ನೀವು ಎಷ್ಟು ನೀರು ಕುಡಿಯಬೇಕೆಂದು ಎಂಬುದರ ಹೊರತಾಗಿ ಆಯುರ್ವೇದವು ನಿಮ್ಮ ಪ್ರಸ್ತುತ ಅಗತ್ಯಗಳನ್ನು ಅವಲಂಬಿಸಿ ನೀರಿನ ಸರಿಯಾದ ತಾಪಮಾನದ ಬಗ್ಗೆ ಶಿಫಾರಸ್ಸನ್ನು ಮಾಡಿದೆ.

ಸಾಂದರ್ಭಿಕ ಚಿತ್ರ
ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯದ ಅನೇಕ ಅಂಶಗಳು ಸುಧಾರಿಸಲು ಅದು ಸಹಾಯ ಮಾಡುತ್ತದೆ. ರಕ್ತದೊತ್ತಡ ನಿಯಂತ್ರಣ, ತೂಕ ನಿರ್ವಹಣೆ, ಉತ್ತಮ ಶಕ್ತಿಯ ಮಟ್ಟ, ಚರ್ಮ ಮತ್ತು ಕೂದಲಿನ ಆರೋಗ್ಯ ಹೀಗೆ ನೀರು ನಿಮ್ಮ ಒಟಾರೆ ಯೋಗಕ್ಷೇಮದಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆ. ನೀವು ಎಷ್ಟು ನೀರು ಕುಡಿಯಬೇಕು ಎಂಬುದು ಹೊರತಾಗಿ, ಆಯುರ್ವೇದವು ನಿಮ್ಮ ಪ್ರಸ್ತುತ ಅವಶ್ಯಕತೆಗೆ ಅನುಗುಣವಾಗಿ ನೀರಿನ ಸರಿಯಾದ ತಾಪಮಾನದ ಬಗ್ಗೆ ಶಿಫಾರಸ್ಸುಗಳನ್ನು ಹೊಂದಿದೆ.
ಆಯುರ್ವೇದ ತಜ್ಞೆ ಡಾ. ರೇಖಾ ರಾಧಾಮೋನಿ ಅವರು ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅಷ್ಟಾಂಗ ಹೃದಯ ಸೂತ್ರ ಸ್ಥಾನವನ್ನು ಉಲ್ಲೇಖಿಸಿ ಯಾರು ಯಾವ ರೀತಿಯ ನೀರನ್ನು ಕುಡಿಯಬೇಕು ಎಂಬುದರ ಕುರಿತು ವಿವರವಾಗಿ ಹೇಳಿದ್ದಾರೆ.
ತುಂಬಾ ಬಾಯಾರಿಕೆಯಾದಾಗ ಅಥವಾ ಫುಡ್ ಪಾಯಿಸನ್ ಆದಾಗ ಬೆಚ್ಚಗಿನ ನೀರಿಗಿಂತ, ನಿಮ್ಮ ಸಾಮಾನ್ಯ ಕೋಣೆಯ ಉಷ್ಣಾಂಶದ ಮೇಲೆ ಅವಲಂಬಿಸಿದ ನೀರನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಡಾ. ರಾಧಾಮೋನಿ ಹೇಳುತ್ತಾರೆ.
ತಾಜಾ ಸುದ್ದಿ