ENG vs IND: ನಾಯಕತ್ವ ಬಿಟ್ಟರೂ ಜವಬ್ದಾರಿ ಮರೆಯದ ಕೊಹ್ಲಿ; ಪಂದ್ಯಕ್ಕೂ ಮುನ್ನ ಆಟಗಾರರಿಗೆ ಗೆಲುವಿನ ಟಿಪ್ಸ್ ನೀಡಿದ ವಿರಾಟ್ | ENG vs IND Virat Kohli gives a team talk ahead of Indias Tour Match vs Leicestershire


ENG vs IND: ನಾಯಕತ್ವ ಬಿಟ್ಟರೂ ಜವಬ್ದಾರಿ ಮರೆಯದ ಕೊಹ್ಲಿ; ಪಂದ್ಯಕ್ಕೂ ಮುನ್ನ ಆಟಗಾರರಿಗೆ ಗೆಲುವಿನ ಟಿಪ್ಸ್ ನೀಡಿದ ವಿರಾಟ್

ಆಟಗಾರರಿಗೆ ಟಿಪ್ಸ್ ನೀಡಿದ ಕೊಹ್ಲಿ

Virat Kohli: ವಿರಾಟ್ ನಾಯಕತ್ವದಲ್ಲಿ ಆಡಿದ ಅದೇ ಸರಣಿಯ ಉಳಿದಿರುವ ಏಕೈಕ ಟೆಸ್ಟ್ ಈಗ ನಡೆಯುತ್ತಿದೆ. ಆದರೆ, ಈ ಮಧ್ಯೆ ವಿರಾಟ್ ಕೊಹ್ಲಿ ಕೈಯಿಂದ ಟೀಂ ಇಂಡಿಯಾ ನಾಯಕತ್ವವನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸುವ ದೊಡ್ಡ ಬದಲಾವಣೆಯಾಗಿದೆ.

ನಾಯಕತ್ವ ಹೋದರೆ ವಿರಾಟ್ ಕೊಹ್ಲಿ (Virat Kohli)ಗೆ ಬೆಲೆ ಇಲ್ಲ ಎಂದು ಹೇಳಿದ್ಯಾರು? ಟೀಮ್ ಇಂಡಿಯಾದಲ್ಲಿ ಅವರ ಪ್ರಬಲ ಉಪಸ್ಥಿತಿ ಎಂದಿಗೂ ಕೊನೆಯಾಗುವುದಿಲ್ಲ ಎಂಬುದಕ್ಕೆ ಇಂಗ್ಲೆಂಡ್ ಸರಣಿಯೇ ಸಾಕ್ಷಿಯಾಗಿದೆ. ಇದಕ್ಕೆ ಸೂಕ್ತವೆಂಬಂತೆ ಲೀಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮೊದಲು ಕೊಹ್ಲಿ ತನ್ನ ಪ್ರಾಮುಖ್ಯತೆಯನ್ನು ಸಾಭೀತು ಮಾಡಿದ್ದಾರೆ. ಅಭ್ಯಾಸ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಟೀಂ ಇಂಡಿಯಾದಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಿದ್ದಾರೆ. ಅಭ್ಯಾಸದ ವೇಳೆ ರೋಹಿತ್ ಶರ್ಮಾ (Rohit Sharma) ಏನು ಮಾಡಬೇಕೋ ಅದನ್ನು ಕೊಹ್ಲಿ ಮಾಡಿದ್ದಾರೆ. ಜುಲೈ 1 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ವಹಿಸುವುದಿಲ್ಲ ಎಂಬುದನ್ನು ಈ ವಿಡಿಯೋ ಸೂಚಿಸುತ್ತಿದೆ.

ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ವಿಜಯದ ಧ್ವಜ ಹಾರಿಸಿತ್ತು. ಹೀಗಾಗಿ ಭಾರತ ತಂಡ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಕೊನೆಯ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿತ್ತು. ಆದರೆ ಟೀಂ ಇಂಡಿಯಾದಲ್ಲಿನ ಕೊರೊನಾ ಪ್ರಕರಣಗಳಿಂದಾಗಿ ಪಂದ್ಯವನ್ನು ಮುಂದೂಡಬೇಕಾಯಿತು. ವಿರಾಟ್ ನಾಯಕತ್ವದಲ್ಲಿ ಆಡಿದ ಅದೇ ಸರಣಿಯ ಉಳಿದಿರುವ ಏಕೈಕ ಟೆಸ್ಟ್ ಈಗ ನಡೆಯುತ್ತಿದೆ. ಆದರೆ, ಈ ಮಧ್ಯೆ ವಿರಾಟ್ ಕೊಹ್ಲಿ ಕೈಯಿಂದ ಟೀಂ ಇಂಡಿಯಾ ನಾಯಕತ್ವವನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸುವ ದೊಡ್ಡ ಬದಲಾವಣೆಯಾಗಿದೆ.

TV9 Kannada


Leave a Reply

Your email address will not be published.