ENG vs NZ: ಸೋಲಿನ ಸುಳಿಯಲ್ಲಿರುವ ನ್ಯೂಜಿಲೆಂಡ್​ಗೆ ಆಘಾತ; ನಾಯಕ ವಿಲಿಯಮ್ಸನ್​ಗೆ ಕೊರೊನಾ ಸೋಂಕು | New zealand captain kane williamson out of second test match against england after testing covid positive


ENG vs NZ: ಸೋಲಿನ ಸುಳಿಯಲ್ಲಿರುವ ನ್ಯೂಜಿಲೆಂಡ್​ಗೆ ಆಘಾತ; ನಾಯಕ ವಿಲಿಯಮ್ಸನ್​ಗೆ ಕೊರೊನಾ ಸೋಂಕು

ಕೇನ್ ವಿಲಿಯಮ್ಸನ್

ENG vs NZ: ಪಂದ್ಯದ ಮೊದಲು, ಇಡೀ ತಂಡದ ಕೋವಿಡ್ ಪರೀಕ್ಷೆಯನ್ನು ಮಾಡಲಾಯಿತು, ಇದರಲ್ಲಿ ವಿಲಿಯಮ್ಸನ್ ಅವರ ಟೆಸ್ಟ್ ಪಾಸಿಟಿವ್ ಬಂದಿದೆ, ಇಡೀ ತಂಡದ ಉಳಿದ ಪರೀಕ್ಷೆಯು ನೆಗೆಟಿವ್ ಬಂದಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರೀ ಹಿನ್ನಡೆ ಅನುಭವಿಸಿದೆ (NZ vs ENG). ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson)​ಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಟಾಮ್ ಲ್ಯಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರ ನಾಟಿಂಗ್ ಹ್ಯಾಮ್ ನಲ್ಲಿ ಆರಂಭವಾಗಲಿದೆ. ತಂಡದ ಕೋಚ್ ಗ್ಯಾರಿ ಸ್ಟೆಡ್ ವಿಲಿಯಮ್ಸನ್ ಬಗ್ಗೆ ಮಾಹಿತಿ ನೀಡುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಪಂದ್ಯದ ಮೊದಲು, ಇಡೀ ತಂಡದ ಕೋವಿಡ್ ಪರೀಕ್ಷೆಯನ್ನು ಮಾಡಲಾಯಿತು, ಇದರಲ್ಲಿ ವಿಲಿಯಮ್ಸನ್ ಅವರ ಟೆಸ್ಟ್ ಪಾಸಿಟಿವ್ (Kovid-19 positive) ಬಂದಿದೆ, ಇಡೀ ತಂಡದ ಉಳಿದ ಪರೀಕ್ಷೆಯು ನೆಗೆಟಿವ್ ಬಂದಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ನ್ಯೂಜಿಲೆಂಡ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಕೋಚ್, “ದುರದೃಷ್ಟವಶಾತ್ ಕೇನ್ ವಿಲಿಯಮ್ಸನ್ ಇಂದು ಸಂಜೆ ಕೋವಿಡ್ -19 ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಆದ್ದರಿಂದ ಅವರು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವುದಿಲ್ಲ.ವಿಲಿಯಮ್ಸನ್ ಬದಲಿಗೆ ಹ್ಯಾಮಿಶ್ ರುದರ್‌ಫೋರ್ಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ.ಟಾಮ್ ಲ್ಯಾಥಮ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

TV9 Kannada


Leave a Reply

Your email address will not be published.