Devon Conway: ನ್ಯೂಜಿಲೆಂಡ್​ನಿಂದ ನಡೆಯಿತಾ ಮೋಸದಾಟ?: ಔಟ್ ಆದರೂ ಕ್ರೀಸ್​ನಿಂದ ಕದಲದ ಡೆವೋನ್‌ ಕಾನ್ವೇ | Devon Conway did not leave creaze even he was out in the New Zealand vs Afghanistan Match


Devon Conway: ನ್ಯೂಜಿಲೆಂಡ್​ನಿಂದ ನಡೆಯಿತಾ ಮೋಸದಾಟ?: ಔಟ್ ಆದರೂ ಕ್ರೀಸ್​ನಿಂದ ಕದಲದ ಡೆವೋನ್‌ ಕಾನ್ವೇ

Devon Conway and Kane Williamson

ಟಿ20 ವಿಶ್ವಕಪ್​ನಲ್ಲಿ (T20 World Cup) ಭಾನುವಾರ ನಡೆದ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ (New Zealand vs Afghanistan) ನಡುವಣ ಪಂದ್ಯ ಕೇವಲ ಈ ಎರಡು ತಂಡಗಳಿಗಲ್ಲ, ಮೂರು ತಂಡಗಳಿಗೆ ಮಹತ್ವದ್ದಾಗಿತ್ತು. ಟೂರ್ನಮೆಂಟ್​ನಲ್ಲಿ ಉಳಿದು ಸೆಮಿ ಫೈನಲ್​ಗೇರಲು ಮೈದಾನದಲ್ಲಿ ಕಿವೀಸ್-ಅಫ್ಘಾನ್ ಪಡೆ ಹೋರಾಟ ನಡೆಸುತ್ತಿದ್ದರೆ ಅತ್ತ ಭಾರತ ಕ್ರಿಕೆಟ್ ತಂಡದ (Indian Cricket Team) ಭವಿಷ್ಯ ಈ ಪಂದ್ಯದ ಫಲಿತಾಂಶದ ಮೇಲೆ ನಿಂತಿತ್ತು. ಅಂತಿಮವಾಗಿ ನ್ಯೂಜಿಲೆಂಡ್ (New Zealand Cricket Team) 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದೆ. ಟೀಮ್ ಇಂಡಿಯಾ (Team India) ಹಾಗೂ ಅಫ್ಘಾನಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಾಗಿದೆ. ಇದರ ನಡುವೆ ನ್ಯೂಜಿಲೆಂಡ್ ಮೋಸದಾಟ ಆಡಿತಾ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ. ಇದಕ್ಕೆ ಕಾರಣ ನ್ಯೂಜಿಲೆಂಡ್​ನ ಪ್ರಮುಖ ಬ್ಯಾಟರ್ ಡೆವೋನ್‌ ಕಾನ್ವೇ (Devon Conway) ಔಟ್ ಆಗಿದ್ದರೂ ಸಹ ಕ್ರೀಸ್​ನಿಂದ ಕದಲದೆ ಉಳಿದಿರವುದು.

ಹೌದು, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ನಾಯಕನ ನಿರ್ಧಾರ ಪವರ್​ ಪ್ಲೇಯಲ್ಲೇ ತಲೆಕೆಳಗಾಯಿತು. ಮೊದಲ 6 ಓವರ್ ಒಳಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದಲ್ಲದೆ ತಂಡದ ಮೊತ್ತ 30 ಕೂಡ ದಾಟಲಿಲ್ಲ. ಮೊದಲ ಓವರ್‌ನಲ್ಲೇ ಫೋರ್ ಬಾರಿಸಿದ್ದ ಮೊಹಮ್ಮದ್ ಶೆಹಝಾದ್‌ (4) ಮತ್ತು ಸ್ಟಾರ್‌ ಓಪನರ್‌ ಹಝರತುಲ್ಲಾ ಝಝಾಯ್‌ (2) ವಿಕೆಟ್‌ ಪತನದೊಂದಿಗೆ ತಂಡ ರಕ್ಷಣಾತ್ಮಕ ಆಟದ ಮೊರೆ ಹೋಯಿತು.

ತೀರಾ ನಿಧಾನಗತಿಯ ಆಟವಾಡಿದ ಅಫ್ಘಾನಿಸ್ತಾನ 9 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್‌ ನಷ್ಟದಲ್ಲಿ 48 ರನ್‌ ಮಾತ್ರವೇ ಗಳಿಸಿತ್ತು. ಬಳಿಕ ಇನಿಂಗ್ಸ್‌ನ ಅಂತ್ಯದ ಓವರ್‌ಗಳಲ್ಲಿ ಅಬ್ಬರಿಸಿದ ನಜೀಬುಲ್ಲ ಝದ್ರಾನ್‌ 48 ಎಸೆತಗಳಲ್ಲಿ 73 ರನ್‌ ಸಿಡಿಸಿ ತಂಡಕ್ಕೆ 20 ಓವರ್‌ಗಳಲ್ಲಿ 124/8 ರನ್‌ಗಳ ಗೌರವಾನ್ವಿತ ಮೊತ್ತ ತಂದುಕೊಟ್ಟರು. ಇದು ನ್ಯೂಜಿಲೆಂಡ್​ಗೆ ಸವಾಲಿನ ಮೊತ್ತ ಆಗಲೇಯಿಲ್ಲ. ಮಾರಕ ಸ್ಪಿನ್ನರ್​ಗಳಾದ ರಶೀದ್ ಖಾನ್ ಮತ್ತು ಮಜೀಬ್ ಉರ್ ರೆಹ್ಮಾನ್ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದರು.

