ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ಹೈವೋಲ್ಟೇಜ್ ಕ್ಷೇತ್ರವೆನಿಸಿಕೊಂಡಿದ್ದ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯ ಸುವೆಂದು ಅಧಿಕಾರಿ ಗೆದ್ದಿದ್ದಾರೆ. ಈ ಹಿನ್ನೆಲೆ ಕ್ಷೇತ್ರದ ಮತಗಳ ಮರುಎಣಿಕೆ ಆಗಬೇಕೆಂದು ಮಮತಾ ಅವರ ಟಿಎಂಸಿ ಪಕ್ಷ ಮನವಿ ಮಾಡಿತ್ತು. ಆದ್ರೆ ಮರುಎಣಿಕೆಗೆ ಚುನಾವಣಾ ಆಯೋಗ ನಿರಾಕರಿಸಿದೆ ಎಂದು ವರದಿಯಾಗಿದೆ.
ಸುವೆಂದು ಅಧಿಕಾರಿ 1700ಕ್ಕೂ ಅಧಿಕ ಮತಗಳ ಅಂತರದಿಂದ ಮಮತಾ ವಿರುದ್ಧ ಗೆದ್ದಿದ್ದಾರೆ. ನಿನ್ನೆ ಕೌಂಟಿಂಗ್ ಮಧ್ಯೆ ಮಮತಾ ಬ್ಯಾನರ್ಜಿ 1200 ವೋಟ್​ಗಳಿಂದ ಗೆದ್ದಿದ್ದಾರೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ ಕೆಲ ಕಾಲ ಗೊಂದಲ ಉಂಟಾಗಿತ್ತು. ಬಳಿಕ ಅಂತಿಮ ಸುತ್ತಿನಲ್ಲಿ ಸುವೆಂದು ಅಧಿಕಾರಿ ಗೆದ್ದಿದ್ದಾರೆ ಎಂದು ಅನೌನ್ಸ್ ಮಾಡಲಾಯ್ತು.
ಈ ಹಿನ್ನೆಲೆ ನಿನ್ನೆ ಸಂಜೆ  ರಾಜ್ಯಸಭಾ ಸಂಸದ ಡೆರೆಕ್ ಒಬ್ರಿಯಾನ್, ಮಾಜಿ ಮೇಯರ್ ಫಿರ್ಹಾದ್ ಹಕೀಮ್, ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಅತೀನ್ ಘೋಷ್ ನೇತೃತ್ವದ ತೃಣಮೂಲ ಕಾಂಗ್ರೆಸ್​​ ನಿಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಅರಿಜ್ ಅಫ್ತಾಬ್ ಅವರನ್ನು ಭೇಟಿ ಮಾಡಿ ಮತಗಳನ್ನು ಮರುಎಣಿಕೆ ಮಾಡುವಂತೆ ಒತ್ತಾಯಿಸಿ ಪತ್ರವನ್ನು ಸಲ್ಲಿಸಿದ್ದರು.
ನಂದಿಗ್ರಾಮದಲ್ಲಿ ಮತಗಳ ಎಣಿಕೆಯ ಸಮಯದಲ್ಲಿ ಕೆಲವು ಕಾನೂನುಬಾಹಿರ  ಚಟುವಟಿಕೆಗಳು ನಡೆದಿವೆ. ಹಲವು ಬಾರಿ ಮತಎಣಿಕೆಯನ್ನ ನಿಲ್ಲಿಸಲಾಗಿತ್ತು. ಈ ವೇಳೆ ಇವಿಎಂ ಟ್ಯಾಂಪರ್ ಮಾಡಲಾಗಿದೆ. ಬಿಜೆಪಿ ಪರವಾಗಿ ನಕಲಿ ಮತಗಳನ್ನ ಎಣಿಸಲಾಗಿದೆ. ಟಿಎಂಸಿ ಪರ ಮತಗಳನ್ನ ರಿಜೆಕ್ಟ್​ ಮಾಡಲಾಗಿದೆ. ಮಮತಾ ಬ್ಯಾನರ್ಜಿ, ವೋಟ್​ಗಳ ಮರುಎಣಿಕೆ ಮಾಡಬೇಕೆಂದು ನಂದಿಗ್ರಾಮ ರಿಟರ್ನಿಂಗ್ ಆಫೀಸರ್ ಬಳಿ ಮನವಿ ಮಾಡಿದ್ದರು. ಆದ್ರೆ ಅದಕ್ಕೆ ಅವರು ನಿರಾಕರಿಸಿದ್ದಾರೆ. ಇದು ಕಾನೂನಿನಲ್ಲಿ ತಪ್ಪು ಎಂದು ಪತ್ರದಲ್ಲಿ ಟಿಎಂಸಿ ಆರೋಪಿಸಿತ್ತು.

The post EVM ಟ್ಯಾಂಪರಿಂಗ್ ಆಗಿದೆ, ಮತಗಳ ಮರುಎಣಿಯಾಗಲಿ ಎಂದ TMC -ತಿರಸ್ಕರಿಸಿದ ಚುನಾವಣಾ ಆಯೋಗ appeared first on News First Kannada.

Source: newsfirstlive.com

Source link