Diabetes: ನಿಮ್ಮ ಬಾಯಿಯಲ್ಲಿ ಕಾಣಿಸಿಕೊಳ್ಳುವ ಈ ಚಿಹ್ನೆಗಳು ಏನನ್ನು ಸೂಚಿಸುತ್ತವೆ? | What Are The Signs in your mouth that signal that your blood sugar may be too high


ಮಧುಮೇಹ: ನಿಮ್ಮ ಬಾಯಿಯಲ್ಲಿ ಕಾಣಿಸಿಕೊಳ್ಳುವ ಹಲವು ಚಿಹ್ನೆಗಳು ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದೆ ಎಂಬುದರ ಬಗ್ಗೆ ಸುಳಿವು ನೀಡುತ್ತವೆ. ಹೌದು, ಮಧುಮೇಹ(Sugar)ವೆನ್ನುವುದು ಬದುಕಿದ್ದಂತೆಯೇ ನರಕಕ್ಕೆ ತಳ್ಳುವ ಕಾಯಿಲೆಯಾಗಿದ್ದು, ಕಾಯಿಲೆ ಒಮ್ಮೆ ಆವರಿಸಿದರೆ ನಿಮಗೆ ಬೇಕಾದ ಸಿಹಿ ತಿನಿಸುಗಳನ್ನು ಮುಟ್ಟಲೂ ಸಾಧ್ಯವಿಲ್ಲ.

ನಿಮ್ಮ ಬಾಯಿಯಲ್ಲಿ ಕಾಣಿಸಿಕೊಳ್ಳುವ ಹಲವು ಚಿಹ್ನೆಗಳು ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದೆ ಎಂಬುದರ ಬಗ್ಗೆ ಸುಳಿವು ನೀಡುತ್ತವೆ. ಹೌದು, ಮಧುಮೇಹ(Diabetes))ವೆನ್ನುವುದು ಬದುಕಿದ್ದಂತೆಯೇ ನರಕಕ್ಕೆ ತಳ್ಳುವ ಕಾಯಿಲೆಯಾಗಿದ್ದು, ಕಾಯಿಲೆ ಒಮ್ಮೆ ಆವರಿಸಿದರೆ ನಿಮಗೆ ಬೇಕಾದ ಸಿಹಿ ತಿನಿಸುಗಳನ್ನು ಇನ್ನುವಂತೆಯೇ ಇಲ್ಲ.

ಮಧುಮೇಹವು ವಿಶ್ವಾದ್ಯಂತ ಮಿಲಿಯನ್​ಗಟ್ಟಲೆ ಜನರನ್ನು ಕಾಡುತ್ತಿದೆ. ಸಾಮಾನ್ಯ ಶೀತ, ಜ್ವರವಾಗಿರಲಿ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹವಾಗಿರಲಿ ಪ್ರತಿಯೊಂದಕ್ಕೆ ತನ್ನದೇ ಆದ ಲಕ್ಷಣಗಳಿರುತ್ತವೆ.

ಲಕ್ಷಣಗಳ ಬಗ್ಗೆ ಮಾಹಿತಿ ಇಲ್ಲಿದೆ

ಗಂಟಲು ಒಣಗುವುದು
ದೇಹದಲ್ಲಿ ಸಕ್ಕರೆ ಪ್ರಮಾಣದಲ್ಲಿ ಹೆಚ್ಚಳವಾದಂತೆ ಬಾಯಿಯಲ್ಲಿ ಲಾಲಾರಸ ಉತ್ಪಾದನೆ ಪ್ರಮಾಣವೂ ಕುಗ್ಗುತ್ತದೆ, ಗಂಟಲು ಒಣಗುತ್ತದೆ, ವಿಪರೀತ ಬಾಯಾರಿಕೆ ಉಂಟಾಗುತ್ತದೆ.

ಪದೇ ಪದೇ ಮೂತ್ರ ವಿಸರ್ಜನೆ
ಆಗಾಗ ಮೂತ್ರ ವಿಸರ್ಜನೆ ಮಾಡುವುದು ಅಥವಾ ರಾತ್ರಿ ಹೊತ್ತು ಮಲಗಿದಾಗ ಪದೇ ಪದೇ ನಿದ್ದೆಯಿಂದ ಏಳುವುದು, ನಿಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಸಾಮಾನ್ಯವಲ್ಲ ಎಂಬ ಸೂಚನೆಯನ್ನು ನೀಡುತ್ತದೆ.

