Ek Love Ya: ಕನ್ನಡ ಪ್ರೇಮಿಗಳಿಗೆ ಫೆಬ್ರವರಿಯಲ್ಲಿ ಸಿನಿ ಸುಗ್ಗಿ; ‘ಏಕ್ ಲವ್ ಯಾ’ ರಿಲೀಸ್ ಘೋಷಿಸಿದ ಪ್ರೇಮ್ | Prem directorial Ek Love Ya will release on February 25th details inside


Ek Love Ya: ಕನ್ನಡ ಪ್ರೇಮಿಗಳಿಗೆ ಫೆಬ್ರವರಿಯಲ್ಲಿ ಸಿನಿ ಸುಗ್ಗಿ; ‘ಏಕ್ ಲವ್ ಯಾ’ ರಿಲೀಸ್ ಘೋಷಿಸಿದ ಪ್ರೇಮ್

‘ಏಕ್ ಲವ್ ಯಾ’ ಚಿತ್ರದ ಪೋಸ್ಟರ್

ರಾಜ್ಯದಲ್ಲಿ ಕೊರೊನಾ ಆತಂಕ ಕಡಿಮೆಯಾಗುತ್ತಿರುವಂತೆಯೇ ಹಲವು ಚಿತ್ರಗಳು ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿವೆ. ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ (Ek Love Ya) ಕೂಡ ಈ ಹಿಂದೆ ಕೊರೊನಾ ಕಾರಣದಿಂದ ರಿಲೀಸ್​ಅನ್ನು ಮುಂದೂಡಿತ್ತು. ಇದೀಗ ಪ್ರೇಮ್ (Prem) ತಮ್ಮ ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಅಲ್ಲದೇ ಟ್ರೈಲರ್ ರಿಲೀಸ್ ಕುರಿತೂ ಮಾಹಿತಿ ನೀಡಿದ್ದಾರೆ. ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರೇಮ್, ‘ಫೆಬ್ರವರಿ 11ರಂದು ಏಕ್ ಲವ್ ಯಾ ಟ್ರೈಲರ್ ರಿಲೀಸ್ ಮಾಡಲಾಗುವುದು’ ಎಂದಿದ್ದಾರೆ. ಚಿತ್ರದ ರಿಲೀಸ್ ಬಗ್ಗೆ ತಿಳಿಸಿರುವ ಅವರು, ಫೆಬ್ರವರಿ 25ರಂದು ರಾಜ್ಯಾದ್ಯಂತ ಚಿತ್ರ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ. ಈ ಹಿಂದೆ ‘ಏಕ್ ಲವ್ ಯಾ’ ಟ್ರೈಲರ್ ಅನ್ನು ಮೈಸೂರಿನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಮುಂದೂಡಲಾಗಿತ್ತು. ಇದೀಗ ಫೆಬ್ರವರಿ 11ರಂದು ಮೊದಲು ಯೋಜಿಸಿದ್ದಂತೆ ಮೈಸೂರಿನಲ್ಲಿಯೇ ಟ್ರೈಲರ್ ರಿಲೀಸ್ ಮಾಡಲಾಗುವುದು ಎಂದಿದ್ದಾರೆ ಪ್ರೇಮ್.

ಏಕ್ ಲವ್ ಯಾ ಚಿತ್ರದಲ್ಲಿ ರಾಣಾ, ರಚಿತಾ ರಾಮ್ ಹಾಗೂ ಗ್ರೀಷ್ಮಾ ನಾಣಯ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ಹಾಡುಗಳು ಸೂಪರ್​ ಹಿಟ್​ ಆಗಿವೆ. ಆದ್ದರಿಂದ ಸಿನಿಮಾದ ಮೇಲೆ ಭಾರಿ ಹೈಪ್​ ಸೃಷ್ಟಿಯಾಗಿದೆ. ‘ರಕ್ಷಿತಾಸ್​ ಫಿಲ್ಮ್​ ಫ್ಯಾಕ್ಟರಿ’ ಬ್ಯಾನರ್​ನಲ್ಲಿ ರಕ್ಷಿತಾ ಪ್ರೇಮ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಪೋಸ್ಟರ್​ಗಳು ಹಾಗೂ ಚಿತ್ರದ ತುಣುಕುಗಳು ಮತ್ತಷ್ಟು ಕುತೂಹಲ ಹೆಚ್ಚಿಸಲು ಕಾರಣವಾಗಿವೆ.

‘ಏಕ್ ಲವ್ ಯಾ’ ರಿಲೀಸ್ ಕುರಿತು ಪ್ರೇಮ್ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

ಫೆಬ್ರವರಿಯಲ್ಲಿ ರಿಲೀಸ್ ಆಗಲಿವೆ ಹಲವು ಕನ್ನಡ ಚಿತ್ರಗಳು:
ಫೆಬ್ರವರಿಯಲ್ಲಿ ಹಲವು ಕನ್ನಡ ಚಿತ್ರಗಳು ರಿಲೀಸ್ ಆಗಲಿವೆ. ಇವುಗಳಲ್ಲಿ ಬಹುನಿರೀಕ್ಷಿತ ಚಿತ್ರಗಳೂ ಸೇರಿವೆ. ‘ಲವ್ ಮಾಕ್ಟೇಲ್’ ಯಶಸ್ಸಿನ ನಂತರ ಇದೀಗ ‘ಲವ್ ಮಾಕ್ಟೇಲ್ 2’ ಅನ್ನು ಪ್ರೇಕ್ಷಕರ ಎದುರು ತರಲು ಡಾರ್ಲಿಂಗ್ ಕೃಷ್ಣ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಫೆಬ್ರವರಿ 11ರಂದು ಚಿತ್ರ ರಿಲೀಸ್ ಆಗಲಿದೆ. ಅಂದೇ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ನಟಿಸಿರುವ ‘ರೌಡಿ ಬೇಬಿ’ ಚಿತ್ರವೂ ರಿಲೀಸ್ ಆಗಲಿದೆ. ಹಾಗೆಯೇ ಅಚ್ಯುತ್ ಕುಮಾರ್ ನಟಿಸಿರುವ ’ಫೋರ್​ವಾಲ್ಸ್’ ಚಿತ್ರವೂ ಫೆಬ್ರವರಿ 11ಕ್ಕೆ ತೆರೆಕಾಣಲಿದೆ. ಫೆಬ್ರವರಿ 25ರಂದು ಶ್ರೀನಿ ನಟಿಸಿ ನಿರ್ದೇಶಿಸಿರುವ ‘ಓಲ್ಡ್ ಮಾಂಕ್’ ತೆರೆಕಾಣಲಿದೆ.

ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ಪಟ್ಟಿ ಹೀಗಿದ್ದರೆ, ಓಟಿಟಿಯಲ್ಲೂ ಸಾಲು ಸಾಲಾಗಿ ಕನ್ನಡ ಸಿನಿಮಾಗಳು ರಿಲೀಸ್ ಆಗಲಿವೆ. ಅಮೆಜಾನ್ ಪ್ರೈಮ್​ನಲ್ಲಿ ಪಿಆರ್​ಕೆ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿರುವ ಚಿತ್ರಗಳು ನೇರವಾಗಿ ಬಿಡುಗಡೆ ಆಗಲಿವೆ. ಈಗಾಗಲೇ ‘ಒನ್ ಕಟ್ ಟು ಕಟ್’ ತೆರೆ ಕಂಡಿದ್ದು, ಸತ್ಯ ಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಹಾಗೂ ಅರ್ಜುನ್ ಕುಮಾರ್ ಅವರ ‘ಫ್ಯಾಮಿಲಿ ಪ್ಯಾಕ್’ ಫೆಬ್ರವರಿಯಲ್ಲೇ ರಿಲೀಸ್ ಆಗುವ ನಿರೀಕ್ಷೆ ಇದೆ.

TV9 Kannada


Leave a Reply

Your email address will not be published.