ಮ್ಯೂಟಂಟ್ ಒಮಿಕ್ರಾನ್ ವರವೋ? ಶಾಪವೋ? ಹೀಗೊಂದು ಪ್ರಶ್ನೆ ವೈಜ್ಞಾನಿಕ ಲೋಕದಲ್ಲಿ ಹುಟ್ಟಿಕೊಂಡಿದೆ. ಈ ಪ್ರಶ್ನೆ ಹುಟ್ಟಿಹಾಕಿದ್ದು ಮತ್ಯಾರು ಅಲ್ಲ, ಈ ರೂಪಾಂತರಿ ವೈರಸ್. ಹೌದು, ಸುಮಾರು 50ಕ್ಕೂ ಅಧಿಕಬಾರಿ ಮ್ಯೂಟಂಟ್ ಆಗಿರುವ ವೈರಸ್ ಇದು. ಹೀಗಾಗಿ ಅತಿ ವೇಗವಾಗಿ ಹರಡುವ ಆತಂಕ ಮೂಡಿಸಿದೆ ಈ ಒಮಿಕ್ರಾನ್. ಹೀಗಿದ್ದೂ ಇದು ವರ ಹೇಗೆ ಆಗಬಹುದು ಎಂಬ ಪ್ರಶ್ನೆ? ಮೂಡಿದೆ.
ಸಾಮಾನ್ಯವಾಗಿ ಒಂದು ಮ್ಯೂಟಂಟ್ ಬಂದರೆ ಇನ್ನೊಂದಕ್ಕೆ ಬ್ರೇಕ್ ಬೀಳುತ್ತದೆ. ಮತ್ತೊಂದು ಮ್ಯೂಟಂಟ್ನ ಮಟ್ಟ ಹಾಕುವ ಹೊಸ ರೂಪಾಂತರಿ ಕಾಣಿಸಿಕೊಳ್ಳುತ್ತದೆ. ಇಂದು ಅಮೆರಿಕಾ ಸೇರಿ, ಹಲವಾರು ರಾಷ್ಟ್ರಗಳಲ್ಲಿ ಕೊರೊನಾ ಡೆಲ್ಟಾ ವೇರಿಯಂಟ್ ಅತಿ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ.
ಅಮೆರಿಕಾದಲ್ಲಿ ಪ್ರತಿನಿತ್ಯ ಸರಾಸರಿ 1 ಲಕ್ಷ ಕೇಸ್ಗಳು ದಾಖಲಾಗುತ್ತಿವೆ. ಪ್ರತಿ ನಿತ್ಯ ಸುಮಾರು 1000ಕ್ಕೂ ಅಧಿಕ ಜನರ ಸಾವು ಕೇಸ್ ರಿಪೋರ್ಟ್ ಆಗುತ್ತಿದೆ. ಜರ್ಮನಿಯಲ್ಲೂ 60-70 ಸಾವಿರ ಕೇಸ್ಗಳು ಪ್ರತಿನಿತ್ಯ ದಾಖಲಾಗುತ್ತಿವೆ.
ಇದನ್ನೂ ಓದಿ: BREAKING News: ಹೊಸ ವೈರಸ್ ಒಮಿಕ್ರಾನ್ ಬಹಳ ಅಪಾಯಕಾರಿ; ವಿಶ್ವ ಆರೋಗ್ಯ ಸಂಸ್ಥೆ
ಇಂಗ್ಲೆಂಡ್, ಫ್ರಾನ್ಸ್ಗಳಲ್ಲೂ ಕಾಡುತ್ತಿದೆ ಈ ಡೆಲ್ಟಾ ವೇರಿಯಂಟ್. ಒಮಿಕ್ರಾನ್ ಕಡೆ ಆಸೆಯಿಂದ ನೋಡುತ್ತಿದ್ದಾರೆ ವಿಜ್ಞಾನಿಗಳು. ಡೆಲ್ಟಾ ವೇರಿಯಂಟ್ ಅನ್ನ ಮಟ್ಟಹಾಕುತ್ತ್ತಾ ಒಮಿಕ್ರಾನ್? ಈ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ ವಿಜ್ಞಾನಿಗಳು. ಹಾಗಂತ ಒಮಿಕ್ರಾನ್ ಹೆಚ್ಚು ತೊಂದರೆ ಮಾಡಿದ್ರೆ ಹೇಗೆ? ಈ ಬಗ್ಗೆ ಕೂಡ ಅಧ್ಯಯನ ಭರದಿಂದ ಸಾಗಿದೆ.
ಒಮಿಕ್ರಾನ್ ಬಗ್ಗೆ ವಿಜ್ಞಾನಿಗಳು ಹೇಳೋದೇನು?
ದಕ್ಷಿಣ ಆಫ್ರಿಕಾದಿಂದ ಬಂದಿರುವ ಡಾಟಾಗಳನ್ನು ಪರಿಶೀಲಿಸಿದಾಗ ಪ್ರಾರಂಭಿಕ ತನಿಖೆಯಲ್ಲಿ ಒಮಿಕ್ರಾನ್ ಅತಿ ವೇಗವಾಗಿ ಹರಡುತ್ತೆ ಆದ್ರೆ ಅದರ ಅಪಾಯಕಾರಿ ಮಟ್ಟ ಕಡಿಮೆ ಇದೆ ಅನ್ನೋದು ತಿಳಿದು ಬರುತ್ತೆ ಅಂತಾ ವಿಜ್ಞಾನಿಗಳು ಹೇಳಿದ್ದಾರೆ. ವೈರಾಲಜಿಸ್ಟ್ ಆಗಿರುವ ಮಾರ್ಕ್ ವ್ಯಾನ್ ರಾನ್ಸ್ಟ್ ಅವರು ಈ ಮಾಹಿತಿ ನೀಡಿದ್ದು, ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆ ಎಂದು ತಿಳಿಸಿದ್ದಾರೆ. ಅಲ್ಲದೇ ಒಮಿಕ್ರಾನ್ ವೇಗವಾಗಿ ಹರಡೋದ್ರಿಂದ ಇದರ ಕ್ಲಿನಿಕಲ್ ಡಾಟಾ ಬಗ್ಗೆ ಇಡೀ ಜಗತ್ತು ನಿಗಾ ವಹಿಸಬೇಕು. ಒಂದು ವೇಳೆ ಇದು ಕಡಿಮೆ ಅಪಾಯಕಾರಿ ಎಂದು ಕಂಡು ಬಂದಲ್ಲಿ ಖಂಡಿತವಾಗಿಯೂ ಇದು ವರವೇ ಆಗಿದೆ. ಯಾಕಂದ್ರೆ ಇದು ವೇಗವಾಗಿ ಹರಡುವ ಕಾರಣದಿಂದಾಗಿ ಇಂದು ವಿಶ್ವವನ್ನು ಕಾಡುತ್ತಿರುವ ಡೆಲ್ಟಾ ವೇರಿಯಂಟ್ ಅನ್ನ ನಿಯಂತ್ರಿಸಬಹುದು ಎಂದು ಅವರು ಹೇಳಿದ್ದಾರೆ.
The post Exclusive: ಮ್ಯೂಟಂಟ್ ಒಮಿಕ್ರಾನ್ ವರವೋ? ಶಾಪವೋ?; ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್ appeared first on News First Kannada.