Deepika Padukone: ‘ಪಠಾಣ್​’ ಚಿತ್ರದಲ್ಲಿ ಹಾಟೆಸ್ಟ್​ ಮತ್ತು ಕೂಲೆಸ್ಟ್​ ದೀಪಿಕಾ; ಪಾತ್ರದ ಬಗ್ಗೆ ಮಾಹಿತಿ ನೀಡಿದ ಸಿದ್ದಾರ್ಥ್​ ಆನಂದ್​ – Pathaan will showcase Deepika Padukone in hottest and coolest getup says Siddharth Anand


Siddharth Anand | Pathaan Movie: ‘ಭಾರತೀಯ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ ಅವರು ದೊಡ್ಡ ಸ್ಟಾರ್​ ನಟಿ. ಅವರ ಸ್ಟಾರ್​ಡಮ್​ಗೆ ತಕ್ಕಂತೆಯೇ ಈ ಪಾತ್ರವನ್ನು ಚಿತ್ರಿಸಲಾಗಿದೆ’ ಎಂದಿದ್ದಾರೆ ಸಿದ್ದಾರ್ಥ್​ ಆನಂದ್​.

Deepika Padukone: ‘ಪಠಾಣ್​’ ಚಿತ್ರದಲ್ಲಿ ಹಾಟೆಸ್ಟ್​ ಮತ್ತು ಕೂಲೆಸ್ಟ್​ ದೀಪಿಕಾ; ಪಾತ್ರದ ಬಗ್ಗೆ ಮಾಹಿತಿ ನೀಡಿದ ಸಿದ್ದಾರ್ಥ್​ ಆನಂದ್​

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಪ್ರತಿಭೆ ಏನು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಹಲವು ಸಿನಿಮಾಗಳ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈಗ ಅವರು ‘ಪಠಾಣ್’ (Pathaan) ಸಿನಿಮಾದಲ್ಲಿ ನಾಲ್ಕನೇ ಬಾರಿಗೆ ನಟ ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಇದು ಹೈವೋಲ್ಟೇಜ್​ ಸಿನಿಮಾ. ಈ ಚಿತ್ರದಲ್ಲಿ ಶಾರುಖ್​ ಖಾನ್​ ಎದುರು ಜಾನ್​ ಅಬ್ರಾಹಂ ಅವರು ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ದೀಪಿಕಾ ಪಡುಕೋಣೆ ಅವರು ಪಾತ್ರ ಹೇಗಿರಬಹುದು? ಈ ಪ್ರಶ್ನೆಗೆ ನಿರ್ದೇಶಕ ಸಿದ್ದಾರ್ಥ್​ ಆನಂದ್​ (Siddharth Anand) ಅವರೇ ಉತ್ತರ ನೀಡಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಅವರು ಹಾಟೆಸ್ಟ್​ ಮತ್ತು ಕೂಲೆಸ್ಟ್​ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ.

ಶಾರುಖ್​ ಖಾನ್​ ಜನ್ಮದಿನದ ಪ್ರಯುಕ್ತ ನವೆಂಬರ್​ 2ರಂದು ‘ಪಠಾಣ್​’ ಸಿನಿಮಾದ ಟೀಸರ್​ ರಿಲೀಸ್​ ಮಾಡಲಾಯಿತು. ಅದರಲ್ಲಿ ಶಾರುಖ್​ ಅವರ ಆ್ಯಕ್ಷನ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ, ದೀಪಿಕಾ ಪಡುಕೋಣೆ ಅವರ ಹಾಟ್​ ಲುಕ್​ ಕೂಡ ಗಮನ ಸೆಳೆದಿದೆ. ಹಾಗಂತ ಈ ಸಿನಿಮಾದಲ್ಲಿ ಅವರು ಒಂದೇ ಶೇಡ್​ನ ಪಾತ್ರವಿಲ್ಲ. ಹಾಟ್ ಆಗಿರುವುದರ ಜೊತೆಗೆ ಅವರು ಕೂಲೆಸ್ಟ್​ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಸಿದ್ದಾರ್ಥ್​ ಆನಂದ್​ ಹೇಳಿರುವುದರಿಂದ ಫ್ಯಾನ್ಸ್​ ಮನದಲ್ಲಿನ ಕೌತುಕ ಡಬಲ್​ ಆಗಿದೆ.

‘ಭಾರತೀಯ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ ಅವರು ದೊಡ್ಡ ಸ್ಟಾರ್​ ನಟಿ. ಅವರ ಸ್ಟಾರ್​ಡಮ್​ಗೆ ತಕ್ಕಂತೆಯೇ ‘ಪಠಾಣ್​’ ಚಿತ್ರದ ಪಾತ್ರವನ್ನು ಚಿತ್ರಿಸಲಾಗಿದೆ. ಬಾಲಿವುಡ್​ ಇತಿಹಾಸದಲ್ಲಿ ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅವರಿಬ್ಬರ ನಡುವಿನ ಕೆಮಿಸ್ಟ್ರಿ ಉತ್ತಮವಾಗಿದೆ. ಅವರ ಜೋಡಿಯೇ ನಮ್ಮ ‘ಪಠಾಣ್​’ ಚಿತ್ರದಲ್ಲಿನ ಬಹುಮುಖ್ಯ ಆಕರ್ಷಣೆ’ ಎಂದು ಸಿದ್ದಾರ್ಥ್​ ಆನಂದ್​ ಹೇಳಿದ್ದಾರೆ.

‘ಪಠಾಣ್​’ ಚಿತ್ರಕ್ಕೆ ‘ಯಶ್ ರಾಜ್​ ಫಿಲ್ಮ್ಸ್​’ ಸಂಸ್ಥೆ ಬಂಡವಾಳ ಹೂಡಿದೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ಸಿದ್ಧವಾಗುತ್ತಿದೆ ಎಂಬುದಕ್ಕೆ ಟೀಸರ್​​ನಲ್ಲಿ ಸಾಕ್ಷಿ ಸಿಕ್ಕಿದೆ. 2023ರ ಜನವರಿ 25ರಂದು ಈ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್​ ಆಗಲಿದೆ. ಹಿಂದಿ ಜೊತೆಗೆ ತಮಿಳು ಮತ್ತು ತೆಲುಗಿಗೂ ಡಬ್​ ಆಗಿ ತೆರೆ ಕಾಣಲಿದೆ. ಶಾರುಖ್​ ಖಾನ್​ ಅವರು 4 ವರ್ಷಗಳ ಬಳಿಕ ದೊಡ್ಡ ಪರದೆಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ‘ಪಠಾಣ್​’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಹಿಂದಿಯಲ್ಲಿ ಈ ಚಿತ್ರದ ಟೀಸರ್​ ಈವರೆಗೂ 35 ಮಿಲಿಯನ್​ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ.

TV9 Kannada


Leave a Reply

Your email address will not be published.