DK Shivakumar PC; ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆಯುತ್ತಿದೆ, ಸುದ್ದಿಗೋಷ್ಠಿ ಮೂಲಕ ಆಕ್ರೋಶ ಹೊರ ಹಾಕಿದ ಡಿಕೆ ಶಿವಕುಮಾರ್ | DK Shivakumar Hold Press meet on ongoing textbook revision controversy


DK Shivakumar PC; ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆಯುತ್ತಿದೆ, ಸುದ್ದಿಗೋಷ್ಠಿ ಮೂಲಕ ಆಕ್ರೋಶ ಹೊರ ಹಾಕಿದ ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್​

ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ. ಅವರು ಹುಟ್ಟಿದ ಊರು ಎಲ್ಲಾ ತೆಗೆದುಹಾಕಿದರೆ ಇದಕ್ಕಿಂತ ಇನ್ನೇನು ಬೇಕು. ಸಂವಿಧಾನದ ಹೆಸರಲ್ಲಿ ಸರ್ಕಾರ ನಡೆಸ್ತಾ ಇದ್ದಾರೆ. ಇದು ಅಂಬೇಡ್ಕರ್ ಗೆ ಮಾಡಿದ ಅವಮಾನ ಅಲ್ಲ, ಇಡೀ ಭಾರತ ಭೂಮಿಗೆ ಮಾಡಿದ ಅವಮಾನ. ಅವರು ಈ ದೇಶದ ಆಸ್ತಿ.

ಬೆಂಗಳೂರು: ಕುವೆಂಪು ಸರ್ವಜನಾಂಗದ ಶಾಂತಿಯ ತೋಟ ಅಂತ ಹೇಳಿದ್ದರು. ಪಠ್ಯಪುಸ್ತಕ ಪರಿಷ್ಕರಣೆ(Textbook Revision Controversy) ನೆಪದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆಯುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ಸ್ವಾಮೀಜಿಗಳು, ಹಿರಿಯರು, ಸಾಹಿತಿಗಳು ಕೂಡ ಧ್ವನಿ ಎತ್ತಿದ್ದಾರೆ. ಅವರೆಲ್ಲರ ಧ್ವನಿಗೆ ಕಾಂಗ್ರೆಸ್ ಬೆಂಬಲವಾಗಿ ನಿಲ್ಲುತ್ತೆ. ಪಠ್ಯದಲ್ಲಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಕರ್ನಾಟಕ ರಾಜ್ಯದ ವರವೋ ಶಾಪವೋ ಅರ್ಥ ಆಗ್ತಿಲ್ಲ. ನಾವೆಲ್ಲ ನೆಮ್ಮದಿಯಿಂದ ಬದುಕ್ತಿದ್ದೇವೆ. ಕರ್ನಾಟಕದಲ್ಲಿ ಬದುಕು ವರವೋ ಶಾಪವೋ ಗೊತ್ತಾಗ್ತಾ ಇಲ್ಲ. ಇದು ಶಾಂತಿಯ ತೋಟ ಅಂತಾ ಹಿರಿಯರು ಕರೆದಿದ್ದಾರೆ. ಕುವೆಂಪು ಎಲ್ಲಾ ಜನಾಂಗಕ್ಕೂ ಕೂಡ ವಿಶ್ವಮಾನವ ತತ್ವ ಬೋದನೆ ಮಾಡಿ ಶಾಂತಿಯ ತೋಟ ಅಂದಿದ್ದಾರೆ. ಈಗ ಪರಿಷ್ಕರಣ ನೆಪದಲ್ಲಿ ಮಕ್ಕಳ ಪಠ್ಯಪುಸ್ತಕದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡಿತಾ ಇದೆ. ಮೊದಲ ಬಾರಿ ಪೀಠಾಧಿಪತಿಗಳು, ಸಂಘಟನೆಗಳು ರಾಜಕೀಯ ಮುಖಂಡರು ಹೊರತು ಪಡಿಸಿ ಅನೇಕರು ಸರ್ಕಾರದ ವಿರುದ್ಧ ಮನವಿಯನ್ನ ಎತ್ತಿದ್ದಾರೆ.

TV9 Kannada


Leave a Reply

Your email address will not be published.