ಸದಾ ಆಯಾಸದಿಂದಿರುವುದು

ಒಂದು ವೇಳೆ ನಿಮ್ಮ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ದೈಹಿಕ ಚಟುವಟಿಕೆಗಳ ಹೊರತಾಗಿಯೂ ಆಯಾಸ ಕಾಣಿಸಿಕೊಂಡರೆ ಇದು ನಿರ್ಜಲೀಕರಣ ಮತ್ತು ಮೂತ್ರಪಿಂಡದ ಹಾನಿಯಂತಹ ಮಧುಮೇಹದ ಮೂಲ ಪರಿಣಾಮಗಳಿಗೆ ಸಂಬಂಧಿಸಿದ ಲಕ್ಷಣ ಇದಾಗಿದೆ.

ನಾಲಿಗೆ ಅಥವಾ ಬಾಯಿಯಲ್ಲಿ ಉರಿ ಅನುಭವ
ನಾಲಿಗೆ ಅಥವಾ ಬಾಯಿಯಲ್ಲಿ ಉರಿಯಾದ ಅನುಭವವುಂಟಾಗುತ್ತದೆ. ಯಾವಾಗಲೂ ಬಾಯಿ ಒಣಗಿಯೇ ಇರುತ್ತದೆ. ಕೆಲವೊಬ್ಬರಿಗೆ ಯಾವುದೇ ಆಹಾರ ರುಚಿಸುವುದೇ ಇಲ್ಲ.

ತೂಕದಲ್ಲಿ ಇಳಿಕೆ: ನಿಮ್ಮ ದೇಹವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಸರಿಯಾಗಿ ಪ್ರಕ್ರಿಯೆಗೊಳಿಸಲು ಸಾಧ್ಯವಾಗದಿದ್ದಾಗ, ಅದು ಕೊಬ್ಬಿನ ಸಂಗ್ರಹಗಳನ್ನು ಬಳಸಿಕೊಳ್ಳುತ್ತದೆ ಮತ್ತು ನಿಮ್ಮ ಪ್ರಯತ್ನವಿಲ್ಲದೆಯೇ ತೂಕ ಇಳಿಕೆಗೆ ಕಾರಣವಾಗುತ್ತದೆ.

ದೃಷ್ಟಿ ದೋಶಗಳು
ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿದ್ದರೆ ಇದು ಕಣ್ಣಿನ ದೃಷ್ಟಿಯ ಮೇಲೆ ನೇರವಾದ ಪರಿಣಾಮ ಉಂಟು ಮಾಡುತ್ತದೆ ಹಾಗೂ ಆಗಾಗ ಕನ್ನಡಕಗಳನ್ನು ಬದಲಿಸುತ್ತಾ ಇರಲು ಕಾರಣವಾಗಬಹುದು.

ಗಾಯವಾದರೆ ಮಾಗಲು ಸಮಯ ಹೆಚ್ಚು ತೆಗೆದುಕೊಳ್ಳುವುದು
ಮಧುಮೇಹ ಬರುವುದಕ್ಕೂ ಮುನ್ನ ಯಾವುದೇ ಗಾಯವಾದಾಗ ಕೆಲವು ನಿಮಿಷಗಳಲ್ಲಿಯೇ ರಕ್ತ ಹೆಪ್ಪುಗಟ್ಟಿ ಶೀಘ್ರವೇ ಮಾಗುತ್ತಿದ್ದುದು ಈಗ ಈ ಕ್ರಿಯೆಗೆ ಹೆಚ್ಚು ಸಮಯ ತೆಗೆದುಕ್ಕೊಳ್ಳುತ್ತಿದ್ದರೆ ಇದು ಮಧುಮೇಹದ ಸೂಚನೆಯ ಜೊತೆಗೇ ಮಾಗದ ಗಾಯದಿಂದಾಗಿ ಸೋಂಕು ಆವರಿಸುವ ಸಾಧ್ಯತೆಯೂ ಹೆಚ್ಚುತ್ತದೆ.

ಸಾಮಾನ್ಯವಾಗಿ ಆಗುವ ಚಿಕ್ಕ ಪುಟ್ಟ ಗಾಯಗಳು ಅಥವಾ ತರಚುಗಾಯಗಳೂ ಗುಣಹೊಂದಲು ಹೆಚ್ಚು ಸಮಯವನ್ನು ಬಳಸಿಕೊಳ್ಳುತ್ತದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *