ಮೇಕೆ ದಾಟು ಪಾದಯಾತ್ರೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸಾವಿರಾರು ಜನರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಕೂಡ ಪಾದಯಾತ್ರೆ ಮುಂದುವರೆಸಿದ್ದಾರೆ.
ಇಂದು ಡಿಕೆ ಶಿವಕುಮಾರ್ ಪಾದಯಾತ್ರೆ ಅವ್ವೇರಹಳ್ಳಿ ತಲುಪಿದೆ. ಅವ್ವೇರಹಳ್ಳಿ ಬಳಿ ಬರ್ತಿದ್ದ ಹಾಗೆ ಡಿ.ಕೆ ಶಿವಕುಮಾರ್ ಮತ್ತು ಬೆಂಬಲಿಗರು ಜೋಡೆತ್ತುಗಳ ಬಂಡಿ ಏರಿದ್ದಾರೆ. ಈ ವೇಳೆ ಒಂದೆಡೆ ಬೆಂಬಲಿಗರು ಹಲವು ಸಂಖ್ಯೆಯಲ್ಲಿ ಬಂಡಿ ಏರಿದ್ದರೆ, ಇನ್ನೊಂದೆಡೆ ಹೂವನ್ನು ದೊಡ್ಡ ಪ್ರಮಾಣದಲ್ಲಿ ಡಿ.ಕೆ ಶಿವಕುಮಾರ್ ಮೇಲೆ ಎಸೆಯಲಾಗುತ್ತಿತ್ತು. ಈ ವೇಳೆ ಭಾರ ತಾಳಲಾರದೇ ಎತ್ತುಗಳು ನೆಲಕ್ಕೆ ಕುಸಿದು ಬಿದ್ದ ಘಟನೆ ನಡೆದಿದೆ. ಮೂಕ ಪ್ರಾಣಿಗಳು ಜನರ ಭಾರ ತಾಳಲಾರದೇ ಕುಸಿದು ಬೀಳುವಂತಾಗಿದೆ. ಈ ಘಟನೆಯಲ್ಲಿ ಎತ್ತುಗಳು ಗಂಭೀರವಾಗಿ ಗಾಯಗೊಂಡಿವೆಯಾ? ಅಥವಾ ಇಲ್ಲವಾ? ಅನ್ನೋ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಆದ್ರೆ, ಬಂಡಿ ಏರಿದ್ದ ಎಲ್ಲರೂ ಸುರಕ್ಷಿತವಾಗಿರೋದು ಕಂಡು ಬಂದಿದೆ.