Elon Musk: ಈ ವಾರ 3.72 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟ ಅನುಭವಿಸಿದ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ | Worlds Wealthiest Person Elon Musk Lost More Than 50 Billion USD This Week Know The Reason Why


Elon Musk: ಈ ವಾರ 3.72 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟ ಅನುಭವಿಸಿದ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್

ಎಲಾನ್ ಮಸ್ಕ್ (ಸಂಗ್ರಹ ಚಿತ್ರ)

ಟೆಸ್ಲಾ ಇಂಕ್ ಷೇರುಗಳು ಸತತ ಎರಡನೇ ದಿನ ಕುಸಿದ ನಂತರ ಎಲಾನ್ ಮಸ್ಕ್ ಈ ವಾರ ಇಲ್ಲಿಯವರೆಗೆ 50 ಬಿಲಿಯನ್ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ (5000 ಕೋಟಿ ಯುಎಸ್​ಡಿ). ಭಾರತದ ರೂಪಾಯಿ ಲೆಕ್ಕದಲ್ಲಿ 3,71,516 ಕೋಟಿ (3.72 ಲಕ್ಷ ಕೋಟಿ) ಆಗುತ್ತದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಇತಿಹಾಸದಲ್ಲೇ ಇದು ಅತಿದೊಡ್ಡ ಎರಡು ದಿನಗಳ ಕುಸಿತವಾಗಿದೆ. 2019ರಲ್ಲಿ ಮೆಕೆಂಜಿ ಸ್ಕಾಟ್‌ನಿಂದ ವಿಚ್ಛೇದನದ ನಂತರ ಜೆಫ್ ಬೆಜೋಸ್ ಅವರ 36 ಬಿಲಿಯನ್ ಅಮೆರಿಕನ್ ಡಾಲರ್ ಕುಸಿತದ ನಂತರದ ಅತಿದೊಡ್ಡ ಒಂದು ದಿನದ ಕುಸಿತ ಇದಾಗಿದೆ.

ವಾರಾಂತ್ಯದಲ್ಲಿ ಮಸ್ಕ್ ತನ್ನ ಟ್ವಿಟರ್ ಅನುಯಾಯಿಗಳನ್ನು, ಕಂಪೆನಿಯಲ್ಲಿನ ತನ್ನ ಶೇ 10 ಪಾಲನ್ನು ಮಾರಾಟ ಮಾಡಬೇಕೆ ಎಂದು ಕೇಳಿದಾಗ ಅದು ಪ್ರಾರಂಭವಾಯಿತು. ಅದಕ್ಕೆ ಹಿಂದೆಯೇ ಅವರ ಸಹೋದರ ಕಿಂಬಾಲ್ ಮತದಾನದ ಮೊದಲು ಷೇರುಗಳನ್ನು ಮಾರಾಟ ಮಾಡಿದ ಸುದ್ದಿ ಬಂದಿತ್ತು. ಮಂಗಳವಾರ ಬೆಳಗ್ಗೆ “ದಿ ಬಿಗ್ ಶಾರ್ಟ್” ಚಲನಚಿತ್ರದಿಂದ ಪ್ರಸಿದ್ಧವಾದ ಹೂಡಿಕೆದಾರ ಮೈಕೆಲ್ ಬರಿ ಅವರ ಆಂತರಿಕ ವರದಿ ಪ್ರಕಾರ, ಮಸ್ಕ್ ತನ್ನ ವೈಯಕ್ತಿಕ ಸಾಲಗಳನ್ನು ಸರಿದೂಗಿಸಲು ಷೇರುಗಳನ್ನು ಮಾರಾಟ ಮಾಡಲು ಬಯಸಬಹುದು ಎಂದು ಹೇಳುತ್ತದೆ.

