Duplicate contacts: ಮೊಬೈಲ್​ನಲ್ಲಿರುವ ಡುಪ್ಲಿಕೇಟ್ ಕಾಂಟೆಕ್ಟ್​ಗಳನ್ನು ನಿಮಿಷಾರ್ಧದಲ್ಲಿ​ ಡಿಲೀಟ್ ಮಾಡಿ: ಇಲ್ಲಿದೆ ಟ್ರಿಕ್ | Duplicate contacts Here is the Simple Tricks to remove duplicate contacts in Smartphone


Duplicate contacts: ಮೊಬೈಲ್​ನಲ್ಲಿರುವ ಡುಪ್ಲಿಕೇಟ್ ಕಾಂಟೆಕ್ಟ್​ಗಳನ್ನು ನಿಮಿಷಾರ್ಧದಲ್ಲಿ​ ಡಿಲೀಟ್ ಮಾಡಿ: ಇಲ್ಲಿದೆ ಟ್ರಿಕ್

remove duplicate contacts

ಸ್ಮಾರ್ಟ್‌ಫೋನ್ (Smartphone) ಬಳಕೆದಾರರ ಬಹುದೊಡ್ಡ ಸಮಸ್ಯೆ ಎಂದರೆ ಒಂದೇ ನಂಬರ್ ಗಳು ಬೇರೆ ಬೇರೆ ಹೆಸರಿನಲ್ಲಿ ಮೂರ್ನಾಲ್ಕು ಬಾರಿ ಸೇವ್ ಆಗಿರುವುದು. ಇದೊಂದು ತಲೆನೋವಿನ ಕೆಲಸ. ಯಾವುದು ಡುಪ್ಲಿಕೇಟ್​ ಕಾಂಟೆಕ್ಟ್​? (Duplicate contacts) ಎಂದು ಕಂಡು ಹಿಡಿಯುವಷ್ಟರಲ್ಲಿ ಸುಸ್ತಾಗಿರುತ್ತೇವೆ. ಇಲ್ಲವೇ ಇವುಗಳನ್ನು ಡಿಲೀಟ್ ಮಾಡಲು ಆಗುವುದಿಲ್ಲ, ಮಾಡಿದರೂ ಮತ್ತೊಮ್ಮೆ ಪುನಃ ಅದೇಗೋ ಕ್ರಿಯೇಟ್ ಆಗಿ ಬಿಡುತ್ತವೆ. ಆದರೀಗ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹದಾಗಿದೆ. ಅದಕ್ಕೊಂದು ಸರಳ ಉಪಾಯ ಇಲ್ಲಿದೆ.

ಹೌದು, ಸ್ಮಾರ್ಟ್​ಫೋನ್​ ಮೂಲೆಯಲ್ಲಿ ಅಡಗಿರುವ ನಕಲಿ ಕಾಂಟೆಕ್ಟ್​​ಗಳನ್ನ ನಿಮಿಷಾರ್ಧದಲ್ಲಿ ಡಿಲೀಟ್​​ ಮಾಡಬಹುದಾಗಿದೆ. ಅದಕ್ಕಾಗಿ ನಾನಾ ಥರ್ಡ್​ ಪಾರ್ಟಿ ಆ್ಯಪ್​ಗಳು ಪ್ಲೇ ಸ್ಟೋರ್​ (Play store) ನಲ್ಲಿವೆ. ಹಾಗಾಗಿ ಅದನ್ನು ಬಳಸಿ ಸರಿಯಾದ ಕ್ವಾಂಟ್ಯಾಕ್ಟ್ ಯಾವುದು? ಡುಪ್ಲಿಕೇಟ್​ ಕ್ವಾಂಟ್ಯಾಕ್ಟ್​ ಯಾವುದು ಎಂದು ತಿಳಿಯುವ ಮೂಲಕ ಬೇಡವಾದ ನಂಬರ್ ಅನ್ನು ಡಿಲೀಟ್​ ಮಾಡಬಹುದು.

ಈ ಸಮಸ್ಯೆಗೆ ಪರಿಹಾರವನ್ನು ನೀಡುವ ಸಲುವಾಗಿ ಡುಪ್ಲೀಕೆಟ್ ಕಾಂಟೆಕ್ಟ್‌ಗಳನ್ನು ಡಿಲೀಟ್ ಮಾಡುವ ಮತ್ತು ಮರ್ಜ್ ಮಾಡಲು ಅನೇಕ ಆ್ಯಪ್‌ಗಳು ಮತ್ತು ಸೇವೆಗಳು ಲಭ್ಯವಿದ್ದು, ಇವುಗಳ ಬಳಕೆಯಿಂದಾಗಿ ಆಂಡ್ರಾಯ್ಡ್ ಫೋನಿನಲ್ಲಿ ಡುಪ್ಲಿಕೇಟ್ ಕಾಂಟೆಕ್ಟ್ ಗಳನ್ನು ಮ್ಯಾನೆಜ್ ಮಾಡುವುದು ಇನ್ನು ಮುಂದೆ ನಿಮಗೆ ಸುಲಭವಾಗಲಿದೆ.

ನಿಮ್ಮ ಕಾಟೆಂಕ್ಟ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಸಲುವಾಗಿ ಸಿಂಪಲ್ ಮರ್ಜ್ ಡುಪ್ಲಿಕೆಟ್ಸ್ (Simpler Merge Duplicates) ಎನ್ನುವ ಆ್ಯಪ್ ಒಂದನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಡೌನ್‌ಲೋಡ್ ಮಾಡಿದ ನಂತರದಲ್ಲಿ ಈ ಆ್ಯಪ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಇದಾದ ಮೇಲೆ ಆ್ಯಪ್ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಕಾಂಟೆಕ್ಟ್ ಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ.

ಸ್ಕ್ಯಾನ್ ಆದ ನಂತರದಲ್ಲಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಡುಪ್ಲಿಕೇಟ್ ಕಾಂಟೆಕ್ಟ್‌ಗಳು, ಒಂದೇ ಮಾದರಿಯ ನಂಬರ್ ಗಳು ಮತ್ತು ಹೆಸರಿಲ್ಲದ ಕಾಂಟೆಕ್ಟ್‌ಗಳ ಪಟ್ಟಿಯನ್ನು ಕಾಣಬಹುದಾಗಿದೆ. ಇದಾದ ನಂತರದಲ್ಲಿ ಒಂದೇ ಮಾದರಿಯ ಕಾಂಟೆಕ್ಟ್‌ ಗಳನ್ನು ಮರ್ಜ್ ಮಾಡಬಹದು, ಅಲ್ಲದೇ ಒಂದು ಕಾಂಟೆಕ್ಟ್ ಉಳಿದುಕೊಂಡು ಮಿಕ್ಕಿದ್ದವು ಡಿಲೀಟ್ ಆಗಲಿವೆ.

Poco M4 Pro 5G: ನಾಳೆ ಬಹುನಿರೀಕ್ಷಿತ ಪೋಕೋ M4 ಪ್ರೋ 5G ಬಿಡುಗಡೆ: ಕಾದು ಕುಳಿತಿರುವ ಸ್ಮಾರ್ಟ್​ಫೋನ್ ಪ್ರಿಯರು

WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮ್ಮನ್ನ ಯಾರೆಲ್ಲ ಬ್ಲಾಕ್ ಮಾಡಿದ್ದಾರೆಂದು ತಿಳಿಯಬೇಕೇ?: ಇಲ್ಲಿದೆ ಸುಲಭ ಟ್ರಿಕ್ಸ್

(Duplicate contacts Here is the Simple Tricks to remove duplicate contacts in Smartphone)

TV9 Kannada


Leave a Reply

Your email address will not be published.