ಬೆಂಗಳೂರು: ಮೊನ್ನೆ ತಾನೆ ಮೇಕೆ ದಾಟು ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದ ಮಾಜಿ ಸಚಿವೆ ಹಾಗೂ ಖ್ಯಾತ ನಟಿ ಉಮಾಶ್ರೀ ಅವರ ಕಾಲಿಗೆ ಕುದಿಯುವ ನೀರು ಬಿದ್ದು ಬೊಬ್ಬೆಯಾಗಿವೆ.
ಅಷ್ಟಕ್ಕೂ ಆಗಿದ್ದು ಏನು?
ಕರ್ನಾಟಕದ ಜನರ ಮನೆ ಮಾತಾಗಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಣ್ಣ ಅವಘಡ ನಡೆದಿದೆ. ಪುಟ್ಟಕ್ಕನ ಪಾತ್ರ ಮಾಡುತ್ತಿರುವ ಹಿರಿಯ ನಟಿ ಉಮಾಶ್ರೀ ಅವರಿಗೆ ಚಿತ್ರೀಕರಣದ ವೇಳೆ ಗಾಯವಾಗಿದೆ. ಮೇಕೆದಾಟು ಪಾದಯಾತ್ರೆ ಮುಗಿಸಿಕೊಂಡು ಇಂದು ಶೂಟಿಂಗ್ನಲ್ಲಿ ಭಾಗಿಯಾಗಿದ್ದ ನಟಿ ಉಮಾಶ್ರೀ ಅವರ ಕಾಲಿನ ಮೇಲೆ ಬಿಸಿ ನೀರು ಬಿದ್ದಿದೆ. ಕೂಡಲೇ ಅವರನ್ನ ತಲಘಟ್ಟಪುರದ ಶಂಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇಂದು ಬೆಳಗ್ಗೆ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ಉಮಾಶ್ರೀ ಅವರು ತಮ್ಮ ಸೀನ್ ಮುಗಿಸಿಕೊಂಡು ಕುಳಿತ್ತಿದ್ದರು. ಈ ವೇಳೆ ಇನ್ನೊಂದು ಸೀನ್ ಚಿತ್ರೀಕರಣ ವೇಳೆ ಮಕ್ಕಳ ಪಾತ್ರ ಮಾಡುತ್ತಿರುವ ನಟಿಯರಿಗೆ ಬಿಸಿ ನೀರನ್ನ ಹೇಗೇ ಕೆಳಗೆ ಸುರಿಯಬೇಕು ಅಂತಾ ಹೇಳಿಕೊಡಲು ಮುಂದಾದರು. ಈ ವೇಳೆ, ಬಿಸಿ ನೀರು ಅವರ ಎರಡು ಕಾಲಿನ ಪಾದಗಳ ಮೇಲೆ ಬಿದ್ದಿದೆ. ಸದ್ಯ ಚಿಕಿತ್ಸೆ ಪಡೆದಿರುವ ನಟಿ ಉಮಾಶ್ರೀ, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.