ಬೆಂಗಳೂರು: ರಾಜಾಜಿ ನಗರದಲ್ಲಿರುವ ESIC ವೈದ್ಯಕೀಯ ಕಾಲೇಜಿಗೆ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು.

ವಿದ್ಯಾರ್ಥಿ ವೇತನದ ಪರವಾಗಿ ಮತ್ತು ಮೂಲ ಸೌಕರ್ಯ ವ್ಯವಸ್ಥೆ ಸರಿಯಾಗಿ ನೀಡಿಲ್ಲದಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ಹಾಸ್ಟೆಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖುದ್ದು ಸ್ವತಃ ತಾವೇ ಹಾಸ್ಟೆಲ್​ನ ಕೊಠಡಿಗೆ ಭೇಟಿ ನೀಡಿ ಸಮಸ್ಯೆಗಳನ್ನ ತಿಳಿದುಕೊಂಡರು.

ಇದನ್ನೂ ಓದಿ: ಮೋದಿ ಸಂಪುಟಕ್ಕೆ ಮೇಜರ್ ಸರ್ಜರಿ? 27 ಸಂಭಾವ್ಯ ಸಚಿವರ ಲಿಸ್ಟ್​ನಲ್ಲಿ ಕರ್ನಾಟಕದಿಂದ ಯಾರಿಗೆ ಮಣೆ?

ಈ ವೇಳೆ ವಿದ್ಯಾರ್ಥಿಗಳಿಗೆ ಸುಮಾರು 4 ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರೋದು ಬೆಳಕಿಗೆ ಬಂದಿದೆ. ವಾರ್ಷಿಕವಾಗಿ 40 ಕೋಟಿ ಅನುದಾನ ಕೇವಲ ನಿರ್ವಹಣೆಗೆ ಅಂತಾ ಬರುತ್ತೆ. ಈ ಅನುದಾನವನ್ನ ಏನು ಮಾಡುತ್ತೀರಿ? ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಇದನ್ನೂ ಓದಿ: ‘KRS ಜಲಾಶಯದ ಬಾಗಿಲಿನಲ್ಲಿ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು’ -ಸುಮಲತಾ ವಿರುದ್ಧ ಹೆಚ್​​ಡಿಕೆ ಕಿಡಿ

The post ESIC ವೈದ್ಯಕೀಯ ಕಾಲೇಜಿನ ಅಧಿಕಾರಿಗಳಿಗೆ ರಾಜ್ಯಸಭಾ ಸದಸ್ಯ ಚಂದ್ರಶೇಖರ್ ತರಾಟೆ appeared first on News First Kannada.

Source: newsfirstlive.com

Source link