Dragon Fruit: ತೂಕ ಇಳಿಕೆಗೆ ಸಹಕಾರಿಯಾದ ಡ್ರ್ಯಾಗನ್ ಫ್ರೂಟ್ ಬಗ್ಗೆ ನಿಮಗೆಷ್ಟು ಗೊತ್ತು? | Is dragon fruit good for weight loss?


Dragon Fruit:ನೀವು ತೂಕ(Weight)ವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಡ್ರ್ಯಾಗನ್ ಫ್ರೂಟ್ ಹೆಚ್ಚು ಸಹಕಾರಿ. ಕೊಬ್ಬನ್ನು ತ್ವರಿತವಾಗಿ ಕರಗಿಸುವ ಮತ್ತು ನಿಮಗೆ ತೆಳ್ಳಗಿನ ಶೇಪ್ ನೀಡುವ ಯಾವುದೇ ಸೂಪರ್‌ಫುಡ್ ಇಲ್ಲದಿದ್ದರೂ, ಡ್ರ್ಯಾಗನ್ ಹಣ್ಣಿನಲ್ಲಿ ಕಡಿಮೆ ಸಕ್ಕರೆ ಅಂಶ ಹಾಗೂ ಕಡಿಮೆ ಕ್ಯಾಲೊರಿ ಇರುವ ಕಾರಣ ತೂಕವನ್ನು ಸುಲಭವಾಗಿ ಇಳಿಸಬಹುದು.

ನೀವು ತೂಕ(Weight)ವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಡ್ರ್ಯಾಗನ್ ಫ್ರೂಟ್ (Dragon Fruit)ಹೆಚ್ಚು ಸಹಕಾರಿ. ಕೊಬ್ಬನ್ನು ತ್ವರಿತವಾಗಿ ಕರಗಿಸುವ ಮತ್ತು ನಿಮಗೆ ತೆಳ್ಳಗಿನ ಶೇಪ್ ನೀಡುವ ಯಾವುದೇ ಸೂಪರ್‌ಫುಡ್ ಇಲ್ಲದಿದ್ದರೂ, ಡ್ರ್ಯಾಗನ್ ಹಣ್ಣಿನಲ್ಲಿ ಕಡಿಮೆ ಸಕ್ಕರೆ ಅಂಶ ಹಾಗೂ ಕಡಿಮೆ ಕ್ಯಾಲೊರಿ ಇರುವ ಕಾರಣ ತೂಕವನ್ನು ಸುಲಭವಾಗಿ ಇಳಿಸಬಹುದು.

ದುಬಾರಿಯಾದರೂ ಆರೋಗ್ಯವಾಗಿರಲು ಇದೊಂದು ಹಣ್ಣು ತಿಂದರೆ ಸಾಕು. ಕೊಲೆಸ್ಟ್ರಾಲ್, ಹೃದಯ ತೊಂದರೆ, ಡಯಾಬಿಟೀಸ್‌ನಂಥ ತೊಂದರೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಈ ಡ್ರ್ಯಾಗನ್ ಫ್ರೂಟ್.

ಡ್ರ್ಯಾಗನ್ ಫ್ರೂಟ್​ ತಿನ್ನುವುದರಿಂದ ತುಂಬಾ ಹೊತ್ತು ನಿಮ್ಮ ಹೊಟ್ಟೆ ತುಂಬಿದ ಅನುಭವವಿರಲಿದೆ.
ಭಾರತೀಯರಿಗೆ ಹೆಚ್ಚು ಪರಿಚಯವಿಲ್ಲದ ಹಣ್ಣಾದರೂ, ಮಾರುಕಟ್ಟೆಯಲ್ಲಿ ಅದರ ದುಬಾರಿ ಬೆಲೆಯಿಂದ ಎಲ್ಲರ ಗಮನ ಸೆಳೆದಿದೆ ಡ್ರ್ಯಾಗನ್ ಫ್ರೂಟ್.

ಡ್ರಾಗನ್ ಫ್ರೂಟ್ ಹೆಚ್ಚಾಗಿ ಮರುಭೂಮಿಯಂಥ ಪ್ರದೇಶದಲ್ಲಿ ಬೆಳೆಯುತ್ತದೆ. ನೋಡಲು ಮುಳ್ಳಾಗಿರುತ್ತದೆ. ಹೊರ ಭಾಗ ಗುಲಾಬಿ ಬಣ್ಣ ಹಾಗೂ ಒಳಗಡೆ ಬಿಳಿ ಜೊತೆ ಕಪ್ಪು ಚುಕ್ಕಿಯ ಬೀಜಗಳಿರುತ್ತವೆ ಈ ಹಣ್ಣಿಗೆ.

ಡ್ರ್ಯಾಗನ್ ಫ್ರೂಟ್​ನ ಲಾಭ
-ವಯಸ್ಸಾಗುತ್ತಿದ್ದಂತೆ ಮುಖದ ಚರ್ಮ ಸುಕ್ಕು ಸಾಮಾನ್ಯ. ಆದರೆ ಅದನ್ನು ತಪ್ಪಿಸುವ ಶಕ್ತಿ ಡ್ರ್ಯಾಗನ್ ಫ್ರೂಟ್‌ಗಿದೆ.

-ಫೇಸ್ ಮಾಸ್ಕ್ ಹೆಚ್ಚಾಗಿ ಮಾರಾಟವಾಗುತ್ತಿದೆ. ತ್ವಚೆಯ ಸೌಂದರ್ಯ ಹೆಚ್ಚಿಸುವಲ್ಲಿಯೂ ಈ ಫ್ರೂಟ್ ಮುಖ್ಯ ಪಾತ್ರವಹಿಸುತ್ತದೆ.

-ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಇರುವ ಈ ಹಣ್ಣು ಡಯಟ್ ಮಾಡುವವರಿಗೆ ಸಿಕ್ಕಾಪಟ್ಟೆ ಫೆವರೇಟ್.

-ದೇಹದಲ್ಲಿರುವ ಅನ್‌ಸ್ಯಾಚುರೇಟೆಡ್ ಫ್ಯಾಟ್ / ಕೆಟ್ಟ ಫ್ಯಾಟ್‌ಗಳನ್ನು ಕರಗಿಸುತ್ತದೆ. ಹೃದಯಕ್ಕೆ ಹರಿಯುವ ರಕ್ತವನ್ನು ಈ ಹಣ್ಣು ಶುದ್ಧೀಕರಿಸುತ್ತದೆ.

-ಡ್ರಾಗನ್ ಫ್ರೂಟ್‌ನಲ್ಲಿ ಫೈಬರ್ ಅಂಶ ಹೆಚ್ಚಿದ್ದು, ಮಲಬದ್ಧತೆ ಅಥವಾ ಅಜೀರ್ಣ ಸಮಸ್ಯೆಯನ್ನು ನಿವಾರಿಸಬಲ್ಲದು.

ಡ್ರ್ಯಾಗನ್​ಫ್ರೂಟ್​ನಲ್ಲಿರುವ ಅಂಶಗಳು
ಕ್ಯಾಲೋರಿಗಳು – 60
ಪ್ರೋಟೀನ್ – 2.0 ಗ್ರಾಂ
ಕಾರ್ಬೋಹೈಡ್ರೇಟ್ಗಳು – 9.0 ಗ್ರಾಂ
ಕೊಬ್ಬು – 2.0 ಗ್ರಾಂ
ಫೈಬರ್ – 1.5 ಗ

ಜೀವನಶೈಲಿಗೆ  ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *