ENG vs NZ: ಆಂಗ್ಲರೆದುರು ಕಿವೀಸ್ ಬ್ಯಾಟರ್​ಗಳ ಶತಕದಬ್ಬರ! 22 ವರ್ಷಗಳ ಹಳೆಯ ದಾಖಲೆ ಉಡೀಸ್ | ENG vs NZ Daryl Mitchell and Tom Blundell break 22 years old record of highest 5th wicket partnership for New Zealand

ENG vs NZ: ಬ್ಲಂಡೆಲ್ ಮತ್ತು ಮಿಚೆಲ್ ಐದನೇ ವಿಕೆಟ್‌ಗೆ 236 ರನ್‌ಗಳ ಅದ್ಭುತ ಜೊತೆಯಾಟವನ್ನು ನಡೆಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಐದನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟದ 22 ವರ್ಷಗಳ ಹಳೆಯ ದಾಖಲೆಯನ್ನು ಇಬ್ಬರೂ ಮುರಿದರು.

Jun 11, 2022 | 7:17 PM

pruthvi Shankar

|

Jun 11, 2022 | 7:17 PM
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಉತ್ತಮ ಆರಂಭವನ್ನು ಮಾಡಿತು, ಲಾರ್ಡ್ಸ್‌ನಲ್ಲಿ ಅಮೋಘ ಜಯ ದಾಖಲಿಸಿತು. ಆದರೆ, ಆ ಟೆಸ್ಟ್​ನಲ್ಲಿ ನ್ಯೂಜಿಲೆಂಡ್​ನ ಇಬ್ಬರು ಬ್ಯಾಟ್ಸ್​ಮನ್​ಗಳಿಂದ ಆಂಗ್ಲರ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ನಾಟಿಂಗ್​ಹ್ಯಾಮ್​ನಲ್ಲೂ ಇದೇ ಇಬ್ಬರು ಬ್ಯಾಟ್ಸ್​ಮನ್​ಗಳು ಇಂಗ್ಲೆಂಡ್​ಗೆ ಆಪತ್ಬಾಂಧವರಾದರು. ಲಾರ್ಡ್ಸ್ ನಂತರ ಟ್ರೆಂಟ್ ಬ್ರಿಡ್ಜ್‌ನಲ್ಲಿ ಉತ್ತಮ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಡ್ಯಾರಿಲ್ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಜೋಡಿ ಸ್ಮರಣೀಯ ದಾಖಲೆಯನ್ನು ಮಾಡಿದೆ.

ಜೂನ್ 11, ಶನಿವಾರದಂದು ಟ್ರೆಂಟ್ ಬ್ರಿಡ್ಜ್ ಟೆಸ್ಟ್‌ನ ಎರಡನೇ ದಿನದ ಮೊದಲ ಸೆಷನ್‌ನಲ್ಲಿ, ಬ್ಲಂಡೆಲ್ ಮತ್ತು ಮಿಚೆಲ್ ಐದನೇ ವಿಕೆಟ್‌ಗೆ 236 ರನ್‌ಗಳ ಅದ್ಭುತ ಜೊತೆಯಾಟವನ್ನು ನಡೆಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಐದನೇ ವಿಕೆಟ್‌ಗೆ ಅತ್ಯಧಿಕ ಜೊತೆಯಾಟದ 22 ವರ್ಷಗಳ ಹಳೆಯ ದಾಖಲೆಯನ್ನು ಇಬ್ಬರೂ ಮುರಿದರು. ಇವರಿಗಿಂತ ಮೊದಲು, ನಾಥನ್ ಆಸ್ಟಲ್ ಮತ್ತು ಕ್ರೇಗ್ ಮೆಕ್‌ಮಿಲನ್ 2000 ರಲ್ಲಿ ಜಿಂಬಾಬ್ವೆ ವಿರುದ್ಧ 222 ರನ್ ಜೊತೆಯಾಟವನ್ನು ಹಂಚಿಕೊಂಡಿದ್ದರು.

ವಿಶೇಷವೆಂದರೆ ಇದಕ್ಕೂ ಮುನ್ನ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಲಾರ್ಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಐದನೇ ವಿಕೆಟ್‌ಗೆ 195 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು, ಇದು ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ನ ದಾಖಲೆಯಾಗಿತ್ತು. ಈಗ ಇಬ್ಬರೂ ಅದನ್ನು ಮುರಿದಿದ್ದಾರೆ.

ENG vs NZ: ಆಂಗ್ಲರೆದುರು ಕಿವೀಸ್ ಬ್ಯಾಟರ್​ಗಳ ಶತಕದಬ್ಬರ! 22 ವರ್ಷಗಳ ಹಳೆಯ ದಾಖಲೆ ಉಡೀಸ್

ನಿಸ್ಸಂಶಯವಾಗಿ ವೈಯಕ್ತಿಕ ಸಾಧನೆಗಳಿಲ್ಲದೆ ಈ ಪಾಲುದಾರಿಕೆ ಸಾಧ್ಯವಾಗುತ್ತಿರಲಿಲ್ಲ. ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ನಂತರ ಮಿಚೆಲ್ ಟ್ರೆಂಟ್ ಬ್ರಿಡ್ಜ್‌ನಲ್ಲಿ ಶತಕ ಬಾರಿಸಿದರು. ಮೊದಲ ಸೆಷನ್‌ನಲ್ಲಿಯೇ ಮಿಚೆಲ್ ತಮ್ಮ ಮೂರನೇ ಟೆಸ್ಟ್ ಶತಕವನ್ನು ಗಳಿಸಿದರು.

ENG vs NZ: ಆಂಗ್ಲರೆದುರು ಕಿವೀಸ್ ಬ್ಯಾಟರ್​ಗಳ ಶತಕದಬ್ಬರ! 22 ವರ್ಷಗಳ ಹಳೆಯ ದಾಖಲೆ ಉಡೀಸ್

ಮಿಚೆಲ್ ಹೊರತಾಗಿ ಬ್ಲುಂಡೆಲ್ ಕೂಡ ಅಂತಿಮವಾಗಿ ತಮ್ಮ ಖಾತೆಗೆ ಶತಕ ಸೇರಿಸಿದರು. ಲಾರ್ಡ್ಸ್ ಟೆಸ್ಟ್‌ನಲ್ಲಿ ಕೇವಲ 5 ರನ್‌ಗಳಿಂದ ಶತಕ ವಂಚಿತರಾಗಿದ್ದ ಬ್ಲಂಡೆಲ್ ಈ ಬಾರಿ ಶತಕ ಪೂರೈಸಿದರು. 106 ರನ್ ಗಳಿಸಿ ಔಟಾದರು.

Most Read Stories

TV9 Kannada

Leave a Reply

Your email address will not be published.