1/5
ದೀಪಾವಳಿ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಎಲ್ಲರ ಮನೆಯಲ್ಲಿ ದೀಪಗಳನ್ನು ಹಚ್ಚಿ ಕುಟುಂಬರವರೆಲ್ಲಾ ಸೇರಿ ಸಂತೋಷದಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಶಿವಮೊಗ್ಗದ ತಮ್ಮ ತೋಟದ ಮನೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗೋಪೂಜೆ ಸಲ್ಲಿಸಿ ಹಬ್ಬವನ್ನು ಆಚರಿಸಿದ್ದಾರೆ.
2/5
ಸಚಿವರು ಹಬ್ಬದ ಸಡಗರದಲ್ಲಿ ಕರುವಿಗೆ ಹೂವಿನ ಮಾಲೆ ಕಟ್ಟುತ್ತಿರುವ ದೃಶ್ಯವನ್ನು ನೋಡಬಹುದು. ಹೂವಿನ ಮಾಲೆಯಿಂದ ಕರುವನ್ನು ಸಿಂಗರಿಸುತ್ತಿದ್ದಾರೆ. ಹಸುವಿಗೆ ಅರಿಶಿಣ ಕುಂಕುಮ ಹಚ್ಚಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗಿದೆ.
3/5
ಹಬ್ಬದ ದಿನ ಆರತಿ ಬೆಳಗೆ ಹಸುವಿಗೆ ಪೂಜೆ ಸಲ್ಲಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಯಲ್ಲಿ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಲಾಗಿದೆ.
4/5
ಸಚಿವ ಆರಗ ಜ್ಞಾನೇಂದ್ರ ಅವರ ಕುಟುಂಬಸ್ಥರು ಹಬ್ಬದಲ್ಲಿ ಭಾಗಿಯಾಗಿರುವುದನ್ನು ದೃಶ್ಯದಲ್ಲಿ ನೋಡಬಹುದು. ಸಂತೋಷದಿಂದ ಮನೆಯವರೆಲ್ಲಾ ಸೇರಿ ಹಬ್ಬವನ್ನು ಆಚರಿಸಿದ್ದಾರೆ.
5/5
ದೀಪಾವಳಿ ಹಬ್ಬದ ಬಲಿಪಾಡ್ಯ ಹಿನ್ನಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆರತಿ ಬೆಳಗಿ ಗೋಪೂಜೆ ನೆರವೇರಿಸಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಸಚಿವರು ತಮ್ಮ ತೋಟದಲ್ಲಿ ಪೂಜೆ ನೆರವೇರಿಸಿದ್ದಾರೆ. ಸಚಿವರ ಮನೆಯವರೆಲ್ಲಾ ಸೇರಿ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದಾರೆ.