DRS Controversy: ಭಾರತದ ಡಿಆರ್​ಎಸ್ ಡ್ರಾಮ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬ್ರಾಡ್​ಕ್ಯಾಸ್ಟ್ರ್ ಸೂಪರ್ ಸ್ಪೋರ್ಟ್ಸ್​ | SuperSport The broadcaster clarified that it has no control over the hawk eye technology


DRS Controversy: ಭಾರತದ ಡಿಆರ್​ಎಸ್ ಡ್ರಾಮ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬ್ರಾಡ್​ಕ್ಯಾಸ್ಟ್ರ್ ಸೂಪರ್ ಸ್ಪೋರ್ಟ್ಸ್​

IND vs SA DRS Controversy

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೂರನೇ ಟೆಸ್ಟ್ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸುವುದರ ಜೊತೆಗೆ ವಿವಾದಕ್ಕೂ ಎಡೆ ಮಾಡಿಕೊಟ್ಟಿತು. ಸ್ಟಂಪ್ ಮೈಕ್ ಬಳಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಇತರ ಭಾರತೀಯ ಆಟಗಾರರು ತೋರಿದ ವರ್ತನೆ ಇಂದು ವಿಶ್ವ ಕ್ರಿಕೆಟ್​ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿರಾಟ್ ಅವರನ್ನು ಅಮಾನತು ಮಾಡಬೇಕು ಹಾಗೂ ದಂಡ ವಿಧಿಸುವುದು ಕೂಡ ಅಗತ್ಯ ಎಂದು ವಾನ್ ಹೇಳಿದ್ದಾರೆ. ಇದರ ನಡುವೆ ಈ ಟೆಸ್ಟ್ ಪಂದ್ಯದ ಅಧಿಕೃತ ಬ್ರಾಡ್​ಕ್ಯಾಸ್ಟರ್ ಸೂಪರ್ ಸ್ಪೋರ್ಟ್ ಡಿಆರ್​ಎಸ್ ಡ್ರಾಮ (DRS Controversy) ಕುರಿತಂತೆ ಮಹತ್ವದ ಹೇಳಿಕೆ ನೀಡಿದೆ. ಮೊದಲಿಗೆ ಏನಿದು ಘಟನೆ ಎಂಬ ಬಗ್ಗೆ ನೋಡೋಣ.

ಏನಿದು ಘಟನೆ?:

ಮೂರನೇ ಟೆಸ್ಟ್​ನ ಮೂರನೇ ಭಾರತ ತಂಡ ಆಫ್ರಿಕಾಕ್ಕೆ ಗೆಲ್ಲಲು 212 ರನ್​ಗಳ ಟಾರ್ಗೆಟ್ ನೀಡಿತು. ಅದರಂತೆ 21ನೇ ಓವರ್‌ನ ಆರ್. ಅಶ್ವಿನ್ ಅವರ 4ನೇ ಎಸೆತದಲ್ಲಿ ನಾಯಕ ಡೀನ್‌ ಎಲ್ಗರ್‌ ಪ್ಲಂಬ್‌ ಎಲ್‌ಬಿಡಬ್ಲ್ಯು ಆದರು. ಸ್ಟ್ರೈಕ್‌ ಅಂಪೈರ್‌ ಮರಾಯಿಸ್‌ ಎರಾಸ್ಮಸ್‌ ಔಟ್‌ ಎಂದು ತೀರ್ಪು ಕೂಡ ನೀಡಿದರು. ಆದರೆ, ಎಲ್ಗರ್​ಗೆ ಔಟ್ ಬಗ್ಗೆ ಅನುಮಾನ ಇದ್ದ ಕಾರಣ ಡಿಆರ್‌ಎಸ್‌ ಮೊರೆ ಹೋದರು.

ಡಿಆರ್​ಎಸ್​ನಲ್ಲಿ ವೀಕ್ಷಿಸಿದಾಗ 3ಡಿ ಸ್ಪಿನ್‌ ವಿಷನ್‌ ತಂತ್ರಜ್ಞಾನದಲ್ಲಿ ಚೆಂಡು ವಿಕೆಟ್‌ಗೆ ಬಡಿಯದೇ ಮೇಲೆ ಹೋಗುತ್ತಿದೆ ಎಂದು ತೋರಿಸಿತು. ಆದರೆ, ಚೆಂಡು ಎಲ್ಗರ್‌ ಅವರ ಮಂಡಿಗಿಂತಲೂ ಕೆಳಗೆ ಬಡಿದಿದ್ದ ಕಾರಣ ಅದು ಸ್ಪಷ್ಟವಾಗಿ ವಿಕೆಟ್‌ಗಿಂತ ಮೇಲೆ ಹೋಗಲು ಖಂಡಿತಾ ಸಾಧ್ಯವಿಲ್ಲ ಎಂಬಂತ್ತಿತ್ತು. ಥರ್ಡ್ ಅಂಪೈರ್ ಆನ್‌ ಫೀಲ್ಡ್‌ ಅಂಪೈರ್‌ ಮರಾಯಿಸ್‌ ಎರಾಸ್ಮಸ್‌ ಬಳಿ ನಿಮ್ಮ ನಿರ್ಧಾರವನ್ನು ಬದಲಿಸಿ ನಾಟೌಟ್ ತೀರ್ಪು ಪ್ರಕಟಿಸುವಂತೆ ಹೇಳಿದರು.

ಇತ್ತ ಡಿಆರ್‌ಎಸ್‌ ತೀರ್ಪು ಕಂಡು ವಿರಾಟ್‌ ಕೊಹ್ಲಿ ಕೆಂಡಾಮಂಡಲವಾದರು. ಥರ್ಡ್ ಅಂಪೈರ್ ತೀರ್ಪು ಬಂದ ಬಳಿಕ ಬೌಲಿಂಗ್ ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಸ್ಟಂಪ್ ಮೈಕ್ ಬಳಿ ಬಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. “ನಿಮ್ಮ ತಂಡದವರು ಚೆಂಡನ್ನು ಹೊಳಪುಗೊಳಿಸುವಾಗ ಮೊದಲು ಗಮನಿಸಿ. ಬರೀ ಎದುರಾಳಿ ತಂಡದವರ ಮೇಲೆ ಕಣ್ಣಿಡುವುದಲ್ಲ…” ಎಂದು ಸಿಟ್ಟು ತೋರ್ಪಡಿಸಿದರು. ಕೆಎಲ್‌ ರಾಹುಲ್‌ ಕೂಡ ಮಾತಿಗಳಿದು, “ಟೀಮ್ ಇಂಡಿಯಾದ 11 ಆಟಗಾರರ ವಿರುದ್ಧ ಇಡೀ ದಕ್ಷಿಣ ಆಫ್ರಿಕಾವೇ ಆಡುತ್ತಿದೆ,” ಎಂದು ಅಸಾಮಾಧನಗೊಂಡರು.

ಆರ್‌ ಅಶ್ವಿನ್‌ ಕೂಡ ಪ್ರತಿಕ್ರಿಯೆ ನೀಡಿ, “ನೀವು ಸೂಪರ್​ಸ್ಪೋರ್ಟ್​ನವರು ಗೆಲ್ಲಲು ಇನ್ನೂ ಉತ್ತಮ ಮಾರ್ಗಗಳನ್ನ ಹುಡುಕಿರಿ” ಎಂದು ಸ್ಟಂಪ್ ಮೈಕ್ ಬಳಿ ಬಂದು ಕಿಚಾಯಿಸಿದರು. ಸೂಪರ್ ಸ್ಪೋರ್ಟ್ ಈ ಟೆಸ್ಟ್ ಪಂದ್ಯದ ಅಧಿಕೃತ ಬ್ರಾಡ್​ಕ್ಯಾಸ್ಟರ್ ಆಗಿದೆ. ಹಾಕ್ ಐ ವಿಡಿಯೋವನ್ನು ಪ್ರಸ್ತುತಪಡಿಸುವುದು ಬ್ರಾಡ್​ಕ್ಯಾಸ್ಟ್​ನವರೇ.

ಹೀಗಾಗಿ ಸೂಪರ್ ಸ್ಪೋರ್ಟ್ ಸದ್ಯ ಈ ಬಗ್ಗೆ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ್ದು, “ಐಸಿಸಿ ಒಪ್ಪಿಗೆ ಅಂಗೀಕರಿಸಿದ ಸಂಸ್ಥೆ ಹಾಕ್ ಐ ಸೇವೆಯನ್ನು ಒದಗಿಸುತ್ತದೆ. ಅದೊಂದು ಪ್ರತ್ಯೇಕ ವ್ಯವಸ್ಥೆ. ಈ ವ್ಯವಸ್ಥೆ ಮೇಲೆ ನಮ್ಮ(ಸೂಪರ್ ಸ್ಪೋರ್ಟ್) ಹಿಡಿತ ಇಲ್ಲ,” ಎಂದು ಹೇಳಿಕೆ ನೀಡಿದೆ.

South Africa vs India: ಟೆಸ್ಟ್ ಸರಣಿ ಮುಗೀತು: ಏಕದಿನ ಸರಣಿ ಯಾವಾಗ ಆರಂಭ?: ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ

Keegan Petersen: ಆಫ್ರಿಕಾ ಗೆಲುವಿಗೆ ಕಾರಣವಾದ ಆಟಗಾರನಲ್ಲಿ ಬೆಂಗಳೂರಿನ ಗುಂಡಪ್ಪ ವಿಶ್ವನಾಥ್​​ರನ್ನು ಕಂಡ ​ ರವಿ ಶಾಸ್ತ್ರಿ

TV9 Kannada


Leave a Reply

Your email address will not be published. Required fields are marked *