Dogra Regimental Recruitment 2022: SSLC, PUC ಪಾಸಾದವರಿಗೆ ಇಲ್ಲಿದೆ ಉದ್ಯೋಗಾವಕಾಶ | Dogra Regimental Recruitment 2022 Indian Army Notification


Dogra Regimental Recruitment 2022: ಆಫ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 10 ರೊಳಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

Dogra Regimental Recruitment 2022: ಭಾರತೀಯ ಸೇನೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಸುರ್ವಣಾವಕಾಶ. ಡೋಗ್ರಾ ರೆಜಿಮೆಂಟಲ್ ಸೆಂಟರ್, ಅಯೋಧ್ಯೆ ಕ್ಯಾಂಟ್‌ನಲ್ಲಿ ಲೋವರ್ ಡಿವಿಜನಲ್ ಕ್ಲರ್ಕ್ (ಎಲ್‌ಡಿಸಿ) ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ ಆಫ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 10 ರೊಳಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:

 • LDC – 1 ಹುದ್ದೆ
 • ಡ್ರಾಫ್ಟ್ ಮ್ಯಾನ್ – 1 ಹುದ್ದೆಗಳು
 • ಟೈಲರ್ – 2 ಹುದ್ದೆಗಳು
 • ಕುಕ್ – 9 ಹುದ್ದೆಗಳು
 • ಬಾರ್ಬರ್ – 2 ಹುದ್ದೆಗಳು
 • ತೋಟಗಾರ – 1 ಹುದ್ದೆ
 • ಒಟ್ಟು ಹುದ್ದೆಗಳ ಸಂಖ್ಯೆ- 16

ವಯೋಮಿತಿ:
ಈ ಹುದ್ದೆಗಳಿಗೆ 18 ರಿಂದ 25 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಹಾಗೂ 12ನೇ ತರಗತಿ ಪಾಸ್ ಆಗಿರಬೇಕು. ಅಂದರೆ ಕೆಲ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಹತೆಯನ್ನು ನಿಗದಿ ಮಾಡಿದ್ದರೆ, ಇನ್ನು ಕೆಲ ಹುದ್ದೆಗಳಿಗೆ ಪಿಯುಸಿ ಪಾಸ್ ಆಗಿರಬೇಕು ಎಂದು ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

 • ಲಿಖಿತ ಪರೀಕ್ಷೆ
 • ಕೌಶಲ್ಯ ಪರೀಕ್ಷೆ
 • ಪ್ರಾಯೋಗಿಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ.

ಪರೀಕ್ಷೆಯ ಮಾದರಿ:

 • ಪರೀಕ್ಷೆಯಲ್ಲಿನ ಎಲ್ಲಾ ಪ್ರಶ್ನೆಗಳು ಬಹು ಆಯ್ಕೆಯ ಮಾದರಿಯಲ್ಲಿರುತ್ತವೆ.
 • ಲಿಖಿತ ಪರೀಕ್ಷೆಯು ಎರಡು ಗಂಟೆಗಳಿರುತ್ತದೆ.

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 10, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿಗಳನ್ನು ಡೌನ್​ಲೋಡ್ ಮಾಡಿ ಭರ್ತಿ ಮಾಡಬೇಕು. ಅಲ್ಲದೆ ಕೆಳಗೆ ನೀಡಲಾದ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ:
Commandant, the Dogra Regimental Centre, Ajodhya Cantt, Ajodhya (UP) – 224001.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.