Fact Check ಥೀಮ್ ಏನು? ಏನು ಹೇಳ್ಬೇಕು? ಎಂದು ರಾಹುಲ್ ಗಾಂಧಿ ಕೇಳುತ್ತಿರುವ ವಿಡಿಯೊ ಚಿಂತನ್ ಶಿವಿರ್​​ದ್ದು ಅಲ್ಲ | FactCheck video showing Rahul Gandhi asking What is the main theme today is not from Udaipur Chintan Shivir


Fact Check ಥೀಮ್ ಏನು? ಏನು ಹೇಳ್ಬೇಕು? ಎಂದು ರಾಹುಲ್ ಗಾಂಧಿ ಕೇಳುತ್ತಿರುವ ವಿಡಿಯೊ ಚಿಂತನ್ ಶಿವಿರ್​​ದ್ದು ಅಲ್ಲ

ರಾಹುಲ್ ಗಾಂಧಿ ವೈರಲ್ ವಿಡಿಯೊ

Rahul Gandhi ಕಾಂಗ್ರೆಸ್ ನಾಯಕ ರಾಹುಲ್ ಮೇ 6 ರಂದು ತೆಲಂಗಾಣಕ್ಕೆ ಭೇಟಿ ನೀಡಿದ್ದರು ಮತ್ತು ವಾರಂಗಲ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ರ್ಯಾಲಿಗೂ ಮುನ್ನ ಈ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆ.

