Diwali 2021: ದೀಪಾವಳಿ ಹಬ್ಬದಂದು ಈ ಕೆಲವು ವಿಷಯಗಳು ನೆನಪಿನಲ್ಲಿರಲಿ | Diwali 2021 take care your health and eye care during festive season


Diwali 2021: ದೀಪಾವಳಿ ಹಬ್ಬದಂದು ಈ ಕೆಲವು ವಿಷಯಗಳು ನೆನಪಿನಲ್ಲಿರಲಿ

ಸಂಗ್ರಹ ಚಿತ್ರ

ದೀಪಾವಳಿ ಹಬ್ಬ ಬಂತೆಂದರೆ ಮನೆಯಲ್ಲಿ ಸಡಗರ ಸಂಭ್ರಮ. ದೀಪಗಳ ಹಬ್ಬದಂದು ಪಟಾಕಿ ಹಚ್ಚುವ ಉತ್ಸಾಹದಲ್ಲಿ ಅದೆಷ್ಟೋ ಅವಘಡಗಳು ಸಂಭವಿಸಿರುವುದನ್ನು ಈ ಹಿಂದೆ ಕಂಡಿದ್ದೇವೆ. ಹಾಗಿರುವಾಗ ಈ ಬಾರಿ ಎಚ್ಚರಿಕೆಯಿಂದ ಇರುವುದು ಒಳಿತು. ಪಟಾಕಿ ಹಚ್ಚುವ ಸಮಯದಲ್ಲಿ ನಿಮ್ಮ ಕಣ್ಣಿನ ಸುರಕ್ಷತೆಗಾಗಿ ಕೆಲವೊಂದಿಷ್ಟು ಸಲಹೆಗಳು ಈ ಕೆಳಗಿನಂತಿದೆ. ಅವುಗಳನ್ನು ಪಾಲಿಸುವ ಮೂಲಕ ನಿಮ್ಮ ಕಣ್ಣುಗಳ ಸುರಕ್ಷತೆ ಮಾಡಿಕೊಳ್ಳಿ.

ಪಟಾಕಿಯ ಬೆಂಕಿ, ಹೊಗೆಗೆ ದೈಹಿಕವಾಗಷ್ಟೇ ಅಲ್ಲ ಮಾನಸಿಕವಾಗಿಯೂ ಕೆಲವು ಅಡೆತಡೆಗಳು ಉಂಟಾಗಬಹುದು. ಪಟಾಕಿ ಸಿಡಿಸುವಾಗ ಬೆಳಕು ಕಣ್ಣಿಗೆ ನೇರವಾಗಿ ಬೀಳುತ್ತದೆ. ಇದು ನಿಮ್ಮ ಕಣ್ಣಿನ ದೃಷ್ಟಿಗೆ ಸಮಸ್ಯೆಯುಂಟು ಮಾಡಬಹುದು. ಹಾಗಿರುವಾಗ ಪಟಾಕಿಯನ್ನು ಹತ್ತಿರದಲ್ಲಿ ಸಿಡಿಸುವುದು ಅಥವಾ ಪಟಾಕಿ ಸಿಡಿಸುವ ಹತ್ತಿರದಲ್ಲಿ ನಿಲ್ಲಬೇಡಿ.

ದೀಪ ಹಚ್ಚುವಾಗ, ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ನೀವು ತೊಟ್ಟ ವಸ್ತ್ರ ಮತ್ತು ಕೆಲಸ ಮಾಡುವಾಗ ಎಚ್ಚರವಿರಲಿ. ಜೊತೆಗೆ ದೀಪಾವಳಿ ವಿಶೇಷವಾಗಿ ತೊಟ್ಟ ಒಳ್ಳೆಯ ಉಡುಗೆಯಲ್ಲಿ ಪಟಾಕಿ ಹಚ್ಚುವ ಸಾಹಸಕ್ಕೆ ಮುಂದಾಗಬೇಡಿ. ಪಟಾಕಿ ಹಚ್ಚುವಾಗ ನೀವು ಧರಿಸಿರುವ ಉಡುಗೆಯ ಬಗ್ಗೆಯೂ ಲಕ್ಷ್ಯವಿರಲಿ.

ಅಡುಗೆ ಮಾಡುವಾಗ ಮತ್ತು ದೀಪ ಬೆಳಗುವಾಗ ನೀವು ಧರಿಸಿರುವ ಉಡುಗೆಯ ಬಗ್ಗೆ ಗಮನವಿರಲಿ. ಪಟಾಕಿ ಸಿಡುಸುವಾಗ ಬಹಳ ಎಚ್ಚರಿಕೆಯಿಂದಿರಿ. ಪಟಾಕಿ ಸುಡುವಾಗ ವಯಸ್ಕರು ಮತ್ತು ಮಕ್ಕಳ ಬಗ್ಗೆ ಎಚ್ಚರವಿರಲಿ ಹಾಗೂ ರಸ್ತೆಯಲ್ಲಿ ಪಟಾಕಿ ಸಿಡಿಸುವುದಾದರೆ ವಾಹನಗಳು ಬರುತ್ತಿರುತ್ತವೆ ಆ ಕುರಿತಾಗಿ ಗಮನವಿರಲಿ.

ಕಣ್ಣಿನ ಸುರಕ್ಷತೆಗಾಗಿ ಕನ್ನಡಕವನ್ನು ಬಳಸಿ. ಶ್ವಾಸಕೋಶ ಸಂಬಂಧ ಕಾಯಿಲೆ ಇರುವವರು ಪಟಾಕಿಯ ಹಚ್ಚುವ ಸಮಯದಲ್ಲಿ ಅಥವಾ ಅದರ ಹೊಗೆಯಿಂದ ದೂರವಿರಿ. ಈ ಕೆಲವು ವಿಷಯಗಳು ಹಬ್ಬದ ಸಮಯದಲ್ಲಿ ನೆನಪಿನಲ್ಲಿರಲಿ. ನಿಮ್ಮ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ. ನಿಯಮಿತವಾಗಿ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅಭ್ಯಾಸದಲ್ಲಿರಲಿ.

ಇದನ್ನೂ ಓದಿ:

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಜೋ ಬೈಡೆನ್; ವೈಟ್​ಹೌಸ್​ನಲ್ಲಿ ದೀಪಾವಳಿ ಆಚರಣೆ

ದೀಪಾವಳಿ ಪ್ರಯುಕ್ತ ಕಾಶ್ಮೀರದ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ- ಪಾಕಿಸ್ತಾನ ಸೈನಿಕರು

TV9 Kannada


Leave a Reply

Your email address will not be published. Required fields are marked *