Delhi Rain: ದೆಹಲಿಯಲ್ಲಿ ಮಳೆಯಿಂದ ಮನೆ ಕುಸಿದು 8 ಜನರಿಗೆ ಗಾಯ; ನಿಲ್ಲದ ವರುಣನ ಆರ್ಭಟ | Delhi Rain 8 injured as houses collapse after heavy rains and thunderstorms Weather Forecast


Delhi Rain: ದೆಹಲಿಯಲ್ಲಿ ಮಳೆಯಿಂದ ಮನೆ ಕುಸಿದು 8 ಜನರಿಗೆ ಗಾಯ; ನಿಲ್ಲದ ವರುಣನ ಆರ್ಭಟ

ದೆಹಲಿ ಮಳೆ

Image Credit source: DNA

ದೆಹಲಿಯ ಕೆಲವು ಭಾಗಗಳಲ್ಲಿ ಮರಗಳು ನೆಲಕ್ಕುರುಳಿವೆ. ಶ್ಚಿಮ ದೆಹಲಿಯ ಜವಲ್ಪುರಿಯಲ್ಲಿ ಮನೆ ಕುಸಿದು ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನವದೆಹಲಿ: ಇಂದು ಬೆಳಿಗ್ಗೆ ಭಾರೀ ಮಳೆ (Rainfall) ಮತ್ತು ಚಂಡಮಾರುತದ (Cyclone) ಹಿನ್ನೆಲೆಯಲ್ಲಿ ದೆಹಲಿಯ ವಿವಿಧ ಭಾಗಗಳಲ್ಲಿ ಮನೆಗಳು ಕುಸಿದು 8 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ (Delhi Rain) ಜವಲ್‌ಪುರಿ, ಗೋಕಲ್‌ಪುರಿ, ಶಂಕರ್‌ ರಸ್ತೆ ಮತ್ತು ಮೋತಿನಗರ ಪ್ರದೇಶಗಳಲ್ಲಿ ಮನೆಗಳು ಕುಸಿದಿವೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ ಗುಡುಗು ಸಹಿತ ಮಳೆಯಿಂದಾಗಿ ದೆಹಲಿಯ ಜನರು ಕಂಗಾಲಾಗಿದ್ದಾರೆ.

ದೆಹಲಿಯ ಕೆಲವು ಭಾಗಗಳಲ್ಲಿ ಮರಗಳು ನೆಲಕ್ಕುರುಳಿವೆ. ಇದು ಈ ಋತುವಿನ ಮೊದಲ ತೀವ್ರ ಚಂಡಮಾರುತ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಗ್ನಿಶಾಮಕ ಇಲಾಖೆಯ ಪ್ರಕಾರ, ಪಶ್ಚಿಮ ದೆಹಲಿಯ ಜವಲ್ಪುರಿಯಲ್ಲಿ ಮನೆ ಕುಸಿದು ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂವರು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜವಲ್ಪುರಿಯಲ್ಲಿ ಕುಸಿತದ ಬಗ್ಗೆ ಬೆಳಿಗ್ಗೆ 5.51ಕ್ಕೆ ಫೋನ್ ಬಂದಿತು. ಎರಡು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದವು. ಈಶಾನ್ಯ ದೆಹಲಿಯ  ಗೋಕಲ್ಪುರಿಯಲ್ಲಿ ಮತ್ತೊಂದು ಮನೆ ಕುಸಿದು ವರದಿಯಾಗಿದೆ ಮತ್ತು ಎರಡು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿವೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗರ್ಗ್ ತಿಳಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *