
‘ಧಾಕಡ್’ ಚಿತ್ರದಲ್ಲಿ ಕಂಗನಾ ರಣಾವತ್
Kangana Ranaut | Dhaakad Movie: ಕಂಗನಾ ರಣಾವತ್ ನಟನೆಯ ಈ ಚಿತ್ರದ ಬಂಡವಾಳ ಸುಮಾರು 80 ಕೋಟಿ ರೂಗಳಿಂದ 90 ಕೋಟಿ ರೂ. ಪ್ರಚಾರದ ಖರ್ಚೂ ಸೇರಿದರೆ ಚಿತ್ರದ ಒಟ್ಟಾರೆ ಖರ್ಚು 100 ಕೋಟಿ ರೂ ಮುಟ್ಟುತ್ತದೆ. ಆದರೆ ಚಿತ್ರ ಮಾತ್ರ ಹೀನಾಯ ಸೋಲಿನ ರುಚಿ ಕಂಡಿದೆ.
ಕಂಗನಾ ರಣಾವತ್ (Kangana Ranaut) ನಟನೆಯ ‘ಧಾಕಡ್’ (Dhaakad) ಚಿತ್ರ ರಿಲೀಸ್ಗೂ ಮೊದಲು ತೀವ್ರ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಚಿತ್ರದ ಬಿಡುಗಡೆಯ ದಿನದಿಂದಲೇ ಬಹಳ ನೀರಸ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮಹಿಳಾ ಸೂಪರ್ ಹೀರೋ ಮಾದರಿಯ ಈ ಚಿತ್ರದಲ್ಲಿ ಕಂಗನಾ ಏಜೆಂಟ್ ಅಗ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಪ್ರೇಕ್ಷಕರಿಗೆ ಈ ಪ್ರಯತ್ನ ಮೆಚ್ಚುಗೆಯಾಗಿಲ್ಲ. ಜತೆಗೆ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳೂ ಸಿಕ್ಕಿದ್ದು ಮತ್ತಷ್ಟು ಹಿನ್ನಡೆಯಾಯಿತು. ಇದೀಗ ಚಿತ್ರ ತೆರೆಕಂಡು ಒಂದು ವಾರವಾಗಿದ್ದು, ದಿನದಿಂದ ದಿನಕ್ಕೆ ಗಳಿಕೆ ಕುಸಿಯುತ್ತಿದೆ. ಬಾಲಿವುಡ್ ಹಂಗಾಮಾ ಚಿತ್ರದ 8ನೇ ದಿನದ ಗಳಿಕೆಯ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ದೇಶಾದ್ಯಂತ ಶುಕ್ರವಾರ ‘ಧಾಕಡ್’ ಚಿತ್ರದ ಕೇವಲ 20 ಟಿಕೆಟ್ಗಳು ಮಾರಾಟವಾಗಿವೆ. ಅದರಿಂದ ‘ಧಾಕಡ್’ ಗಳಿಸಿದ್ದು 4,420 ರೂಗಳನ್ನು ಮಾತ್ರ!
8 ದಿನಗಳ ಅವಧಿಯಲ್ಲಿ ಚಿತ್ರದ ಒಟ್ಟಾರೆ ಕಲೆಕ್ಷನ್ 3 ಕೋಟಿ ರೂ ಆಸುಪಾಸಿನಲ್ಲಿದೆ. ಈಗಾಗಲೇ ಚಿತ್ರಕ್ಕೆ ಲಭ್ಯವಾಗಿದ್ದ ಥಿಯೇಟರ್ಗಳಿಂದ ಸಿನಿಮಾವನ್ನು ತೆಗೆಯಲಾಗುತ್ತಿದೆ. ಪ್ರೇಕ್ಷಕರ ಅಲಭ್ಯತೆಯಿಂದ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಿಂದ ‘ಧಾಕಡ್’ ಮರೆಯಾಗುವ ಸಾಧ್ಯತೆ ಇದೆ.
ಕಂಗನಾ ರಣಾವತ್ ನಟನೆಯ ಈ ಚಿತ್ರದ ಬಂಡವಾಳ ಸುಮಾರು 80 ಕೋಟಿ ರೂಗಳಿಂದ 90 ಕೋಟಿ ರೂ. ಪ್ರಚಾರದ ಖರ್ಚೂ ಸೇರಿದರೆ ಚಿತ್ರದ ಒಟ್ಟಾರೆ ಖರ್ಚು 100 ಕೋಟಿ ರೂ ಮುಟ್ಟುತ್ತದೆ. ಆದರೆ ಚಿತ್ರ ಮಾತ್ರ ಹೀನಾಯ ಸೋಲಿನ ರುಚಿ ಕಂಡಿದೆ.