
ಪ್ರೇಯಸಿಯೊಂದಿಗೆ ದೀಪಕ್ ಚಾಹರ್
Deepak Chahar Wedding: ದೀಪಕ್ ಅವರ ವಿವಾಹ ಮಹೋತ್ಸವದಲ್ಲಿ ಐಪಿಎಲ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಪಾಲ್ಗೊಳ್ಳಲಿದ್ದಾರೆ ಮತ್ತು ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳಿವೆ.
ಟೀಂ ಇಂಡಿಯಾದ ಉದಯೋನ್ಮುಖ ತಾರೆ ದೀಪಕ್ ಚಹಾರ್ (Deepak Chahar) ತಮ್ಮ ಬಹುದಿನದ ಗೆಳತಿ ಜಯ ಭಾರದ್ವಾಜ್ (Deepak Chahar and Jaya Bhardwaj Wedding) ಅವರನ್ನು ಬುಧವಾರ (ಜೂನ್ 1)ದಂದು ಮದುವೆಯಾಗಲಿದ್ದಾರೆ. ದೀಪಕ್ ಅವರ ವಿವಾಹ ಮಹೋತ್ಸವದಲ್ಲಿ ಐಪಿಎಲ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಕೂಡ ಪಾಲ್ಗೊಳ್ಳಲಿದ್ದಾರೆ ಮತ್ತು ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಇರುವುದರಿಂದ ಕ್ರಿಕೆಟ್ ಜಗತ್ತಿನಲ್ಲಿ ಈ ಮದುವೆಯ ವಾತಾವರಣ ಬಿಸಿಯಾಗಿದೆ. ಈ ಮದುವೆಯಲ್ಲಿ ಧೋನಿ ಮಾತ್ರವಲ್ಲದೆ ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಹಿರಿಯ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಕೂಡ ಭಾಗವಹಿಸಲಿದ್ದಾರೆ. ದೀಪಕ್ ಮದುವೆಗೆ ಎರಡೂ ಕುಟುಂಬದ ವಿಶೇಷ ವ್ಯಕ್ತಿಗಳು ಮತ್ತು ದೀಪಕ್ ಆಪ್ತರನ್ನು ಆಹ್ವಾನಿಸಲಾಗಿದೆ.
ಮಂಗಳವಾರದಿಂದ ಮದುವೆ ವಿಧಿವಿಧಾನಗಳು ಆರಂಭಗೊಂಡಿವೆ. ಆಗ್ರಾದ ದೊಡ್ಡ ಪಂಚತಾರಾ ಹೋಟೆಲ್ನಲ್ಲಿ ಈ ಮದುವೆ ನಡೆಯುತ್ತಿದೆ. ಮಂಗಳವಾರ ಸಂಜೆ ಈ ಹೋಟೆಲ್ನಲ್ಲಿ ಮೆಹೆಂದಿ ಮತ್ತು ಸಂಗೀತ ಸಮಾರಂಭ ನಡೆಯಿತು. ಬುಧವಾರವೂ ಬೆಳಗ್ಗೆಯಿಂದ ವಿವಾಹ ವಿಧಿವಿಧಾನಗಳು ನಡೆಯಲಿದ್ದು, ಸಂಜೆಯ ವೇಳೆಗೆ ವಿವಾಹ ನೆರವೇರಲಿದೆ. ಈ ಮೆರವಣಿಗೆಯಲ್ಲಿ ದೀಪಕ್ನ ಹಲವು ಆಪ್ತರು ಹಾಗೂ ಕ್ರಿಕೆಟ್ ಲೋಕದ ತಾರೆಯರು ಕಾಣಿಸಿಕೊಳ್ಳಲಿದ್ದಾರೆ.