EC on President Election 2022 Date ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ, 21ಕ್ಕೆ ಮತ ಎಣಿಕೆ | Election Commission Announces schedule for President of India Election 2022 presidential polls today latest news in Kannada


EC on President Election 2022 Date ಜುಲೈ 18ಕ್ಕೆ  ರಾಷ್ಟ್ರಪತಿ ಚುನಾವಣೆ, 21ಕ್ಕೆ ಮತ ಎಣಿಕೆ

ಚುನಾವಣಾ ಆಯೋಗ ಪತ್ರಿಕಾಗೋಷ್ಠಿ

ದೆಹಲಿ: ಭಾರತದ ಮುಂದಿನ ರಾಷ್ಟ್ರಪತಿ ಚುನಾವಣೆಗೆ (President of India Election )ಚುನಾವಣಾ ಆಯೋಗವು (Election Commission) ವೇಳಾಪಟ್ಟಿ ಪ್ರಕಟಿಸಿದ್ದು ಜುಲೈ 18ರಂದು ಚುನಾವಣೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದ್ದು, ಸಂವಿಧಾನದ 62 ನೇ ವಿಧಿಯ ಪ್ರಕಾರ, ಮುಂದಿನ ರಾಷ್ಟ್ರಪತಿಯನ್ನು ಆ ಹೊತ್ತಿಗೆ ಆಯ್ಕೆ ಮಾಡಬೇಕಾಗಿದೆ. 776 ಸಂಸದರು ಮತ್ತು 4,120 ಶಾಸಕರಿರುವ ಎಲೆಕ್ಟ್ರೋಲ್ ಕಾಲೇಜಿನಿಂದ ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡಲಾಗುತ್ತದೆ. ಎಲೆಕ್ಟ್ರೋಲ್ ಕಾಲೇಜಿನ ಒಟ್ಟು ಸಾಮರ್ಥ್ಯ 10,98,903 […]

ದೆಹಲಿ: ಭಾರತದ ಮುಂದಿನ ರಾಷ್ಟ್ರಪತಿ ಚುನಾವಣೆಗೆ (President of India Election )ಚುನಾವಣಾ ಆಯೋಗವು (Election Commission) ವೇಳಾಪಟ್ಟಿ ಪ್ರಕಟಿಸಿದ್ದು ಜುಲೈ 18ರಂದು ಚುನಾವಣೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದ್ದು, ಸಂವಿಧಾನದ 62 ನೇ ವಿಧಿಯ ಪ್ರಕಾರ, ಮುಂದಿನ ರಾಷ್ಟ್ರಪತಿಯನ್ನು ಆ ಹೊತ್ತಿಗೆ ಆಯ್ಕೆ ಮಾಡಬೇಕಾಗಿದೆ. 776 ಸಂಸದರು ಮತ್ತು 4,120 ಶಾಸಕರಿರುವ ಎಲೆಕ್ಟ್ರೋಲ್ ಕಾಲೇಜಿನಿಂದ ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡಲಾಗುತ್ತದೆ. ಎಲೆಕ್ಟ್ರೋಲ್ ಕಾಲೇಜಿನ ಒಟ್ಟು ಸಾಮರ್ಥ್ಯ 10,98,903 ಮತಗಳು. ಎಲ್ಲಾ ಸಂಸದರು ಮತ್ತು ಶಾಸಕರ ಮತಗಳಲ್ಲಿ ಎನ್‌ಡಿಎ ಶೇಕಡಾ 48.9 ರಷ್ಟು ಮತಗಳನ್ನು ಹೊಂದಿದೆ.

ರಾಷ್ಟ್ರಪತಿಯನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳ ಶಾಸಕಾಂಗ ಸಭೆಗಳ ಚುನಾಯಿತ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರು ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ.

ಚುನಾವಣಾ ಆಯೋಗದ ಸುದ್ದಿಗೋಷ್ಠಿ

2022 ರ ರಾಷ್ಟ್ರಪತಿ  ಚುನಾವಣೆಯಲ್ಲಿ ಮತ ಚಲಾಯಿಸುವ ಒಟ್ಟು ಮತದಾರರ ಸಂಖ್ಯೆ- 4,809 . ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಶಾಸಕರಿಗೆ ಯಾವುದೇ ವಿಪ್ ನೀಡುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್  ಹೇಳಿದ್ದಾರೆ. ರಾಮನಾಥ್ ಕೋವಿಂದ್ ಅವರು 2017 ರಲ್ಲಿ 65% ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರು.

(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)

TV9 Kannada


Leave a Reply

Your email address will not be published.