ಈ ಕುಸಿತವು ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಬೆಜೋಸ್‌ಗಿಂತ ಮಸ್ಕ್‌ನ ಮುನ್ನಡೆಯನ್ನು 8300 ಕೋಟಿ ಯುಎಸ್​ಡಿಗೆ ಕಡಿಮೆ ಮಾಡುತ್ತದೆ. ಮಸ್ಕ್ ಅವರು ಜನವರಿಯಲ್ಲಿ ಮೊದಲ ಬಾರಿಗೆ Amazon.com Inc ಸಂಸ್ಥಾಪಕ ಜೆಫ್​ ಬೆಜೋಸ್​ರನ್ನು ಹಿಂದಿಕ್ಕಿದರು. ಮತ್ತು ಇಬ್ಬರ ನಡುವಿನ ಅಂತರವು ಇತ್ತೀಚೆಗೆ 14,300 ಕೋಟಿ ಡಾಲರ್​ಗಳಷ್ಟು ವಿಸ್ತಾರವಾಗಿದೆ. ಇದು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾದ ಬಿಲ್ ಗೇಟ್ಸ್ ಅವರ ನಿವ್ವಳ ಮೌಲ್ಯಕ್ಕಿಂತ ಹೆಚ್ಚಾಗಿದೆ.

ಕಳೆದ ಕೆಲವು ತಿಂಗಳಲ್ಲಿ ಟೆಸ್ಲಾದಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿರುವ ಕ್ಯಾಥಿ ವುಡ್‌ನ ARK ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಮಂಗಳವಾರದಂದು 750 ಮಿಲಿಯನ್‌ ಡಾಲರ್​ಗಿಂತಲೂ ಹೆಚ್ಚು ಕಳೆದುಕೊಂಡಿದ್ದರೆ, ಕಂಪೆನಿಯ ಎರಡನೇ ಅತಿ ದೊಡ್ಡ ವಯಕ್ತಿಕ ಷೇರುದಾರರಾದ ಒರಾಕಲ್ ಕಾರ್ಪ್ ಸಂಸ್ಥಾಪಕ ಲ್ಯಾರಿ ಎಲಿಸನ್ 210 ಕೋಟಿ ಯುಎಸ್​ಡಿ ಕಳೆದುಕೊಂಡರು. ಕುಸಿತದ ಹೊರತಾಗಿಯೂ ಬಲವಾದ ಗಳಿಕೆಯ ಬೆಳವಣಿಗೆ ಮತ್ತು ವಿತರಣಾ ಸಂಖ್ಯೆಗಳು ಹಾಗೂ ಸ್ಪೇಸ್‌ಎಕ್ಸ್‌ಗೆ ಹೆಚ್ಚಿನ ಮೌಲ್ಯಮಾಪನದ ಹಿನ್ನೆಲೆಯಲ್ಲಿ ಟೆಸ್ಲಾ ಲಾಭದಿಂದ ಈ ವರ್ಷ ಮಸ್ಕ್‌ನ ಆಸ್ತಿಯು ಶೇ 70ರಷ್ಟು ಹೆಚ್ಚಾಗಿದೆ.

ಟೆಸ್ಲಾ ಮೂರನೇ ತ್ರೈಮಾಸಿಕ ಫಲಿತಾಂಶಗಳು ಮಾರುಕಟ್ಟೆಯ ನಿರೀಕ್ಷೆಗಳನ್ನು ಗಣನೀಯವಾಗಿ ಮೀರಿದ ನಂತರ ಮತ್ತು ಬಾಡಿಗೆ-ಕಾರು ಕಂಪೆನಿ ಹರ್ಟ್ಜ್ ಗ್ಲೋಬಲ್ ಹೋಲ್ಡಿಂಗ್ಸ್ ಇಂಕ್ 1,00,000 ಟೆಸ್ಲಾ ಕಾರುಗಳಿಗೆ ಆರ್ಡರ್​ ನೀಡಿದ ನಂತರ ಕಳೆದ ತಿಂಗಳು ಬೆಂಚ್‌ಮಾರ್ಕ್ ಅನ್ನು ಟೆಸ್ಲಾದ ಮಾರುಕಟ್ಟೆ ಬಂಡವಾಳ ಮೌಲ್ಯವು 1 ಲಕ್ಷ ಕೋಟಿ ಡಾಲರ್​ಗಿಂತಲೂ ಮೀರಿದೆ.

ಇದನ್ನೂ ಓದಿ: Elon Musk: ವಿಶ್ವದ ಸಿರಿವಂತರ ಜಗಳ; ಜೆಫ್ ಬೆಜೋಸ್​ಗೆ ಬೆಳ್ಳಿ ಪದಕ ಕಳಿಸಿದೆ ಎಂದು ಕಾಲೆಳೆದ ಮಸ್ಕ್

TV9 Kannada


Leave a Reply

Your email address will not be published. Required fields are marked *