DC vs RCB, IPL 2022: ಐಪಿಎಲ್​​ನಲ್ಲಿ ಡಬಲ್ ಧಮಾಕ: ಗೆಲುವಿನ ಲಯಕ್ಕೆ ಮರಳುತ್ತಾ ಆರ್​ಸಿಬಿ? | IPL 2022 Double Header Mumbai Indians will battle against Lucknow Super Giants and DC vs RCB Match


DC vs RCB, IPL 2022: ಐಪಿಎಲ್​​ನಲ್ಲಿ ಡಬಲ್ ಧಮಾಕ: ಗೆಲುವಿನ ಲಯಕ್ಕೆ ಮರಳುತ್ತಾ ಆರ್​ಸಿಬಿ?

DC vs RCB IPL 2022

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿಂದು (IPL 2022) ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಇದುವರೆಗೆ ಗೆಲುವಿನ ಮುಖ ಕಾರಣದ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೇಂಟ್ಸ್ (MI vs LSG) ಅನ್ನು ಎದುರಿಸಲಿದೆ. ಸಂಜೆ 7:30ಕ್ಕೆ ಶುರುವಾಗಲಿರುವ ಮತ್ತೊಂದು ಪಂದ್ಯದಲ್ಲಿ ರಿಷಭ್ ಪಂತ್ ಅವರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB) ತಂಡ ಮುಖಾಮುಖಿ ಆಗಲಿದೆ. ಇದರಲ್ಲಿ ಡೆಲ್ಲಿ ಹಾಗೂ ಆರ್​​ಸಿಬಿ ನಡುವಣ ಕಾದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಉಭಯ ತಂಗಳಿಗೆ ಕೂಡ ಗೆಲುವು ಅನಿವಾರ್ಯವಾಗಿದೆ. ಸದ್ಯಕ್ಕೆ ಆರ್​ಸಿಬಿ 6 ಅಂಕದೊಂದಿಗೆ ಆರನೇ ಸ್ಥಾನದಲ್ಲಿದ್ದರೆ ಇತ್ತ ಪಂತ್ ಪಡೆ 4 ಅಂಕದೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಡೆಲ್ಲಿ vs ಆರ್​ಸಿಬಿ:

ಮೊದಲ ಪಂದ್ಯದ ಸೋಲಿನ ನಂತರ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದ್ದ ಡುಪ್ಲೆಸಿಸ್ ಪಡೆ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮಣಿದಿತ್ತು. ಬೌಲರ್‌ಗಳು ದುಬಾರಿಯಾದದ್ದು ಆ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಮಧ್ಯಮ ವೇಗಿ ಹರ್ಷಲ್ ಪಟೇಲ್ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿದಿದ್ದ ತಂಡವನ್ನು ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಕಾಡಿದ್ದರು. ಹರ್ಷಲ್ ಈಗ ತಂಡವನ್ನು ಸೇರಿಕೊಂಡಿದ್ದು ಶನಿವಾರದ ಪಂದ್ಯದ ಅಂತಿಮ 11ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ನಾಯಕ ಫಾಫ್​​​​, ವಿರಾಟ್​​ ಕೊಹ್ಲಿ, ಗ್ಲೆನ್​​ ಮ್ಯಾಕ್ಸ್​​ವೆಲ್​​ ಮತ್ತು ಅನುಜ್​​ ರಾವತ್​​ ಅಂದುಕೊಂಡಂತೆ ಆಡುತ್ತಿಲ್ಲ. ಆದರೆ ಹೊಸಬ ಸುಯೇಶ್​​ ಪ್ರಭುದೇಸಾಯಿ, ಶಹಬಾಸ್​​ ಅಹ್ಮದ್​​ ಮತ್ತು ದಿನೇಶ್​ ಕಾರ್ತಿಕ್​​ ಆಟ ಎದುರಾಳಿಯ ನಿದ್ದೆಗೆಡಿಸಿದೆ. ವನಿಂದು ಹಸರಂಗ ಬೌಲಿಂಗ್​​ ಮತ್ತು ಬ್ಯಾಟಿಂಗ್​​ ನಲ್ಲಿ ನಿರೀಕ್ಷೆ ಮಾಡಿದಷ್ಟು ಮಿಂಚಿತ್ತಿಲ್ಲ. ಹರ್ಷಲ್​​ ಪಟೇಲ್​​ ಕಮ್​​ಬ್ಯಾಕ್​​ ಡೆತ್​ ಓವರ್​ ಬೌಲಿಂಗ್​​ ಶಕ್ತಿ ತುಂಬಿದೆ. ಮೊಹಮ್ಮದ್​​ ಸಿರಾಜ್​​ ಈ ಬಾರಿ ಐಪಿಎಲ್​​ ನಲ್ಲಿ ದುಬಾರಿ ಬೌಲರ್​. ಜೋಶ್​​ ಹ್ಯಾಜಲ್​​ವುಡ್​​​ ಮಾರಕವಾಗಿ ಗೋಚರಿಸಿದ್ದಾರೆ.

ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ 44 ರನ್‌ಗಳ ಜಯ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಭರವಸೆಯಲ್ಲಿದೆ. ಸತತ ಎರಡು ಅರ್ಧಶತಕ ಗಳಿಸಿರುವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಉತ್ತಮ ಲಯದಲ್ಲಿದ್ದಾರೆ. ಡೇವಿಡ್ ವಾರ್ನರ್ ಉಪಸ್ಥಿತಿ ತಂಡದ ನಿರೀಕ್ಷೆಯನ್ನು ಹೆಚ್ಚಿಸಿದೆ. ಆಯನ್ರಿಚ್ ನಾರ್ಕಿಯ, ಅಕ್ಷರ್ ಪಟೇಲ್‌, ಶಾರ್ದೂಲ್ ಠಾಕೂರ್ ಮತ್ತು ಲಲಿತ್ ಯಾದವ್ ಅವರ ಬಲವೂ ತಂಡಕ್ಕಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಟಾಸೇ ಪ್ರಮುಖ ಪಾತ್ರವಹಿಸಲಿದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ತಂಡವೇ ಲೀಗ್ ಹಂತದ ಎರಡೂ ಪಂದ್ಯಗಳನ್ನು ಜಯಿಸಿತ್ತು. ಐಪಿಎಲ್​ನಲ್ಲಿ ಇದುವರೆಗೆ ಉಭಯ ತಂಡಗಳ ನಡುವೆ ಒಟ್ಟು 26 ಪಂದ್ಯಗಳು ನಡೆದಿದ್ದು, ಈ ಪೈಕಿ ಆರ್​ಸಿಬಿ 15 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 10 ಪಂದ್ಯಗಳಲ್ಲಿ ಜಯವನ್ನು ಕಂಡಿದೆ ಹಾಗೂ ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ.

ಮುಂಬೈ vs ಎಲ್​ಎಸ್​ಜಿ:

ಲೀಗ್‌ನಲ್ಲಿ ಇದುವರೆಗೂ ಗೆಲುವಿನ ಖಾತೆ ತೆರೆಯಲು ವಿಫಲವಾಗಿರುವ ರೋಹಿತ್ ಶರ್ಮ ಬಳಗ ಗೆಲುವಿನ ಒತ್ತಡಕ್ಕೆ ಸಿಲುಕಿದೆ. ನಾಯಕ ರೋಹಿತ್ ಶರ್ಮಾ ಫಾರ್ಮ್ ಚಿಂತೆ ಕಾಡುತ್ತಿದೆ. ಜೊತೆಗೆ ಇದುವರೆಗಿನ ಸೋಲಿನ ಕಹಿ ಮರೆತು ಉತ್ಸಾಹದಿಂದ ಆಡುವ ಸವಾಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಳಲ್ಲೂ ಮುಂಬೈ ತಂಡ ವಿಫಲವಾಗಿದೆ. ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್ ಎದುರು ಕಳೆದ ಪಂದ್ಯದಲ್ಲಿ ವೀರೋಚಿತ ಸೋಲು ಕಂಡಿರುವ ಲಖನೌ ತಂಡ ಕೂಡ ಜಯದ ಹಂಬಲದಲ್ಲಿದೆ. ಮುಂಬೈ ತಂಡದಲ್ಲಿ ಕೆಲವೊಂದು ಬದಲಾವಣೆ ಪಕ್ಕಾ ಆಗಿದೆ. ಟಿಮ್ ಡೇವಿಡ್ ವಾಪಸಾಗಬಹುದು. ಜತೆಗೆ ಫ್ಯಾಬಿಯನ್ ಅಲೆನ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಟಿಮ್ ಸತತವಾಗಿ ವಿಲರಾಗುತ್ತಿರುವ ಎಂ.ಅಶ್ವಿನ್ ಬದಲಿಗೆ ಮಯಾಂಕ್ ಮಾರ್ಕಂಡೆಗೆ ಅವಕಾಶ ನೀಡುವ ಸಾಧ್ಯತೆ ಕೂಡ ಇದೆ.

SRH vs KKR: ಅಯ್ಯರ್ ಪಡೆಗೆ ಮಣ್ಣು ಮುಕ್ಕಿಸಿದ ತ್ರಿಪಾಠಿ-ಮರ್ಕ್ರಮ್: ಹೈದರಾಬಾದ್​ ಹೀಗೊಂದು ಕಮ್​ಬ್ಯಾಕ್

TV9 Kannada


Leave a Reply

Your email address will not be published.