ENG vs NZ, 1st Test: ಲಾರ್ಡ್​​ನಲ್ಲಿ ವಿಕೆಟ್​ಗಳ ಸುರಿಮಳೆ: ಮೊದಲ ದಿನವೇ ಪತನಗೊಂಡವು 17 ವಿಕೆಟ್ಸ್ | England vs New Zealand 1st Test New Zealand Restrict England To 116 7 trailing the visitors by 16 runs


England vs New Zealand, 1st Test: ಇಂಗ್ಲೆಂಡ್ ಮೊದಲ ದಿನದಾಟಕ್ಕೆ 7 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿದೆ. ಆಂಗ್ಲರು 16 ರನ್​ಗಳ ಹಿನ್ನಡೆಯಲ್ಲಿದ್ದಾರೆ. ಅಚ್ಚರಿ ಎಂದರೆ ಉಭಯ ತಂಡಗಳ ಯಾವುದೇ ಬ್ಯಾಟರ್​​ಗಳಿಂದ ಒಂದೇ ಒಂದು ಅರ್ಧಶತಕ ಕೂಡ ಬಂದಿಲ್ಲ.

ಇಂಗ್ಲೆಂಡ್ ಪ್ರವಾಸದಲ್ಲಿರುವ ನ್ಯೂಜಿಲೆಂಡ್ (England vs New Zealand) ಕ್ರಿಕೆಟ್ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಲಂಡನ್​ನ ಲಾರ್ಡ್ಸ್ (Lords)​ ಮೈದಾನದಲ್ಲಿ ಆರಂಭವಾಗಿರುವ ಪ್ರಥಮ ಟೆಸ್ಟ್​ನ ಮೊದಲ ದಿನವೇ ವಿಕೆಟ್​ಗಳ ಮಳೆ ಸುರಿಯಿತು. ಬರೋಬ್ಬರಿ 17 ವಿಕೆಟ್​ಗಳು ಪತನಗೊಂಡವು. ಜೇಮ್ಸ್​ ಆಂಡರ್ಸನ್ ಹಾಗೂ ಮ್ಯಾಟಿ ಪಾಟ್ಸ್ (Matty Potts)​ ಬೌಲಿಂಗ್ ಬಿರುಗಾಳಿಗೆ ನ್ಯೂಜಿಲೆಂಡ್ ತತ್ತರಿಸಿ 132 ರನ್​ಗೆ ಆಲೌಟ್ ಆದರೆ, ಇಂಗ್ಲೆಂಡ್ ಟಿಮ್ ಸೌಥೀ, ಟ್ರೆಂಟ್ ಬೌಲ್ಟ್ ಹಾಗೂ ಖೈಲ್ ಜೆಮಿಸನ್ ಮಾರಕ ಬೌಲಿಂಗ್​ಗೆ ಮೊದಲ ದಿನದಾಟಕ್ಕೆ 7 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿದೆ. ಆಂಗ್ಲರು 16 ರನ್​ಗಳ ಹಿನ್ನಡೆಯಲ್ಲಿದ್ದಾರೆ. ಅಚ್ಚರಿ ಎಂದರೆ ಉಭಯ ತಂಡಗಳ ಯಾವುದೇ ಬ್ಯಾಟರ್​​ಗಳಿಂದ ಒಂದೇ ಒಂದು ಅರ್ಧಶತಕ ಕೂಡ ಬಂದಿಲ್ಲ.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಪಡೆ ಭಾರೀ ಆಘಾತಕ್ಕೆ ಒಳಗಾಗಿ ಅಗ್ರ ಕ್ರಮಾಂಕದ ಆರು ಆಟಗಾರರು ಶೀಘ್ರವಾಗಿ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ಸೇರಿದರು. ಇಂಗ್ಲೆಂಡ್ ತಂಡಕ್ಕೆ ಅನುಭವಿ ಜೇಮ್ಸ್ ಆಂಡರ್ಸನ್ ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಮ್ಯಾಟಿ ಪಾಟ್ಸ್ ತಲಾ 4 ವಿಕೆಟ್ಸ್ ಪಡೆದು ಮಿಂಚಿದರು. ಇನ್ನಿಂಗ್ಸ್ ಆರಂಭದಿಂದಲೇ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಈ ಜೋಡಿ, ಕೇನ್ ವಿಲಿಯಂಸನ್ ಪಡೆಯ ಬ್ಯಾಟಿಂಗ್ ಬೆನ್ನೆಲು ಮುರಿದರು.

ಕಳಪೆ ಫಾರ್ಮ್​, ತಂಡದಿಂದ ಕೋಕ್.. ಐಪಿಎಲ್‌ನಲ್ಲೂ ಸೈಲೆಂಟ್, ಈಗ ಗಾಯದ ಸಮಸ್ಯೆ; ರಹಾನೆ ತಂಡಕ್ಕೆ ಮರಳುವುದು ಯಾವಾಗ?

ಪ್ರಮುಖ ಬ್ಯಾಟರ್​ಗಳ ವೈಫಲ್ಯದ ನಡುವೆಯೂ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾಲಿನ್ ಡಿಗ್ರ್ಯಾಂಡ್ಹೊಮ್ 42(50), ಟಿಮ್ ಸೌಥಿ 26(23) ಉಪಯುಕ್ತ ಬ್ಯಾಟಿಂಗ್ ಮೂಲಕ ನೆರವಾದರು. ಪರಿಣಾಮ ಶತಕದ ಗಡಿದಾಟಿದ ಕಿವೀಸ್ 132 ರನ್​ಗಳಿಗೆ ಸರ್ವಪತನ ಕಂಡಿತು.

ನಂತರ ತನ್ನ ಮೊದಲ ಇನ್ನಿಂಗ್ಸ್​ ಶುರುಮಾಡಿದ ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಅಲೆಕ್ಸ್ ಲೀಸ್ 25(77) ಹಾಗೂ ಜ್ಯಾಕ್ ಕ್ರಾವ್ಲೆ 43(56) ಮೊದಲ ವಿಕೆಟ್​​ಗೆ 59 ರನ್ ಗಳ ಭರ್ಜರಿ ಆರಂಭ ನೀಡಿದರು. ಆದರೆ ನಂತರದಲ್ಲಿ ನಾಟಕೀಯ ಕುಸಿತ ಕಂಡ ಆಂಗ್ಲರ ಪಡೆ, ಕೇವಲ 25 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರೀ ಆಘಾತ ಕಂಡಿತು.

ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಬೆನ್ ಸ್ಟೋಕ್ಸ್(1) ಸೇರಿದಂತೆ ಯಾವುದೇ ಆಟಗಾರರು ನೆಲಕಚ್ಚಿ ಆಡಲಿಲ್ಲ. ಸದ್ಯ ಮೊದಲ ದಿನದಂತ್ಯಕ್ಕೆ ಇಂಗ್ಲೆಂಡ್​ 7 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಕಿವೀಸ್ ಪರ ಟಿಮ್ ಸೌಥಿ, ಟ್ರೆಂಟ್ ಬೋಲ್ಟ್ ಹಾಗೂ ಕೈಲ್ ಜೆಮಿಸ‌ನ್ ತಲಾ 2 ವಿಕೆಟ್ ಪಡೆದರೆ, ಗ್ರ್ಯಾಂಡ್ಹೋಮ್ 1 ವಿಕೆಟ್ ಕಿತ್ತರು.

TV9 Kannada


Leave a Reply

Your email address will not be published. Required fields are marked *