ಥೀಮ್ ಏನು? ನಿಖರವಾಗಿ ಏನು ಹೇಳಬೇಕಾಗಿರುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೇಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ರಾಜಸ್ಥಾನದ ಉದಯಪುರದಲ್ಲಿ (Udaipur) ಇತ್ತೀಚೆಗೆ ಮುಕ್ತಾಯಗೊಂಡ ಕಾಂಗ್ರೆಸ್ ಚಿಂತನ್ ಶಿವಿರ್ (Chintan Shivir)  (ಚಿಂತನಾ ಶಿಬಿರ)ದ್ದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ಜನರ ಗುಂಪಿನೊಂದಿಗೆ ಮಾತನಾಡುತ್ತಿರುವ ವಿಡಿಯೊ ಇದಾಗಿದೆ. ಇದರಲ್ಲಿ ಅವರು “ಇಂದಿನ ಮುಖ್ಯ ವಿಷಯ ಯಾವುದು? ಥೀಮ್ ಏನು? ನಿಖರವಾಗಿ ಏನು ಹೇಳಬೇಕು? ಎಂದು ಕೇಳುತ್ತಿದ್ದಾರೆ. 17 ಸೆಕೆಂಡ್ ಅವಧಿಯ ವಿಡಿಯೊ ಕ್ಲಿಪ್ ಅನ್ನು ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆ ಶೀರ್ಷಿಕೆ ಹೀಗಿದೆ: ‘ಚಿಂತನ್ ಶಿವಿರ್‌ನಲ್ಲಿ, ರಾಜಕುಮಾರನಿಗೆ ಮೊದಲು ವಿಷಯದ ಬಗ್ಗೆ ತಿಳಿಸಲಾಗಿದೆ. ಯಾವಾಗ ಮತ್ತು ಎಲ್ಲಿ ಹೇಳಬೇಕೆಂದು ವಿವರಿಸಲಾಗಿದೆ. ಅವರು ದೇಶದ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಹಲವಾರು ನೆಟ್ಟಿಗರು ಫೇಸ್​​ಬುಕ್ ಮತ್ತು ಟ್ವಿಟರ್​​ನಲ್ಲಿ ಈ ವಿಡಿಯೊ ಶೇರ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಮೇ 13 ಮತ್ತು ಮೇ 15 ರ ನಡುವೆ ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ಚಿಂತನ್ ಶಿವಿರ್​​ನ್ನು ನಡೆಸಿತು. ಮಾಧ್ಯಮ ವರದಿಗಳ ಪ್ರಕಾರ, ಹಲವಾರು ಕಾಂಗ್ರೆಸ್ ನಾಯಕರ ಉಪಸ್ಥಿತಿಯನ್ನು ಕಂಡ ಸಮಾರಂಭದಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಫ್ಯಾಕ್ಟ್ ಚೆಕ್
ಈ ವೈರಲ್ ವಿಡಿಯೊವನ್ನು ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್ ಈ ವಿಡಿಯೊ ಇತ್ತೀಚೆಗೆ ನಡೆಸಲಾದ ಉದಯಪುರ ಚಿಂತನ್ ಶಿವಿರ್‌ನದ್ದಲ್ಲ. ಮೇ ತಿಂಗಳಲ್ಲಿ ರಾಹುಲ್ ಗಾಂಧಿಯವರ ತೆಲಂಗಾಣ ಭೇಟಿಯದ್ದು ಎಂದು ಪತ್ತೆ ಹಚ್ಚಿದೆ. ಕಾಂಗ್ರೆಸ್ ನಾಯಕ ರಾಹುಲ್ ಮೇ 6 ರಂದು ತೆಲಂಗಾಣಕ್ಕೆ ಭೇಟಿ ನೀಡಿದ್ದರು ಮತ್ತು ವಾರಂಗಲ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ರ್ಯಾಲಿಗೂ ಮುನ್ನ ಈ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಮೇ 7, 2022 ರಿಂದ ಅದೇ ವಿಡಿಯೊವನ್ನು ಹೊಂದಿರುವ ಇಂಡಿಯಾ ಟುಡೇ  ವರದಿಯೂ ಫ್ಯಾಕ್ಟ್ ಚೆಕ್ ವೇಳೆ ಸಿಕ್ಕಿದೆ. ವಿಡಿಯೊದ ಶೀರ್ಷಿಕೆ ” Kya Bolna Hai’: Rahul Gandhi Once Again In Spotlight Over Candid Video, BJP Attacks Congress MP ಎಂದಿದೆ.
ಇಂಡಿಯಾ ಟುಡೇ ವರದಿಯ ಪ್ರಕಾರ, ಗಾಂಧಿ ತಮ್ಮ ರ್ಯಾಲಿಗೆ ಮುನ್ನ ತೆಲಂಗಾಣ ಕಾಂಗ್ರೆಸ್ ನಾಯಕರೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೊ ಇದಾಗಿದೆ.ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕರ ರ್ಯಾಲಿಗೂ ಮುನ್ನ ಪರಿಶೀಲಿಸದ ವಿಡಿಯೊವನ್ನು ಟ್ವೀಟ್ ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ. ರೆಕಾರ್ಡಿಂಗ್ ನಿಲ್ಲಿಸುವಂತೆ ಜನರನ್ನು ಕೇಳುವ ಮೊದಲು, ವಾಟ್ ಈಸ್ ದ ಮೈನ್ ಥೀಮ್ ಟುಡೇ, ಕ್ಯಾ ಥೀಮ್ ಕ್ಯಾ ಹೈ, ಎಕ್ಸ್ಯಾಟ್ಲೀ ಕ್ಯಾ ಬೋಲ್ನಾ ಹೈ ಎಂದು ರಾಹುಲ್ ಗಾಂಧಿ ಹೇಳುವುದನ್ನು ಕೇಳಬಹುದಾಗಿದೆ. ವಿಡಿಯೊವನ್ನು ನಿಜವಾಗಿ ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಲು ಬೂಮ್​​ಗೆ ಸಾಧ್ಯವಾಗಲಿಲ್ಲ .ಆದರೆ ವೈರಲ್ ವೀಡಿಯೊ ಕಾಂಗ್ರೆಸ್ ಚಿಂತನ್ ಶಿವಿರ್​​ದ್ದಲ್ಲ ಎಂಬುದು ಖಚಿತ.

ಹೆಚ್ಚಿನ ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

TV9 Kannada


Leave a Reply

Your email address will not be published. Required fields are marked *