Devon Conway: ಫೈನಲ್ ಫೈಟ್​ಗೂ ಮುನ್ನ ನ್ಯೂಜಿಲೆಂಡ್​ಗೆ ಬಿಗ್ ಶಾಕ್: ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕಿವೀಸ್​ಗೆ ನಿರಾಸೆ | New Zealand wicketkeeper batter Devon Conway ruled out of the T20 World Cup final vs Australia


Devon Conway: ಫೈನಲ್ ಫೈಟ್​ಗೂ ಮುನ್ನ ನ್ಯೂಜಿಲೆಂಡ್​ಗೆ ಬಿಗ್ ಶಾಕ್: ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕಿವೀಸ್​ಗೆ ನಿರಾಸೆ

Devon Conway Injury

ಐಸಿಸಿ ಟಿ20 ವಿಶ್ವಕಪ್​ನಲ್ಲಿ (T20 World Cup) ಇದೇ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೆ ತಲುಪಿರುವ ನ್ಯೂಜಿಲೆಂಡ್ ತಂಡ ಫೈನಲ್​ನಲ್ಲಿ ಆಸ್ಟ್ರೇಲಿಯಾ (New Zealand vs Australia Final) ವಿರುದ್ಧ ಸೆಣೆಸಾಟ ನಡೆಸಲಿದೆ. ಆದರೆ, ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಕೇನ್ ವಿಲಿಯಮ್ಸನ್ (Kane Willi) ಪಡೆಗೆ ಫೈನಲ್ ಫೈಟ್​ಗೂ ಮೊದಲೇ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬ್ಯಾಟರ್ ಇಂಜುರಿಯಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದರಿಂದ ಕಿವೀಸ್​ಗೆ ದೊಡ್ಡ ಹೊಡೆತವಾಗಿದೆ. ಹೌದು, ಬಲಗೈ ಗಾಯಕ್ಕೆ ತುತ್ತಾಗಿರುವ ನ್ಯೂಜಿಲೆಂಡ್‌ (New Zealand Cricket Team) ವಿಕೆಟ್‌ ಕೀಪರ್‌-ಬ್ಯಾಟರ್ ಡೆವೊನ್‌ ಕಾನ್ವೇ (Devon Conway Injury) ಆಸ್ಟ್ರೇಲಿಯಾ ವಿರುದ್ಧ 2021ರ ಐಸಿಸಿ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ಇಷ್ಟು ಮಾತ್ರವಲ್ಲದೆ ಟಿ20 ವಿಶ್ವಕಪ್ ಮುಗಿದ ಬಳಿಕ ನಡೆಯಲಿರುವ ಭಾರತ ವಿರುದ್ಧ ಟಿ20 ಸರಣಿಯಿಂದಲೂ ಹೊರ ಬಿದ್ದಿದ್ದಾರೆ.

ಬುಧವಾರ ಅಬು ಧಾಬಿಯ ಶೇಖ್‌ ಜಾಯೆದ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಸೆಮಿಫೈನಲ್‌ ಕದನದಲ್ಲಿ ಇಂಗ್ಲೆಂಡ್ ವಿರುದ್ಧ ಡೆವೊನ್‌ ಕಾನ್ವೇ 38 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಿಡಿಸಿ 46 ರನ್ ಬಾರಿಸಿ ತಂಡ ಫೈನಲ್​ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಔಟ್‌ ಆದ ಸಂದರ್ಭ ಕೋಪದಲ್ಲಿ ತಮ್ಮ ಬ್ಯಾಟ್‌ನಿಂದಲೇ ಡೆವೊನ್ ತಮ್ಮ ಕೈಗೆ ಹೊಡೆದುಕೊಂಡಿದ್ದರು. ಈ ಸಂದರ್ಭ ಇವರು ಗಾಯಕ್ಕೆ ತುತ್ತಾಗಿದ್ದರು.

