ENG vs NZ, Live Score, T20 World Cup 2021: ಇಂಗ್ಲೆಂಡ್ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ನ್ಯೂಜಿಲೆಂಡ್? | England vs New Zealand Live Score today t20 world cup 2021 match scorecard online In kannada


ENG vs NZ, Live Score, T20 World Cup 2021: ಇಂಗ್ಲೆಂಡ್ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ನ್ಯೂಜಿಲೆಂಡ್?

ಐಸಿಸಿ ಟಿ20 ವಿಶ್ವಕಪ್ 2021ರ ಅಂತಿಮ ಸುತ್ತಿನ ಪಂದ್ಯ ಆರಂಭಗೊಂಡಿದ್ದು, ಇಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು 2019 ರ ವಿಶ್ವಕಪ್ ಫೈನಲ್‌ನ ಪುನರಾವರ್ತನೆಯಾಗಿದೆ. ಜುಲೈ 14, 2019 ರಂದು ಲಾರ್ಡ್ಸ್‌ನಲ್ಲಿ ನಡೆದ ODI ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ವಿವಾದಾತ್ಮಕವಾಗಿ ನ್ಯೂಜಿಲೆಂಡ್ ಅನ್ನು ಸೋಲಿಸಿತು ಮತ್ತು ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದೀಗ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಆ ಸೋಲನ್ನು ತೀರಿಸಲು ಅವಕಾಶವಿದ್ದು ಗೆಲುವಿಗಾಗಿ ಶತಪ್ರಯತ್ನ ಮಾಡಲಿದೆ. ಎರಡೂ ತಂಡಗಳು ತಮ್ಮ ತಮ್ಮ ಗುಂಪಿನಲ್ಲಿ ತಲಾ 4 ಪಂದ್ಯಗಳನ್ನು ಗೆದ್ದವು, ಆದರೆ ಪ್ರದರ್ಶನದ ದೃಷ್ಟಿಯಿಂದ ಇಂಗ್ಲೆಂಡ್ ಬಲಿಷ್ಠವಾಗಿದೆ. ಆದಾಗ್ಯೂ, ಇಯಾನ್ ಮಾರ್ಗನ್ ಅವರ ತಂಡವು ಅದರ ಇಬ್ಬರು ಪ್ರಮುಖ ಆಟಗಾರರಾದ ಜೇಸನ್ ರಾಯ್ ಮತ್ತು ಟಿಮಲ್ ಮಿಲ್ಸ್ ಇಲ್ಲದೆ ಕಣಕ್ಕಿಳಿಯಲಿದೆ. ಗಾಯದ ಸಮಸ್ಯೆಯಿಂದಾಗಿ ಇಬ್ಬರೂ ಆಟಗಾರರು ಟೂರ್ನಿಯಿಂದ ಹೊರಗುಳಿದಿದ್ದಾರೆ.

LIVE Cricket Score & Updates

TV9 Kannada


Leave a Reply

Your email address will not be published. Required fields are marked *