Drishya 2 Trailer: ಕುತೂಹಲ ಹೆಚ್ಚಿಸಿದ ‘ದೃಶ್ಯ 2’ ಟ್ರೇಲರ್​; ರವಿಚಂದ್ರನ್​ ಚಿತ್ರಕ್ಕೆ ಸುದೀಪ್​ ಬೆಂಬಲ | Drishya 2 Film Trailer Here is The Kichcha sudeep Launched Drishya 2 Trailer


Drishya 2 Trailer: ಕುತೂಹಲ ಹೆಚ್ಚಿಸಿದ ‘ದೃಶ್ಯ 2’ ಟ್ರೇಲರ್​; ರವಿಚಂದ್ರನ್​ ಚಿತ್ರಕ್ಕೆ ಸುದೀಪ್​ ಬೆಂಬಲ

ರವಿಚಂದ್ರನ್​-ಸುದೀಪ್​

ರವಿಚಂದ್ರನ್​ ಅಭಿನಯದ ‘ದೃಶ್ಯ’ ಸಿನಿಮಾ 2014ರಲ್ಲಿ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ರಾಜೇಂದ್ರ ಪೊನ್ನಪ್ಪ ಆಗಿ ರವಿಚಂದ್ರನ್​ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಸೀಕ್ವೆಲ್​ ಈಗ ಸಿದ್ಧಗೊಂಡಿದೆ. ಈ ಸಿನಿಮಾ ಹೇಗಿರಲಿದೆ ಎನ್ನುವ ಝಲಕ್​ ಇಂದು (ನವೆಂಬರ್​ 26) ರಿಲೀಸ್​ ಆದ ಟ್ರೇಲರ್​ನಲ್ಲಿ ಸಿಕ್ಕಿದೆ. ಈ ಸಿನಿಮಾದ ಟ್ರೇಲರ್​ಅನ್ನು ಕಿಚ್ಚ ಸುದೀಪ್​ ಅನಾವರಣ ಮಾಡಿದ್ದು ವಿಶೇಷವಾಗಿತ್ತು.

‘ದೃಶ್ಯ’ ಸಿನಿಮಾದಲ್ಲಿ ಐಜಿ ಹುದ್ದೆಯಲ್ಲಿರುವ ರೂಪಾ ಚಂದ್ರಶೇಖರ್​ ಮಗ ತರುಣ್​ ಚಂದ್ರಶೇಖರ್​ ಅವರನ್ನು ರಾಜೇಂದ್ರ ಪೊನ್ನಪ್ಪ ಅವರು ಪೊಲೀಸ್​ ಠಾಣೆಯಲ್ಲಿ ಹುಗಿದು ಹಾಕಿದ್ದರು. ಆ ನಂತರ ಇಡೀ ಕುಟುಂಬ ಹಾಯಾಗಿ ಜೀವನ ನಡೆಸುತ್ತಿರುತ್ತದೆ. ಆದರೆ, ಈಗ ಈ ವಿಚಾರ ರಿವೀಲ್​ ಆಗಿದೆ. ಇದರಿಂದ ರಾಜೇಂದ್ರ ಪೊನ್ನಪ್ಪ ಹೇಗೆ ತಪ್ಪಿಸಿಕೊಳ್ಳುತ್ತಾರೆ ಅನ್ನೋದು ಸಿನಿಮಾದ ಹೈಲೈಟ್​ ಆಗಲಿದೆ ಎಂಬುದಕ್ಕೆ ‘ದೃಶ್ಯ 2’ ಟ್ರೇಲರ್ ಸಾಕ್ಷ್ಯ ನೀಡಿದೆ.

‘ದೃಶ್ಯ 2’ ಸಿನಿಮಾದಲ್ಲೂ ರವಿಚಂದ್ರನ್​ ಮತ್ತು ನವ್ಯಾ ನಾಯರ್​ ಮುಂದುವರಿದಿದ್ದಾರೆ. ಪುತ್ರಿ ಪಾತ್ರದಲ್ಲಿ ನಟಿ ಆರೋಹಿ ನಾರಾಯಣ್​ ಅಭಿನಯಿಸಿದ್ದಾರೆ. ಸಿನಿಮಾದ ಟ್ರೇಲರ್​ ಸಾಕಷ್ಟು ಸಸ್ಪೆನ್ಸ್​ಗಳಿಂದ ಕೂಡಿದೆ. ಹೀಗಾಗಿ, ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಮೂಡಿದೆ. ಅನಂತ್​ ನಾಗ್​ ಪಾತ್ರ ಕೂಡ ಟ್ರೇಲರ್​ನಲ್ಲಿ ರಿವೀಲ್​ ಆಗಿದೆ. ಇತ್ತೀಚೆಗೆ ಅವರು ಚಿತ್ರತಂಡ ಸೇರಿಕೊಂಡ ಬಗ್ಗೆ ಮಾಹಿತಿ ಅಧಿಕೃತವಾಗಿತ್ತು.

‘ನಾನು ‘ದೃಶ್ಯ’ ಸಿನಿಮಾವನ್ನು ಕನ್ನಡದಲ್ಲಿ ನೋಡಿದ್ದೆ. ಇದರ ಸೀಕ್ವೆಲ್​ ಕೂಡ ಕನ್ನಡದಲ್ಲೇ ನೋಡುತ್ತೇನೆ. ಇಲ್ಲಿ ಸಿನಿಮಾ ನೋಡಿದಾಗ ಹೆಚ್ಚು ಕನೆಕ್ಟ್​ ಆಗುತ್ತೇವೆ. ‘ದೃಶ್ಯ 3’ ಕನ್ನಡದಲ್ಲಿ ಮೊದಲು ಮಾಡಿ’ ಎಂದು ಮನವಿ ಮಾಡಿದರು ಸುದೀಪ್​.

E4 Entertainment ಬ್ಯಾನರ್​ನಲ್ಲಿ ‘ದೃಶ್ಯ 2’ ಸಿನಿಮಾ ಮೂಡಿಬಂದಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಿ.ವಿ. ಸಾರಥಿ ಕೆಲಸ ಮಾಡಿದ್ದಾರೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ರವಿ ಸಂತೆಹುಕ್ಲು ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ, ಭರತ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ‌. ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ನಟಿಸುತ್ತಿದ್ದಾರೆ.

 

ಇದನ್ನೂ ಓದಿ: ಪುನೀತ ನಮನ: ಕಣ್ಣೀರು ತರಿಸಿತು ಸುದೀಪ್​ ಧ್ವನಿಯಲ್ಲಿ ಮೂಡಿಬಂದ ಪುನೀತ್​ ವಿಡಿಯೋ

‘ದೃಶ್ಯ 2’ ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಬಂದ ಕಿಚ್ಚ ಸುದೀಪ್​; ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

TV9 Kannada


Leave a Reply

Your email address will not be published. Required fields are marked *