Dr Prabhakar Kore: ಪ್ರಭಾಕರ್ ಕೋರೆಗೆ ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ | Dr Prabhakar Kore of KLE educational institutes in Belagavi to be conferred honorary D litt from Thomos Jefferson University of USA


Dr Prabhakar Kore: ಪ್ರಭಾಕರ್ ಕೋರೆಗೆ ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್

ಸುದ್ದಿಗೋಷ್ಠಿಯಲ್ಲಿ ಕೆಎಲ್‌ಇ ಯೂನಿವರ್ಸಿಟಿ ಸಂಶೋಧಕ ನಿರ್ದೇಶಕ ಡಾ. ಶಿವಪ್ರಸಾದ್ ಗೌಡರ (ಓಳ ಚಿತ್ರ -ಪ್ರಭಾಕರ್ ಕೋರೆ)

ಬೆಳಗಾವಿ: ಶಿಕ್ಷಣ ತಜ್ಞ, ಉದ್ಯಮಿ, ಹಿರಿಯ ರಾಜಕಾರಣಿ ಡಾ. ಪ್ರಭಾಕರ್ ಕೋರೆ (Dr Prabhakar Kore) ಅವರು ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ (honorary D litt) ಪಾತ್ರರಾಗಿದ್ದಾರೆ. ಇದರೊಂದಿಗೆ ಡಾ. ಪ್ರಭಾಕರ್ ಕೋರೆ ಅವರು ಥಾಮಸ್ ಜೆಫರಸನ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ, ಕೆಎಲ್‌ಇ ಯೂನಿವರ್ಸಿಟಿ (KLE educational institutes in Belagavi) ಸಂಶೋಧಕ ನಿರ್ದೇಶಕ ಡಾ. ಶಿವಪ್ರಸಾದ್ ಗೌಡರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಥಾಮಸ್ ಜೆಫರಸನ್ ವಿವಿ (Thomas Jefferson University -TJU, Philadelphia USA) ಅಮೆರಿಕದ ಫಿಲಾಡೆಲ್ಫಿಯಾದಲ್ಲಿದೆ. ಮುಂದಿನ ತಿಂಗಳು ಮೇ 25ರಂದು ನಡೆಯಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಪ್ರಭಾಕರ್ ಕೋರೆ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನವಾಗಲಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಥಾಮಸ್ ಜೆಫರಸನ್ ವಿವಿ ಗ್ಲೋಬಲ್ ಅಫೇರ್ಸ್ ಮುಖ್ಯಸ್ಥ ಡಾ‌‌. ರಿಚರ್ಡ್ ಡರ್ಮನ್ ಉಪಸ್ಥಿತಿತರಿದ್ದರು.

ಶಿಕ್ಷಣ, ವೈದ್ಯಕೀಯ ಸೇವೆ, ಸಂಶೋಧನೆ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಗುರುತಿಸಿ ಡಾ. ಪ್ರಭಾಕರ್ ಕೋರೆ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಅಮೆರಿಕದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಜೆಫರಸನ್ ವಿಶ್ವ ವಿದ್ಯಾಲಯ ಅತ್ಯುನ್ನತ ಸ್ಥಾನದಲ್ಲಿದೆ. ಘಟಿಕೋತ್ಸವ ಸಮಾರಂಭದ ವೇಳೆ ಇಂಡಿಯಾ ಸೆಂಟರ್ ಫಾರ್‌ ಸ್ಟಡೀಸ್ ಘಟಕ ಉದ್ಘಾಟನೆಗೊಳ್ಳಲಿದೆ. ಇಟಲಿ, ಐರ್ಲೆಂಡ್, ಇಸ್ರೇಲ್ ಬಳಿಕ ನಾಲ್ಕನೇ ವಿದೇಶಿ ಅಧ್ಯಯನ ಕೇಂದ್ರ ಇದಾಗಲಿದೆ. ಅಧ್ಯಯನ ಕೇಂದ್ರದ ಉದ್ಘಾಟನೆಗೆ ಅಮೆರಿಕದ ಭಾರತೀಯ ರಾಯಭಾರಿಗೆ ಆಹ್ವಾನ ನೀಡಲಾಗಿದೆ. ಡಾ. ಪ್ರಭಾಕರ್ ಕೋರೆ ಮಾಡಿದ ಕಾರ್ಯ ಖುದ್ದು ನೋಡಿ ಡಾಕ್ಟರೇಟ್ ನೀಡ್ತಿದ್ದಾರೆ ಎಂದು ಕೆಎಲ್‌ಇ ಯೂನಿವರ್ಸಿಟಿ ಸಂಶೋಧನಾ ನಿರ್ದೇಶಕ ಡಾ.ಶಿವಪ್ರಸಾದ್ ಗೌಡರ ಸಂತಸ ಹಂಚಿಕೊಂಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಕರ್ನಾಟಕ ಕುರಿತಾದ ಹೆಚ್ಚಿನ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ 

TV9 Kannada


Leave a Reply

Your email address will not be published. Required fields are marked *