125 ರನ್‌ಗಳ ಗುರಿ ಪಡೆದ ನ್ಯೂಜಿಲೆಂಡ್‌ ತಂಡ ನಾಯಕ ಕೇನ್‌ ವಿಲಿಯಮ್ಸನ್‌ (ಅಜೇಯ 40) ಮತ್ತು ಡೆವೋನ್‌ ಕಾನ್ವೇ (ಅಜೇಯ 36) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ 18.1 ಓವರ್‌ಗಳಲ್ಲಿ 125 ರನ್‌ ಬಾರಿಸಿ ಸುಲಭ ಜಯ ತನ್ನದಾಗಿಸಿಕೊಂಡಿತು. ಆದರೆ, ಡೆವೋನ್‌ ಕಾನ್ವೇ ಈ ಪಂದ್ಯದಲ್ಲಿ ಕ್ರೀಡಾಸ್ಪೂರ್ತಿಯನ್ನೇ ಮರೆತುಬಿಟ್ಟರು.

 

ಹೌದು, 11ನೇ ಓವರ್ ಬೌಲಿಂಗ್ ಮಾಡಲು ಬಂದ ಹಮೀದ್ ಹಸನ್ ಅದ್ಭುತ ಡೆಲಿವರಿಯೊಂದನ್ನು ಎಸೆತದರು. ಕ್ರೀಸ್​ನಲ್ಲಿದ್ದ ಡೆವೋನ್‌ ಕಾನ್ವೇಗೆ ಆ ಲೈಟ್ ಸ್ವಿಂಗ್ ಎದುರಿಸಲು ಸಾಧ್ಯವಾಗದ ಪರಿಣಾಮ ಚೆಂಡು ಕೀಪರ್ ಕೈಗೆ ತಲುಪಿತು. ಆದರೆ, ಇದು ಔಟ್ ಆಗಿತ್ತು. ಚೆಂಡು ಕೂದಲೆಳೆಯಷ್ಟು ಬ್ಯಾಟ್​ಗೆ ತಾಗಿತ್ತು. ಈ ವಿಚಾರ ಕಾನ್ವೇಗೆ ಕೂಡ ತಿಳಿದಿತ್ತು. ಕೀಪರ್ ಕ್ಯಾಚ್​ ಹಿಡಿದ ತಕ್ಷಣ ಒಮ್ಮೆಲೆ ಹಿಂದೆ ತಿರುಗಿ ಕ್ಯಾಚ್ ಪಡೆದರಾ ಎಂದು ಗಮನಿಸಿದರು. ಆದರೆ, ಕೀಪರ್ ಮೊಹಮ್ಮದ್ ಶಹ್ಜಾದ್​ಗೆ ಬ್ಯಾಟ್ ಟಚ್ ಆಗಿರುವುದು ಅರಿವಾಗಲಿಲ್ಲ. ಇತ್ತ ಕಾನ್ವೇ ಕೂಡ ತನಗೇನೂ ಗೊತ್ತಿಲ್ಲ ಎಂಬಂತೆ ಕ್ರೀಸ್​ನಲ್ಲೇ ಇದ್ದರು.

 

ಅಬುಧಾಬಿಯ ಶೇಖ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆಲ್‌ರೌಂಡ್‌ ಆಟವಾಡಿ ಒತ್ತಡ ನಿಭಾಯಿಸಿದ ನ್ಯೂಜಿಲೆಂಡ್‌ ತಂಡ ಅಫ್ಘಾನಿಸ್ತಾನ ವಿರುದ್ಧ 8 ವಿಕೆಟ್‌ಗಳ ಅಧಿಕಾರಯುತ ಜಯ ದಾಖಲಿಸಿತು. ಈ ಮೂಲಕ ಎರಡನೇ ಗುಂಪಿನಿಂದ ಸೆಮಿಫೈನಲ್ ಟಿಕೆಟ್‌ ಪಡೆದ ಎರಡನೇ ತಂಡ ಎನಿಸಿಕೊಂಡಿತು.

Mohan Singh Death: ಅಫ್ಘಾನ್ ನ್ಯೂಜಿಲೆಂಡ್ ಪಂದ್ಯಕ್ಕೂ ಮುನ್ನ ಅಬುಧಾಬಿ ಪಿಚ್ ಕ್ಯೂರೇಟರ್ ಮೋಹನ್‌ ಸಿಂಗ್‌ ನಿಗೂಢ ಸಾವು

Virat Kohli: ಭಾರತ vs ನಮೀಬಿಯಾ ಔಪಚಾರಿಕ ಪಂದ್ಯ: ನಾಯಕನಾಗಿ ಇಂದು ವಿರಾಟ್ ಕೊಹ್ಲಿ ಯುಗ ಅಂತ್ಯ

(Devon Conway did not leave creaze even he was out in the New Zealand vs Afghanistan Match)

TV9 Kannada


Leave a Reply

Your email address will not be published. Required fields are marked *