ಪಂದ್ಯದ ಬಳಿಕ ಕಾನ್ವೇ ಅವರನ್ನು ಸ್ಕ್ಯಾನ್‌ಗೆ ಒಳಪಡಿಸಲಾಗಿದೆ. ಸದ್ಯ ವರದಿ ಬಂದಿದ್ದು ಕಾನ್ವೇ ಅವರ ಬಲಗೈ ಐದನೇ ಮೆಟಾಕಾರ್ಪಲ್ ಮುರಿದಿರುವುದು ತಿಳಿದುಬಂದಿದೆ. “ಮೈದಾನದಲ್ಲಿ ಏನು ನಡೆಯಿತು ಅದು ಅವರಿಗೆ ನಿಜವಾಗಲೂ ನಿರಾಶೆ ಮೂಡಿಸಿತ್ತು. ಇದನ್ನು ಹೊರಹಾಕುವ ಭರದಲ್ಲಿ ಅವರು ಗೊತ್ತಿಲ್ಲದೆ ಈ ರಿತಿ ಮಾಡಿಕೊಂಡಿದ್ದಾರೆ. ಅವರ ಅನುಪಸ್ಥಿತಿ ವಿಕೆಟ್‌ ಕೀಪಿಂಗ್‌ ಹಾಗೂ ಬ್ಯಾಟಿಂಗ್‌ ಮೇಲೆ ಪರಿಣಾಮ ಬಿರಲಿದೆ. ಆದರೆ ಅವರು ಗಾಯಕ್ಕೆ ತುತ್ತಾಗಿರುವುದು ನಿಜಕ್ಕೂ ದುರದೃಷ್ಟಕರ ಎಂದು ನ್ಯೂಜಿಲೆಂಡ್‌ ಹೆಡ್‌ ಕೋಚ್‌ ಗ್ಯಾರಿ ಸ್ಟೀಡ್‌ ಹೇಳಿದ್ದಾರೆ.

ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌ 12ರ ಆರಂಭಿಕ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಲಾಕಿ ಫರ್ಗೂಸನ್‌ ಟೂರ್ನಿಯಿಂದಲೇ ಹೊರ ನಡೆದಿದ್ದರು. ಇದೀಗ ಡೆವೊನ್‌ ಕಾನ್ವೇ ತಾವೇ ಮಾಡಿಕೊಂಡಿರುವ ಗಾಯಕ್ಕೆ ಒಳಗಾಗಿ ಟಿ20 ವಿಶ್ವಕಪ್ ಮಹತ್ವದ ಫೈನಲ್‌ ಹಣಾಹಣಿಯಿಂದ ಹೊರ ಬಿದ್ದಿರುವುದು ಕೇನ್ ಪಡೆಗೆ ದೊಡ್ಡ ಹಿನ್ನಡೆಯಾಗಿದೆ. ಇದೀಗ ಫೈನಲ್ ತಲುಪಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಕಡುವೈರಿ ತಂಡಗಳಾಗಿದ್ದು, ನ. 14ರಂದು ನಡೆಯುವ ಫೈನಲ್ ಪಂದ್ಯ ಭಾರತ- ಪಾಕಿಸ್ತಾನ ಪಂದ್ಯದಷ್ಟೇ ಜಿದ್ದಾಜಿದ್ದಿಯಿಂದ ಕೂಡಿದೆ.

Babar Azam: ಸೋಲಿನ ಬೆನ್ನಲ್ಲೇ ತನ್ನದೇ ತಂಡದ ಪ್ಲೇಯರ್ ಅನ್ನು ದೂರಿದ ಪಾಕಿಸ್ತಾನ ನಾಯಕ ಬಾಬರ್ ಅಜಾಮ್

Matthew Wade Sixes: 6, 6, 6- ಪಾಕಿಸ್ತಾನವನ್ನು ಮನೆಗಟ್ಟಿದ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸ್​ ವಿಡಿಯೋ ಇಲ್ಲಿದೆ ನೋಡಿ

(New Zealand wicketkeeper-batter Devon Conway ruled out of the T20 World Cup final vs Australia)

TV9 Kannada


Leave a Reply

Your email address will not be published. Required fields are marked *