲ್ಲಿ ಪಾಸಿಟಿವಿಟಿ ಶೂನ್ಯ ಪ್ರಮಾಣದಲ್ಲಿದೆ. ಹೀಗಾಗಿ ತಜ್ಞರ ಅಭಿಪ್ರಾಯದಂತೆ ದಸರಾ ಮುಗಿದ ತಕ್ಷಣವೇ ಶಾಲೆಗಳು ಆರಂಭಿಸುತ್ತೇವೆ. ಜತೆಗೆ ದಸರಾ ಮುಗಿದ ತಕ್ಷಣ ಬಿಸಿಯೂಟ ಆರಂಭವಾಗಲಿದೆ. ಆಯಾ ಜಿಲ್ಲೆಯ ಅಧಿಕಾರಿಗಳು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಎಲ್ಲರಿಗೂ ಶಾಲೆ ಕಡ್ಡಾಯ ಮಾಡಿಲ್ಲ, ಮುಂದೆಯೂ ಕಡ್ಡಾಯ ಮಾಡಲ್ಲ. ಆನ್ಲೈನ್ ಆಫ್ ಲೈನ್ ಎರಡು ಮಾದರಿಯಲ್ಲಿ ತರಗತಿಗಳು ನಡೆಯಲಿದೆ. ಈಗ ಆರಂಭವಾಗಿರುವ ಶಾಲೆಗಳ ಹಾಜರಾತಿ ತೃಪ್ತಿಕರವಾಗಿದೆ. ಆನ್ಲೈನ್ ತರಗತಿಯಿಂದ ಕೆಳ ಗ್ರಾಮೀಣ ಮಕ್ಕಳಿಗೆ ತೊಂದರೆಯಾಗಿದೆ. ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಮಕ್ಕಳ ಹಾಜರಾತಿ ಶೇ. 90ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು.

ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ; ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಮರ್ಥನೆ
ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ರೋಹಿತ್ ಚಕ್ರತೀರ್ಥ ಅವರನ್ನು ಆಯ್ಕೆ ಮಾಡಿರುವುದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಮರ್ಥಿಸಿಕೊಂಡಿದ್ದಾರೆ. ಇತ್ತೀಚಿಗೆ ಎಲ್ಲವನ್ನೂ ವಿರೋಧಿಸುವ ಮಾನಸಿಕತೆ ಬಂದುಬಿಟ್ಟಿದೆ. ಕಾಂಗ್ರೆಸ್​ಗೆ ವಿರೋಧ ಪಕ್ಷದಲ್ಲಿ ಹೆಚ್ಚು ದಿನ ಕುಳಿತ ಅನುಭವವಿಲ್ಲ. ವಿರೋಧ ಪಕ್ಷದ ಸಂಸ್ಕೃತಿಯನ್ನು ಕಾಂಗ್ರೆಸ್ ಕಲಿತಿಲ್ಲ. ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ ಅವರನ್ನು ಆಯ್ಕೆಯನ್ನು ಯಾವ ಕಾರಣಕ್ಕೆ ವಿರೋಧಿಸುತ್ತೀರಿ ಎಂದು ಕಾಂಗ್ರೆಸ್​ನವರು ತಿಳಿಸಲಿ ಎಂದು ಅವರು ಪ್ರಶ್ನಿಸಿದ್ದಾರೆ.

ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅವಶ್ಯಕತೆ ಇಲ್ಲದಿದ್ದರೆ ಬರಗೂರು ರಾಮಚಂದ್ರಪ್ಪರನ್ನು ಯಾಕೆ ಈ ಹಿಂದೆ ಅಧ್ಯಕ್ಷರನ್ನಾಗಿ ಮಾಡಿದಿರಿ? ಎಂದು ಪ್ರಶ್ನಿಸಿರುವ ಅವರು, ಈಹಿಂದೆ ಪಠ್ಯಪುಸ್ತಕಗಳನ್ನು ನೋಡಿದರೆ ಜನ ಹಿಡ್ಕೊಂಡು ಹೊಡೆಯಬೇಕಿತ್ತು. ವಿವೇಕಾನಂದರ ಭಾಷಣವನ್ನೇ ಪಠ್ಯದಲ್ಲಿ ತಿರುಚಲಾಗಿತ್ತು. ಜ್ಞಾನಪೀಠ ಪಡೆದವರ ಪಾಠವನ್ನೇ ಕಿತ್ತು ಹಾಕಲಾಗಿತ್ತು. ವಾಲ್ಮೀಕಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಹಾಋಷಿಯಾಗಿದ್ದಾ? ವಾಲ್ಮೀಕಿ ಅವರನ್ನು ಏಕವಚನದಲ್ಲಿ ಸಂಬೋಧಿಸಲಾಗಿತ್ತು. ಪುಸ್ತಕದ ಬಗ್ಗೆ ಸಾರ್ವಜನಿಕವಾಗಿ ಇಂತಹ ಸಾವಿರಾರು ಆಪಾದನೆ ಬಂದಿದ್ದವು. ಇದೀಗ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರೋಹಿತ್ ಚಕ್ರತೀರ್ಥ ಅವರನ್ನು ಆಯ್ಕೆ ಮಾಡಿರುವುದನ್ನು ವೈಯಕ್ತಿಕ ವೈಚಾರಿಕತೆಯಲ್ಲಿ ಮುಳುಗಿರುವವರು ಪ್ರಶ್ನೆ ಮಾಡುತ್ತಿದ್ದಾರೆ. ತಾವು ಮಾಡಿದ ತಪ್ಪು ಎಲ್ಲಿ ಜಗಜ್ಜಾಹೀರಾಗಿತ್ತೋ ಎಂಬ ಭಯ ಕೆಲವರಿಗೆ ಇದೆ ಎಂದು ಅವರು ವ್ಯಂಗ್ಯ ಮಾಡಿದರು.

ಸೆಪ್ಟೆಂಬರ್ 8ರಂದು ಹೊರಡಿಸಿರುವ ಅದೇಶದ ಪ್ರಕಾರ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯು 1ರಿಂದ 10ನೆ ತರಗತಿಯವರೆಗಿನ ಸಮಾಜ ವಿಜ್ಞಾನ, ಪರಿಸರ ಅಧ್ಯಯನ ಮತ್ತು ಭಾಷಾ ವಿಷಯಗಳ ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡಲಿದೆ. ಈ ಸಮಿತಿಯನ್ನು ಕಾಂಗ್ರೆಸ್ ಕಟುವಾಗಿ ವಿರೋಧಿಸಿದೆ.

ಇದನ್ನೂ ಓದಿ: 

ಹಂಪಿಯ ಪೌರಾಣಿಕ ಮಹತ್ವ; ರಾಮಾಯಣದಲ್ಲಿ ನಡೆದ ಪೌರಾಣಿಕ ಕಥೆಗಳಿಗೆ ಸಾಕ್ಷಿ ಇಲ್ಲಿನ ದೇವಾಲಯ

ಉಡುಪಿ: ಶಂಖದ ಹುಳುವಿನ ರಂಪಾಟಕ್ಕೆ ಬೇಸತ್ತ ಸ್ಥಳೀಯರು; ರಾತ್ರಿಯಲ್ಲೇ ಓಡಾಡುತ್ತವೆ ಈ ನಿಶಾಚರಿಗಳು

TV9 Kannada

Leave a comment

Your email address will not be published. Required fields are marked *